ಗರಿಗಳನ್ನು ಬಿಚ್ಚಿ ಕುಣಿಯುವ ನವಿಲನ್ನು ನೀವು ನೋಡಿದಾಗ, ಮತ್ತೆ ಮತ್ತೆ ಅದನ್ನು ನೋಡಬೇಕು ಅನ್ನಿಸದೇ ಇರದು. ಅಂತಹ ಸುಂದರವಾದ ನವಿಲಿನ ಮೇಲೆ ದಾಳಿ ಮಾಡಲು ಯಾರೂ ಯೋಚಿಸುವುದಿಲ್ಲ. ಇದು ಮನುಷ್ಯರಿಗೆ ಸರಿ ಆದರೆ ಪ್ರಾಣಿಗಳಿಗೆ ಅಲ್ಲ. ಸಹಜವಾಗಿ, ಇದು ಕಾಡು ಪ್ರಾಣಿಯಾದ ಹುಲಿಗಂತೂ ಬಿಲ್ ಕುಲ್ ಅನ್ವಯಿಸಲ್ಲ. ಕಣ್ಣೆದುರು ಮನುಷ್ಯರಿದ್ದರೂ, ಪ್ರಾಣಿ, ಪಕ್ಷಿ ಇದ್ದರೂ ಅವು ದಾಳಿ ಮಾಡಲು ಯತ್ನಿಸುತ್ತವೆ. ಹುಲಿ ದಾಳಿಯ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ. ನಾವು ಸಾಮಾನ್ಯವಾಗಿ ಪ್ರಾಣಿಗಳ ಮೇಲೆ ಹುಲಿ ದಾಳಿಯ ವೀಡಿಯೊಗಳನ್ನು ನೋಡುತ್ತಿರುತ್ತೇವೆ.
ಆದರೆ ಸುಂದರವಾದ ನವಿಲಿನ ಮೇಲೆ ಪಕ್ಷಿಗಳು ದಾಳಿ ಮಾಡುವುದನ್ನು ನಾವು ಅಪರೂಪವಾಗಿ ನೋಡುತ್ತೇವೆ. ಸದ್ಯ ಹುಲಿ ನವಿಲಿನ ಮೇಲೆ ದಾಳಿ ಮಾಡಿರುವ ವಿಡಿಯೋ ವೈರಲ್ ಆಗಿದೆ. ಆದರೆ ಕೊನೆಯಲ್ಲಿ ಇದಕ್ಕೆ ಅನಿರೀಕ್ಷಿತ ಟ್ವಿಸ್ಟ್ ಇದೆ.
ಹುಲಿಯೊಂದು ನವಿಲಿನ ಮೇಲೆ ದಾಳಿ ಮಾಡುವ ವಿಡಿಯೋ (ಟೈಗರ್ ಪೀಕಾಕ್ ವಿಡಿಯೋಗಳು) ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಕೆಲವು ನವಿಲುಗಳು ಕಾಡಿನಲ್ಲಿ ಆಹಾರ ಸೇವಿಸುತ್ತಿದ್ದವು. ಸ್ವಲ್ಪ ಸಮಯದ ನಂತರ, ಅವುಗಳ ನಡುವೆ ಇದ್ದ ದೊಡ್ಡ ಗಂಡು ನವಿಲು ಇದ್ದಕ್ಕಿದ್ದಂತೆ ತನ್ನ ಗರಿಯನ್ನು ಬಿಚ್ಚಿ ನೃತ್ಯ ಮಾಡುತ್ತದೆ. ಅಲ್ಲಿದ್ದ ಪ್ರವಾಸಿಗರು ಈ ದೃಶ್ಯವನ್ನು ತಮ್ಮ ಕ್ಯಾಮೆರಾದಲ್ಲಿ ಸೆರೆ ಹಿಡಿದಿದ್ದಾರೆ. ಆದರೆ ಇಲ್ಲಿ ಅನಿರೀಕ್ಷಿತ ಘಟನೆ ನಡೆದಿತ್ತು.
ನವಿಲಿನ ಹಿಂಭಾಗದ ಪೊದೆಯಲ್ಲಿ ಹೊಂಚು ಹಾಕಿ ಕುಳಿತಿದ್ದ ದೊಡ್ಡ ಹುಲಿಯೊಂದು ಸುಂದರವಾಗಿ ಗರಿ ಬಿಚ್ಚಿಕೊಂಡು ನೃತ್ಯ ಮಾಡುತ್ತಿದ್ದ ನವಿಲನ್ನು ಹಿಡಿಯಲು ದಾಳಿ ಮಾಡಿತ್ತು. ನವಿಲು ಹತ್ತಿರ ಬಂದು ಹುಲಿಯು ಕಾಲಿನಿಂದ ಪಂಜ ಬೀಸುತ್ತಿದ್ದಂತೆ ನವಿಲು ತಕ್ಷಣ ಜಾಗೃತವಾಗುತ್ತದೆ. ಕೂಡಲೇ ಗರಿಬಿಚ್ಚಿ ನಿಂತಿದ್ದ ಗಂಡು ನವಿಲು ಗಾಳಿಯಲ್ಲಿ ರೆಕ್ಕೆಗಳನ್ನು ಬಡಿಯುತ್ತಾ ಹಾರುತ್ತಿದ್ದರೆ, ಸಣ್ಣ ಮರಿ ನವಿಲುಗಳೂ ದೊಡ್ಡ ನವಿಲನ್ನು ಹಿಂಬಾಲಿಸುತ್ತವೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ಬಗ್ಗೆ ನೆಟಿಜನ್‌ಗಳು ವಿಭಿನ್ನ ರೀತಿಯಲ್ಲಿ ಕಾಮೆಂಟ್ ಮಾಡುತ್ತಿದ್ದಾರೆ.