ಬೆಂಗಳೂರು, ಫೆ.28 www.bengaluruwire.com : ಕಾಡಿನಲ್ಲಿ ಸ್ವತಂತ್ರವಾಗಿ ವಿಹರಿಸುತ್ತಿದ್ದ ನರಿಯನ್ನು ಅಕ್ರಮವಾಗಿ ಹಿಡಿದು ಸಾಕಿದ್ದ ಆರೋಪಿಯನ್ನು ಅರಣ್ಯ ಅಧಿಕಾರಿಗಳು ಬಂಧಿಸಿದ್ದಾರೆ. ಲಕ್ಷ್ಮಿಕಾಂತ್ (42) ಬಂಧಿತ ಆರೋಪಿ.
ಬಂಧಿತ ಆರೋಪಿ ಲಕ್ಷ್ಮಿಕಾಂತ್ ಏಳು ತಿಂಗಳ ಹಿಂದೆ ನರಿಯನ್ನು ಅರಣ್ಯದಿಂದ ಹಿಡಿದು ತಂದಿದ್ದ. ಬಳಿಕ ತನ್ನ ಕೋಳಿ ಫಾರಂನ ಪಂಜರದಲ್ಲಿ ನರಿಯನ್ನು ಸಾಕಿಕೊಂಡಿದ್ದ.
ಬಂಧಿತ ಆರೋಪಿಯು ತುಮಕೂರು ಜಿಲ್ಲೆಯ ನಾಗವಲ್ಲಿ ಗ್ರಾಮದ ನಿವಾಸಿಯಾಗಿದ್ದಾನೆ.
ಇನ್ನು ಈ ವಿಷಯ ತಿಳಿದ ಕೂಡಲೇ ಸ್ಥಳಕ್ಕೆ ಧಾವಿಸಿದ ಸಿಐಡಿ ಅರಣ್ಯ ಘಟಕದ ಸಿಬ್ಬಂದಿ ವನ್ಯಜೀವಿ ಸಂರಕ್ಷಣಾ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನ ಬಂಧಿಸಿದ್ದಾರೆ. ಅರಣ್ಯ ಸಿಬ್ಬಂದಿ ಪೊಲೀಸರು, ಪಂಜರದಲ್ಲಿ ಬಂಧಿಯಾಗಿದ್ದ ನರಿಯನ್ನ ಮರಳಿ ಕಾಡಿಗೆ ಬಿಟ್ಟಿದ್ದಾರೆ.
ಪ್ರತಿನಿತ್ಯ ನರಿ ಮುಖ ನೋಡಿದ್ರೆ ಒಳ್ಳೆದಾಗುತ್ತೆ ಅನ್ನೋ ಮಾತನ್ನು ಕೇಳಿಸಿಕೊಂಡಿದ್ದ. ಅದೇ ಕಾರಣಕ್ಕೇ ಕಾಡಿನಿಂದ ನರಿಯನ್ನು ಈ ಭೂಪ ಹಿಡಿದುಕೊಂಡು ತಂದಿದ್ದ ಎಂದು ಎನ್ನಲಾಗಿದೆ. ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ, ಹೆಚ್ಚಿನ ವಿಚಾರಣೆಗೆ 15 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ.