ಬೆಂಗಳೂರು, ಮಾ.2 www.bengaluruwire.com : ರಾಜಧಾನಿ ಬೆಂಗಳೂರಿನ ಸ್ಥಳೀಯ ಆಡಳಿತ ನಡೆಸುತ್ತಿರುವ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ 2023-24ನೇ ಸಾಲಿನ ಆಯವ್ಯಯ ಇಂದು ಮಂಡನೆಯಾಗುತ್ತಿದೆ. ಬಜೆಟ್ ಮಂಡನೆಯ ನೇರ ಪ್ರಸಾರವನ್ನು ಬೆಂಗಳೂರು ವೈರ್ ನಲ್ಲಿ ನೋಡಬಹುದಾಗಿದೆ.
ನಗರದ ಸರ್.ಪುಟ್ಟಣ್ಣ ಚೆಟ್ಟಿ ಪುರಭವನ (Town Hall) ದಲ್ಲಿ ಆಡಳಿತಗಾರರು ಆದ ರಾಕೇಶ್ ಸಿಂಗ್ ಅಧ್ಯಕ್ಷತೆ ಹಾಗೂ ಮುಖ್ಯ ಆಯುಕ್ತರಾದ ತುಷಾರ್ ಗಿರಿ ನಾಥ್ ರವರ ಉಪಸ್ಥಿತಿಯಲ್ಲಿ, ಹಣಕಾಸು ವಿಭಾಗದ ವಿಶೇಷ ಆಯುಕ್ತರಾದ ಜಯರಾಮ್ ರಾಯಪುರ ಮಂಡಿಸುತ್ತಿದ್ದಾರೆ. ನಗರದ ಬಿಬಿಎಂಪಿ 2023-24ನೇ ಸಾಲಿನ ಆಯವ್ಯಯ ಅಂದಾಜು ಮಂಡನೆಯು ಪಾಲಿಕೆಯ ವೆಬ್ ಸೈಟ್ https://bbmp.gov.in ನಲ್ಲಿಯೂ ವೀಕ್ಷಿಸಬಹುದಾಗಿದೆ.
ಸಾರ್ವತ್ರಿಕ ವಿಧಾನಸಭಾ ಚುನಾವಣೆ ಹಿನ್ನಲೆಯಲ್ಲಿ ರಾಜಧಾನಿ ಬೆಂಗಳೂರಿನ ಸಮಗ್ರ ಅಭಿವೃದ್ಧಿಗಾಗಿ ರಾಜ್ಯ ಸರ್ಕಾರವು 2023-24ರ ಆಯವ್ಯಯದಲ್ಲಿ ಒಟ್ಟಾರೆ 9,698 ಕೋಟಿ ರೂ. ಹಣ ಬಿಡುಗಡೆ ಮಾಡಿತ್ತು. ಈ ಬಾರಿ ಬಿಬಿಎಂಪಿಯಲ್ಲಿ 11 ಸಾವಿರ ಕೋಟಿ ರೂ. ಆಸುಪಾಸಿನಲ್ಲಿ ಬಜೆಟ್ ಗಾತ್ರ ವಿರಲಿದೆ. ಆರೋಗ್ಯ, ಶಿಕ್ಷಣ, ಕಾಮಗಾರಿಗಳ ನಿರ್ವಹಣೆಗೆ ಆದ್ಯತೆ ಹಾಗೂ ವಿಧಾನಸಭಾ ಚುನಾವಣೆ ಹಿನ್ನಲೆಯಲ್ಲಿ ಜನಪ್ರಿಯ ಬಜೆಟ್ ಮಂಡನೆಯಾಗುವ ನಿರೀಕ್ಷೆಯಿದೆ.
“ಬೆಂಗಳೂರು ವೈರ್” ಡಿಜಿಟಲ್ ವೆಬ್ ನ್ಯೂಸ್ ಪೋರ್ಟೆಲ್ಲಿನ ಸೋಶಿಯಲ್ ಮೀಡಿಯಾ ಪೇಜ್ ಹಾಗೂ Google News ಗಳಿಗೆ ಉಚಿತವಾಗಿ Subscribe ಆಗಲು Facebook, Telegram, Twitter, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.