ಬೆಂಗಳೂರು, ಫೆ.25 www.bengaluruwire.com : ನಗರದಲ್ಲಿ ಕಾವೇರಿ 1, 2 ಮತ್ತು ಮೂರನೇ ಹಂತದಿಂದ ನೀರು ಪೂರೈಕೆಯಾಗುವ ಪ್ರದೇಶಗಳಲ್ಲಿ ಫೆ.26ರಂದು ಕಾವೇರಿ ನೀರು ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ ಎಂದು ಬೆಂಗಳೂರು ಜಲಮಂಡಳಿ ತಿಳಿಸಿದೆ.
ಟಿ.ಕೆ. ಹಳ್ಳಿ, ಹಾರೋಹಳ್ಳಿ ಮತ್ತು ತಾತಗುಣಿಯಲ್ಲಿನ ಕಾವೇರಿ 1, 2 ಮತ್ತು 3ನೇ ಹಂತದ ಯಂತ್ರಗಾರಗಳ ದುರಸ್ತಿ ಕಾರ್ಯ ಕೈಗೊಳ್ಳಲಾಗಿದೆ. ಜತೆಗೆ, ಟಿ.ಕೆ. ಹಳ್ಳಿಯಲ್ಲಿ ಕೆಪಿಟಿಸಿಎಲ್ ವತಿಯಿಂದ ವಿದ್ಯುತ್ ಸ್ಥಾವರಗಳ ತುರ್ತು ನಿರ್ವಹಣೆ, ಕಾರ್ಯಗಳನ್ನು ಕೈಗೊಳ್ಳುವುದರಿಂದ ಫೆ.26ರಂದು ಬೆಳಗ್ಗೆ 9 ರಿಂದ ಸಂಜೆ 4 ಗಂಟೆಯವರೆಗೆ ನೀರು ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ ಎಂದು ಬೆಂಗಳೂರು ಜಲಮಂಡಳಿ ತಿಳಿಸಿದೆ.
ನೇತಾಜಿ ನಗರ, ಆನಂದಪುರ, ಚಾಮರಾಜಪೇಟೆ, ವಾಲ್ಮೀಕಿ ನಗರ, ಶ್ರೀನಿವಾಸ ನಗರ, ವಿದ್ಯಾಪೀಠ, ಐಟಿಐ ಲೇಔಟ್, ವಿವೇಕಾನಂದ ತ್ಯಾಗರಾಜ ನಗರ, ಬಸವನಗುಡಿ, ಕಾಲೊನಿ, ಅಶೋಕ್ ನಗರ, ಶ್ರೀನಗರ, ಬೃಂದಾವನನಗರ, ಸುಂಕೇನಹಳ್ಳಿ, ಶಾಂತಲಾ ನಗರ, ಅಂಬೇಡ್ಕರ್ ನಗರ, ನೀಲಸಂದ್ರ, ಎಂ.ಜಿ. ರಸ್ತೆ, – ಬ್ರಿಗೇಡ್ ರಸ್ತೆ, ದೊಮ್ಮಲೂರು, ಚಂದ್ರಪ್ಪ ನಗರ, ಜೋಗಿ ಕಾಲೋನಿ, ಕಸ್ತೂರಬಾ ನಗರ, ವಿ.ವಿ.ಪುರಂ, ಕಲಾಸಿಪಾಳ್ಯ, ಸುಧಾಮನಗರ, ಆದರ್ಶನಗರ, ಟಿಪ್ಪು ನಗರ, ವಿನಾಯಕ ನಗರ, ದ್ವಾರಕ ನಗರ, ರಾಮಂಜನೇಯ ನಗರ, ಆರ್‌ಬಿಐ ಕಾಲೋನಿ, ವಿಲ್ಸನ್ ಗಾರ್ಡನ್, ಎಸ್.ಆರ್.ನಗರ, ಶಾಂತಿ ನಗರ, ಸಂಪಂಗಿ ರಾಮನಗರ, ಗಾಂಧಿನಗರ, ಚಿಕ್ಕಪೇಟೆ, ಶಿವಾಜಿ ನಗರ, ಆರ್.ಟಿ. ನಗರ, ಜೆ.ಸಿ. ನಗರ, ನಾಗಶೆಟ್ಟಿಹಳ್ಳಿ, ಸದಾಶಿವನಗರ, ಮಲ್ಲೇಶ್ವರ ಸೇರಿದಂತೆ ನಗರದ ಬಹುತೇಕ ಸ್ಥಳಗಳಲ್ಲಿ ನೀರು ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ.
ಅದೇ ರೀತಿ ಆಡುಗೋಡಿ, ಕಾವೇರಿ ಸಂಕೀರ್ಣ, ಪೊಲೀಸ್ ಕ್ವಾಟರ್ಸ್, ನೇತ್ರಾವತಿ 1ರಿಂದ 10ನೇ ಬ್ಲಾಕ್ ಗಳು, ಕೆಎಚ್ ಬಿ ಕಾಲೋನಿ, ಕೋರಮಂಗಲ ವಿಲೇಜ್, ಜಯನಗರ 3, 4 ಹಾಗೂ 4ನೇ ಎ ಬ್ಲಾಕ್, ಚಂದ್ರಪ್ಪ ನಗರ, ವೆಂಕಟೇಶ್ವರ ಲೇಔಟ್, ಚಿಕ್ಕ ಆಡುಗೋಡಿ, ಎ.ಕೆ.ಕಾಲೋನಿ, ಭೋವಿ ಕಾಲೋನಿ, ಬ್ಯಾಟರಾಯನಪುರ, ಕಸ್ತೂರಬಾ ನಗರ, ನ್ಯೂ ಗುಡ್ಡದಹಳ್ಳಿ, ಬಾಪೂಜಿ ನಗರ, ವಿವಿ ಪುರ, ಕಲಾಸಿಪಾಳ್ಯ, ಸುಧಾಮನಗರ, ಪಾದರಾಯನಪುರ, ಜೆಜೆ ಆರ್ ನಗರ, ರಾಯಪುರಂ, ಬಿ.ಎಸ್.ಕೆ.2ನೇ ಹಂತ, ಭುವನೇಶ್ವರಿ ನಗರ, ಕೃಷ್ಣಪ್ಪ ಲೇಔಟ್, ಅಶೋಕ್ ನಗರ, ಬನಶಂಕರಿ, ಜೀವನ್ ಭೀಮಾ ನಗರ, ವಸಂತ ನಗರ, ಹೊಸೂರು ರಸ್ತೆ, ಸಂಪಂಗಿರಾಮನಗರ, ಸಿಕೆಸಿ ಗಾರ್ಡನ್, ಕಾಕ್ಸ್ ಟೌನ್, ಇಂದಿರಾನಗರ 2ನೇ ಹಂತ, ಜೋಗುಪಾಳ್ಯ ಸೇರಿದಂತೆ ಸುತ್ತಮುತ್ತಲಿನ ಸ್ಥಳಗಳಲ್ಲಿ ನೀರು ಪೂರೈಕೆಯಲ್ಲಿ ತೊಂದರೆಯಾಗಲಿದೆ ಎಂದು ಜಲಮಂಡಳಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.
