ನವದೆಹಲಿ, ಮಾ.1 www.bengaluruwire.com : ಗೃಹ ಬಳಕೆಯ 14.2 ಕೆ.ಜಿ ತೂಕದ ಗ್ಯಾಸ್ ಸಿಲಿಂಡರ್ (LPG) ಬೆಲೆಯನ್ನು 50 ರೂ. ಹೆಚ್ಚಿಸಲಾಗಿದೆ. ಹೊಸ ದರ ಇಂದಿನಿಂದಲೇ (ಮಾ.1) ಜಾರಿಗೆ ಬಂದಿದೆ.
ನೂತನ ದರ ಏರಿಕೆಯಿಂದ ಒಂದು ಗ್ಯಾಸ್ ಸಿಲಿಂಡರ್ ಬೆಲೆ ದೆಹಲಿಯಲ್ಲಿ 1,103 ರೂ. ಆಗಲಿದೆ. ಹಾಗೆಯೇ 19 ಕೆ.ಜಿ ತೂಕದ ಗ್ಯಾಸ್ ಸಿಲಿಂಡರ್ ಬೆಲೆಯನ್ನು 350 ರೂ.ಗಳಷ್ಟು ಏರಿಸಲಾಗಿದೆ. ಇದರಿಂದಾಗಿ 19 ಕೆ.ಜಿ ತೂಕದ ವಾಣಿಜ್ಯ ಬಳಕೆ ಸಿಲಿಂಡರ್ ಬೆಲೆ ಇದೀಗ 2,119.50 ರೂ. ತಲುಪಿದೆ.
ಎಲ್‌ಪಿಜಿ ಸಿಲಿಂಡರ್ ಬೆಲೆ ರಾಜ್ಯದಿಂದ ರಾಜ್ಯಕ್ಕೆ ಸ್ಥಳೀಯ ತೆರಿಗೆ ಅನ್ವಯವಾಗಿ ಅಲ್ಪಸ್ವಲ್ಪ ವ್ಯತ್ಯಾಸವಿರಲಿದೆ. ರಿಟೇಲರ್‌ಗಳು ಪ್ರತಿ ತಿಂಗಳ ಆರಂಭದಲ್ಲಿ ಸಿಲಿಂಡರ್ ಬೆಲೆಯಲ್ಲಿ ಪರಿಷ್ಕರಣೆ ಮಾಡುತ್ತಾರೆ. ಪ್ರತಿ ಗ್ರಾಹಕನಿಗೂ ವರ್ಷಕ್ಕೆ 12 ಸಿಲಿಂಡರ್‌ಗಳು ಸಬ್ಸಿಡಿ ದರದಲ್ಲಿ ಲಭ್ಯವಿರುತ್ತದೆ.
ಬೆಂಗಳೂರಿನಲ್ಲಿ ಗ್ಯಾಸ್ ರೇಟ್ 1,105.50 ರೂ.:
ಬೆಂಗಳೂರಿನಲ್ಲಿ 14.2 ಕೆ.ಜಿ ತೂಕದ ಎಲ್ ಪಿಜಿ ಸಿಲೆಂಡರ್ ದರ 1,055.50 ರೂ.ನಷ್ಟಿತ್ತು. ನೂತನ ದರ ಏರಿಕೆಯಿಂದಾಗಿ ಈ ದರವೀಗ 1,105.50 ರೂ.ನಷ್ಟಾಗಿದೆ. ಜನವರಿ 2018ರಲ್ಲಿ ಈ ಸಿಲೆಂಡರ್ ದರ ಬೆಂಗಳೂರಿನಲ್ಲಿ 738 ರೂ.ನಷ್ಟಿತ್ತು. 2019ರ ಜನವರಿಯಲ್ಲಿ ಈ ದರವು ಕೊಂಚ ಕುಸಿದು 690.44 ರೂ.ನಷ್ಟಿತ್ತು. 2020ರ ಜನವರಿಯಲ್ಲಿ 717 ರೂ.ನಷ್ಟಾಗಿತ್ತು. ಇನ್ನು 2021ರ ಜನವರಿಯಲ್ಲಿ ಈ ದರವು 697 ರೂ.ನಷ್ಟಾಗಿತ್ತು. ಇನ್ನು 2022ರ ಜನವರಿ ವೇಳೆ ಸಿಲೆಂಡರ್ ದರವು 902.50 ರೂ.ನಷ್ಟಾಗಿತ್ತು. 2022ರ ಏಪ್ರಿಲ್ ನಲ್ಲಿ ಎಲ್ ಪಿಜಿ ದರ ಏರಿಕೆ ಏರುಗತಿಯಲ್ಲಿ ಸಾಗಿದ್ದು, ಅದೇ ವರ್ಷದ ಮೇ ತಿಂಗಳಿನಲ್ಲಿ ಒಂದು ಸಾವಿರ ರೂ. ಗಡಿಯನ್ನು ದಾಟಿದ ಎಲ್ ಪಿಜಿ ದರವು 1,005.50 ರೂ.ನಷ್ಟಾಗಿತ್ತು. ಬಳಿಕ ಆ ದರ 1,055 ರೂ.ನಷ್ಟಾಗಿತ್ತು. ಇಂದಿನಿಂದ ಸಿಲಿಕಾನ್ ಸಿಟಿಯಲ್ಲಿ ಎಲ್ ಪಿಜಿ ದರ 1,105.50 ರೂ ರೂ.ನಷ್ಟಾಗಿದೆ.
“ಬೆಂಗಳೂರು ವೈರ್” ಡಿಜಿಟಲ್ ವೆಬ್ ನ್ಯೂಸ್ ಪೋರ್ಟೆಲ್ಲಿನ ಸೋಶಿಯಲ್ ಮೀಡಿಯಾ ಪೇಜ್ ಹಾಗೂ Google News ಗಳಿಗೆ ಉಚಿತವಾಗಿ Subscribe ಆಗಲು Facebook, Telegram, Twitter, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.