ಬೆಂಗಳೂರು, ಫೆ.17 www.bengaluruwire.com : ಬಿಜೆಪಿ ನೇತೃತ್ವದ ಸರ್ಕಾರದ ಕೊನೆಯ ಹಾಗೂ ವಿಧಾನಸಭಾ ಚುನಾವಣೆ ಹಿನ್ನಲೆಯಲ್ಲಿನ 2023-34 ನೇ ಸಾಲಿನ ಬಜೆಟ್ ಅನ್ನು ಸತತ ಎರಡನೇ ಬಾರಿಗೆ ಮುಖ್ಯಮಂತ್ರಿ ಹಾಗೂ ಹಣಕಾಸು ಸಚಿವರೂ ಆದ ಬಸವರಾಜ ಬೊಮ್ಮಾಯಿ ಕುವೆಂಪು ಅವರ ಕವನದ ಸಾಲುಗಳೊಂದಿಗೆ ಮಂಡಿಸುತ್ತಿದ್ದಾರೆ.
ಈ ಬಜೆಟ್ ಅನ್ನು ಚುನಾವಣಾ ಬಜೆಟ್ ಎನ್ನಲಾಗುತ್ತಿದೆ ಬಿಜೆಪಿ ಪಕ್ಷ ಮುಂದಿನ ಬಾರಿಯೂ ಆಡಳಿತ ಬಯಸಿ ರೈತರು ಸೇರಿದಂತೆ ಎಲ್ಲ ವರ್ಗದವರನ್ನು ಒಳಗೊಳ್ಳುವ 3,09,182 (3.09 ಲಕ್ಷ) ಕೋಟಿ ರೂ. ಗಾತ್ರದ ಮಿಗತೆಯ ಬಜೆಟ್ ಅನ್ನು ಮಂಡಿಸಿದೆ.
ರಾಜ್ಯದ ಅರ್ಥವ್ಯವಸ್ಥೆಯು 2022-23ರಲ್ಲಿ ಶೇ.7.9 ಬೆಳವಣಿಗೆ ದಾಖಲಿಸಿದೆ. ಈ ಕುರಿತಂತೆ ಆರ್ಥಿಕ ಮತ್ತು ಸಾಂಖ್ಯಿಕ ಇಲಾಖೆಯು ಮುಂಗಡ ಅಂದಾಜಿನಲ್ಲಿ ತಿಳಿಸಿದೆ. ರಾಜ್ಯದ ಆರ್ಥಿಕ ಬೆಳವಣಿಗೆ ಕಳೆದ ಸಾಲಿಗೆ ಹೋಲಿಸಿದರೆ ಸೇವಾ (ಶೇ.9.2) ಮತ್ತು ಕೈಗಾರಿಕಾ ವಲಯ (ಶೇ.5.1) ದಾಖಲಿಸಿದೆ ಎಂದು ಹಣಕಾಸು ಸಚಿವರಾದ ಬಸವರಾಜ ಬೊಮ್ಮಾಯಿ ತಮ್ಮ ಬಜೆಟ್ ಭಾಷಣದಲ್ಲಿ ತಿಳಿಸಿದ್ದಾರೆ.
ಕೇಂದ್ರ ಸರ್ಕಾರ ನೇರ ಮತ್ತು ಪರೋಕ್ಷ ತೆರಿಗೆ ಹೆಚ್ಚಳದಿಂದ ರಾಜ್ಯದ ತೆರಿಗೆ ಪಾಲು 4,813 ಕೋಟಿ ರೂ. ಹೆಚ್ಚಾಗಿದೆ. ಕೇಂದ್ರ ಸರ್ಕಾರ 2023-24ನೇ ಸಾಲಿನಲ್ಲಿ ರಾಜ್ಯಕ್ಕೆ 37,252 ಕೋಟಿ ರೂ. ತೆರಿಗೆ ಪಾಲು ಅಂದಾಜಿಸಿದೆ. ಹೀಗಾಗಿ ಕಳೆದ ಸಾಲಿಗೆ ಹೋಲಿಸಿದರೆ ಶೇ.25ರಷ್ಟು ತೆರಿಗೆ ಪಾಲು ಏರಿಕೆಯಾಗಿದೆ. ಈ ಮೂಲಕ ಈ ಬಾರಿ ಕರ್ನಾಟಕ ಆರ್ಥಿಕ ಹೊಣೆಗಾರಿಕೆ ಅಧಿನಿಯಮ ಎಲ್ಲಾ ಮಾನದಂಡ ಪೂರೈಸುವ ಮೂಲಕ ರಾಜಸ್ವ ಹೆಚ್ಚಳದ ಆಯವ್ಯಯ ಮಂಡಿಸುತ್ತಿರುವುದಾಗಿ ಹೇಳಿದರು.
ರೈತರು, ನೀರಾವರಿ ಯೋಜನೆ, ಶಿಕ್ಷಣ, ಆರೋಗ್ಯ – ಮಹಿಳಾ ಮತ್ತು ಮಕ್ಕಳ ಕಲ್ಯಾಣಕ್ಕೆ ಈ ಬಾರಿಯ ಬಜೆಟ್ ನಲ್ಲಿ ಸಿಕ್ಕಿದ್ದೇನು ಗೊತ್ತಾ? ಇಲ್ಲಿದೆ ಮಾಹಿತಿ
ಬಜೆಟ್ ಮುಖ್ಯಾಂಶಗಳು ಏನೇನು? :
ಕೃಷಿ ವಯಲಕ್ಕೆ ಸರ್ಕಾರದ ಕೊಡುಗೆಗಳು :
ಕೃಷಿ ಮತ್ತು ಪೂರಕ ಚಟುವಟಿಕೆಗಳ ವಲಯಕ್ಕೆ ಒಟ್ಟಾರೆ ಈ ಸಾಲಿನಲ್ಲಿ 39,031 ಕೋಟಿ ರೂ. ಅನುದಾನ.
• ರೈತರಿಗೆ ಈಗ ಇರುವ ಬಡ್ಡಿರಹಿತ ಅಲ್ಪಾವಧಿ ಸಾಲದ ಮಿತಿಯನ್ನು 3 ರಿಂದ 5 ಲಕ್ಷ ರೂ.ಗಳಿಗೆ ಏರಿಕೆ. ಈ ವರ್ಷ 30 ಲಕ್ಷಕ್ಕಿಂತ ಹೆಚ್ಚಿನ ರೈತರಿಗೆ 25 ಸಾವಿರ ಕೋಟಿ ರೂ. ಸಾಲ ವಿತರಣೆ.
• ಕಿಸಾನ್ ಕ್ರೆಡಿಟ್ ಕಾರ್ಡ್ ಹೊಂದಿರುವ ರೈತರಿಗೆ ‘ಭೂಸಿರಿ’ ಎಂಬ ನೂತನ ಯೋಜನೆಯಡಿ 2023-24ನೇ ಸಾಲಿನಿಂದ 10 ಸಾವಿರ ರೂ. ಹೆಚ್ಚುವರಿ ಸಹಾಯಧನ ನೀಡಲು ನಿರ್ಧಾರ. ಇದರಿಂದ 50
• ರಾಜ್ಯದ 56 ಲಕ್ಷ ಸಣ್ಣ ಮತ್ತು ಅತಿಸಣ್ಣ ರೈತ ಕುಟುಂಬಗಳಿಗೆ 180. ಕೋಟಿ ರೂ. ಜೀವನಜ್ಯೋತಿ ವಿಮಾ ಯೋಜನೆ.
• ‘ರೈತ ಸಿರಿ’ ಯೋಜನೆಯಡಿ ಕಿರುಧಾನ್ಯ ಬೆಳೆಗಾರರಿಗೆ ಪ್ರತಿ ಹೆಕ್ಟೇರ್ ಗೆ 10 ಸಾವಿರ ಪ್ರೋತ್ಸಾಹಧನ.
• ಇಸ್ರೊ ಸಂಸ್ಥೆ ಸಹಯೋಗದಲ್ಲಿ ಡಿಜಿಟಲ್ ಕೃಷಿಯಲ್ಲಿ ಜಿಯೋ ಸ್ಪೇಷಿಯಲ್ ತಾಂತ್ರಿಕತೆಗಳನ್ನು ಅಳವಡಿಸಲು 50 ಕೋಟಿ ರೂ. ವೆಚ್ಚದಲ್ಲಿ ಒಂದು ಹೊಸ ಕಾರ್ಯಕ್ರಮ ರೂಪಿಸಲಾಗಿದೆ.
• ತುಮಕೂರು ಜಿಲ್ಲೆಯ ತಿಪಟೂರಿನಲ್ಲಿ ತೋಟಗಾರಿಕಾ ಮಹಾವಿದ್ಯಾಲಯ ಸ್ಥಾಪಿಸಲಾಗುವುದು.
• ಶಿಡ್ಲಘಟ್ಟದಲ್ಲಿ 75 ಕೋಟಿ ರೂ. ವೆಚ್ಚದಲ್ಲಿ ಹೈಟೆಕ್ ರೇಷ್ಮೆಗೂಡು ಮಾರುಕಟ್ಟೆ ನಿರ್ಮಾಣ.
• ರಾಜ್ಯದ 9 ಲಕ್ಷ ಹಾಲು ಉತ್ಪಾದಕರಿಗೆ 1,067 ಕೋಟಿ ರೂ. ಪ್ರೋತ್ಸಾಹಧನವನ್ನು ನೇರ ನಗದು ಪಾವತಿ ಮೂಲಕ ವರ್ಗಾವಣೆ ಮಾಡಲಾಗಿದೆ.
• ಪ್ರಸ್ತುತ ವರ್ಷ ಕಲ್ತಾಣ ಕರ್ನಾಟಕದಲ್ಲಿ ಹಾಲು ಉತ್ಪಾದನೆ ಹೆಚ್ಚಳಕ್ಕೆ, ಬಳ್ಳಾರಿ ಜಿಲ್ಲೆಯಲ್ಲಿ ದಿನಂಪ್ರತಿ 2 ಲಕ್ಷ ಲೀ. ಹಾಲು ಸಂಸ್ಕರಣಾ ಸಾಮರ್ಥ್ಯದ ಮೆಗಾಡೈರಿ 100 ಕೋಟಿರೂ. ವೆಚ್ಚದಲ್ಲಿ ಸ್ಥಾಪನೆ.
• ಸೀಮೆಎಣ್ಣೆ ಬಳಕೆಯಿಂದ ಉಂಟಾಗುವ ಪರಿಸರ ಮಾಲಿನ್ಯ ತಪ್ಪಿಸಲು ಮುಂದಿನ 2 ವರ್ಷದಲ್ಲಿ ಸೀಮೆಎಣ್ಣೆ ಆಧಾರಿತ ದೋಣಿಗಳಲ್ಲಿ ಪೆಟ್ರೋಲತ/ಡೀಸೆಲ್ ಎಂಜಿನ್ ಆಳವಡಿಕೆಗೆ 50 ಸಾವಿರ ರೂ. ಸಹಾಯಧನ. ಇದಕ್ಕಾಗಿ ಪ್ರಸ್ತುತ 40 ಕೋಟಿ ಮೀಸಲು.
• ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ಖರೀದಿಸುವ ಧಾನ್ಯಗಳಿಗೆ, ರೈತರಿಗೆ ತ್ವರಿತ ಹಣಪಾವತಿಗಾಗಿ ಸ್ಥಾಪಿಸಿರುವ ಆವರ್ತ ನಿಧಿಗೆ ಪ್ರಸಕ್ತ ಆಯವ್ಯಯದಲ್ಲಿ 1,500 ಕೋಟಿರೂ. ಒದಗಿಸಿ ಒಟ್ಟಾರೆ 3,500 ಕೋಟಿ ರೂ.ಗಳಿಗೆ ಏರಿಕೆ.
ನೀರಾವರಿ ಯೋಜನೆಗಳಿಗೆ ಸಿಕ್ಕಿದ್ದೆಷ್ಟು?:
* ಕಳಸಾ ಮತ್ತು ಬಂಡೂರಾ ನಾಲಾ ತಿರುವು ಯೋಜನೆಗಳಿಗೆ ಮಹಾದಾಯಿ ನ್ಯಾಯಾಧಿಕರಣದಿಂದ ಹಂಚಿಕೆಯಾದ 3.90 ಟಿಎಂಸಿ ನೀರಿನ ಬಳಕೆಯ ಕಾಮಗಾರಿಗಳಿಗಾಗಿ 1,000 ಕೋಟಿ ರೂ. ನೀಡಲು ಉದ್ದೇಶಿಸಲಾಗಿದೆ.
* ಎತ್ತಿನಹೊಳೆ ಸಮಗ್ರ ಕುಡಿಯುವ ನೀರು ಯೋಜನೆಯ ಪ್ರಥಮ ಹಂತದ ಕಾಮಗಾರಿ ಬಹುತೇಕ ಪೂರ್ಣಗೊಳ್ಳುವ ಹಂತದಲ್ಲಿದೆ. ತುಮಕೂರು ಜಿಲ್ಲೆವರೆಗಿನ ಗುರುತ್ವ ಕಾಲುವೆ ಹಾಗೂ ಫೀಡರ್ ಕಾಲುವೆ ಕಾಮಗಾರಿಗಳನ್ನು ಪೂರ್ಣಗೊಳಿಸಿ 2023-24ರಲ್ಲಿ ನೀರು ಪೂರೈಕೆ.
ಶಿಕ್ಷಣ – ಮಹಿಳಾ ಮತ್ತು ಮಕ್ಕಳ ಕಲ್ಯಾಣ :
*ರಾಜ್ಯದ 10.32 ಲಕ್ಷ ಮಕ್ಕಳಿಗೆ ರೈತ ವಿದ್ಯಾನಿಧಿ ಯೋಜನೆಯೆಡಿ 725 ಕೋಟಿ ರೂ. ನೀಡಲಾಗಿದೆ. ಪ್ರಸಕ್ತ ಸಾಲಿನಲ್ಲಿ ಈ ಯೋಜನೆ ರಾಜ್ಯದ ಸಿಂಪಿಗರ ಮಕ್ಕಳಿಗೂ ವಿಸ್ತರಣೆ.
*ರಾಜ್ಯದ ಪ್ರೌಢಶಾಲಾ ಮಕ್ಕಳಿಗೆ ಉನ್ನತ ಶಿಕ್ಷಣ ಪಡೆಯಲು ‘ಮುಖ್ಯಮಂತ್ರಿ ವಿದ್ಯಾಶಕ್ತಿ’ ಮೂಲಕ ಪದವಿಪೂರ್ವ ಮತ್ತು ಸರ್ಕಾರಿ ಪದವಿ ಕಾಲೇಜುಗಳಲ್ಲಿ ಪೂರ್ಣಶುಲ್ಕ ವಿನಾಯಿತಿ.
*’ಮಕ್ಕಳ ಬಸ್ಸು’ ಯೋಜನೆ ಪ್ರಾರಂಭಿಸಿ 100 ಕೋಟಿ ರೂ. ವೆಚ್ಚದಲ್ಲಿ ಸಾರಿಗೆ ನಿಗಮಗಳ ಮೂಲಕ 1,000 ಹಿಸ ಕಾರ್ಯಾಚರಣೆ.
*ಉನ್ನತ ಶಿಕ್ಷಣ ಹಾಗೂ ಭಾಷಾ ತೊಡಕು ನಿವಾರಿಸಲು ಒಂದು ವರ್ಷದ ಒಳಗೆ ರಾಜ್ಯದ ಎಲ್ಲಾ ವಿಶ್ವವಿದ್ಯಾಲಯ ಹಾಗೂ ವೃತ್ತಿಪರ ಕೋರ್ಸ್ ಗಳಲ್ಲಿ ಕನ್ನಡದಲ್ಲಿ ಪರೀಕ್ಷೆ ಬರೆಯಲು ರೆಫರೆನ್ಸ್ ಹಾಗೂ ಪಠ್ಯಪುಸ್ತಕಗಳ ಭಾಷಾಂತರ.
*’ಹಳ್ಳಿ ಮುತ್ತು’ ಯೋಜನೆಯಡಿ ಆಯ್ದ ಗ್ರಾಮೀಣ ಕನ್ನಡ ಮಾಧ್ಯಮ ಶಾಲೆಯ 500 ವಿದ್ಯಾರ್ಥಿಗಳಿಗೆ ವೃತ್ತಿಪರ ಶಿಕ್ಷಣ ಸಂಪೂರ್ಣ ಶುಲ್ಕ ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ ಭರಿಸಲಾಗುತ್ತದೆ.
ಆರೋಗ್ಯ ವಲಯಕ್ಕೆ ಸಿಕ್ಕಿದ್ದೆಷ್ಟು?:
• ರಾಜ್ಯದಲ್ಲಿ ತಾಯಿ ಮರಣ ಹಾಗೂ ಶಿಶು ಮರಣ ಇಳಿಸಲು 10 ತಾಯಿ ಮತ್ತು ಮಕ್ಕಳ ಆಸ್ಪತ್ರೆ 165 ಕೋಟಿ ರೂ. ವೆಚ್ಚದಲ್ಲಿ ಪ್ರಾರಂಭಿಸಲು ಕ್ರಮವಹಿಸಲಾಗಿದೆ. ಪ್ರಸಕ್ತ ಹಾವೇರಿ ಜಿಲ್ಲೆ ಸವಣೂರಿನಲ್ಲಿ ಆಸ್ಪತ್ರೆ ಸ್ಥಾಪನೆ.
• ‘ಮನೆ ಮನೆಗೆ ಆರೋಗ್ಯ’ ಕಾರ್ಯಕ್ರಮದಡಿ ರಾಜ್ಯದ ಗ್ರಾಮೀಣ ಜನತೆಗೆ ಪ್ರಾಥಮಿಕ ಆರೋಗ್ಯ ಕೇಂದ್ರದಿಂದ ಎರಡು ಬಾರು ಆರೋಗ್ಯ ಶಿಬಿರ.
• ಪ್ರಧಾನಮಂತ್ರಿ ಜನೌಷಧಿ ಕೇಂದ್ರಗಳ ಸಂಖ್ಯೆ ಹೆಚ್ಚಳಕ್ಕೆ ಕ್ರಮ.
• ಕರ್ನಾಟಕ ಮೆದುಳು ಆರೋಗ್ಯ ಯೋಜನೆ ಇಡೀ ರಾಜ್ಯಕ್ಕೆ ವಿಸ್ತರಣೆಗೆ 25 ಕೋಟಿ ರೂ. ಮೀಸಲು
• ಪ್ರಸಕ್ತ ಸಾಲಿನಲ್ಲಿ ಉಚಿತ ಡಯಾಲಿಸಿಸ್ ಸೇವೆಯನ್ನು 1 ಲಕ್ಷ ಡಯಾಲಿಸಿಸ್ ಸೈಕಲ್ ಗಳಿಗೆ ಹೆಚ್ಚಿಸಲು ಕ್ರಮ.
• ಸಾರ್ವಜನಿಕರಿಗೆ ಸ್ಥಳೀಯವಾಗಿ ಪ್ರಯೋಗಾಲಯ ಸೇವೆ ಒದಗಿಸಲು 129 ತಾಲೂಕು ಪ್ರಯೋಗಾಲಯ, ಎಲ್ಲ ಜಿಲ್ಲೆಗಳಲ್ಲಿ ಜಿಲ್ಲಾ ಪ್ರಯೋಗಾಲಯ ಹಾಗೂ ಬೆಂಗಳೂರಿನಲ್ಲಿ ರಾಜ್ಯ ರೆಫರೆಲ್ ಪ್ರಯೋಗಾಲಯ ಸ್ಥಾಪನೆ.
• ಬೆಂಗಳೂರು, ಹುಬ್ಬಳ್ಳಿ, ಮೈಸೂರು ಮತ್ತು ಕಲ್ಬುರ್ಗಿ 4 ವೈದ್ಯಕೀಯ ವಿಙ್ಞನ ಸಂಸ್ಥೆಗಳಲ್ಲಿ ಐವಿಎಫ್ (IVF) ಕ್ಲಿನಕ್ ಸ್ಥಾಪನೆಗೆ 6 ಕೋಟಿ ರೂ.
• ದೇಶದಲ್ಲೆ ಪ್ರಥಮ ಬಾರಿಗೆ ಬೆಂಗಳೂರಿನ ಅಂಗಾಂಗ ಮರುಜೋಡಣೆಗೆ ನಿಮ್ಹಾನ್ಸ್ ಸಂಸ್ಥೆಯ ಆವರಣದಲ್ಲಿ 146 ಕೋಟಿ ರೂ. ವೆಚ್ಚದಲ್ಲಿ ಪ್ರಸ್ತುತ ವರ್ಷ ಪ್ರಥಮ ಸಾರ್ವಜನಿಕ ಆಸ್ಪತ್ರೆ ಸ್ಥಾಪನೆ.
ಮಹಿಳೆಯರು ಮತ್ತು ಮಕ್ಕಳ ಅಭಿವೃದ್ಧಿ :
ಮಹಿಳೆಯರ ಸಬಲೀಕರಣ ಹಾಗೂ ಕ್ಷೇಮಾಭಿವೃದ್ಧಿಗಾಗಿ ಮಹಿಲಾ ಆಯವ್ಯಯದಲ್ಲಿ ಒಟ್ಟಾರೆ 46,278 ಕೋಟಿ ರೋ. ಒದಗಿಸಲಾಗಿದೆ. ಮಕ್ಕಳ ಅಭ್ಯುದಯಕ್ಕಾಗಿ ಬಜೆಟ್ ನಲ್ಲಿ ಒಟ್ಟಾರೆ 47,256 ಕೋಟಿ ರೂ. ಮೀಸಲಿಡಲಾಗಿದೆ.
*ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಆರ್ಥಿಕ ಚಟುವಟಿಕೆಯಲ್ಲಿ ತೊಡಗಲು ಪ್ರಸಕ್ತ ಸಾಲಿನಲ್ಲಿ (2023-24) 45,000 ಮಹಿಳಾ ಸ್ವಸಹಾಯ ಗುಂಪುಗಳಿಗೆ 1,800 ಕೋಟಿ ರೂ. ಶೂನ್ಯ ಬಡ್ಡಿದರದಲ್ಲಿ ಸಾಲ ವಿತರಣೆ ಗುರಿ.
*ಸ್ವಂತ ಕಟ್ಟಡವಿಲ್ಲದ 1,000 ಅಂಗನವಾಡಿಗಳಿಗೆ ಕಟ್ಟಡ ನಿರ್ಮಿಸಲು ಅನುದಾನ.
*ಮಹಿಳೆಯರ ಆರ್ಥಿಕ ಸಬಲೀಕರಣಕ್ಕಾಗಿ ‘ಗೃಹಿಣಿಶಕ್ತಿ’ ಯೋಜನೆ ಜಾರಿ.
*ರಾಜ್ಯದ ಎಲ್ಲಾ ಶಾಲಾ-ಕಾಲೇಜು ವಿದ್ಯಾರ್ಥಿನಿಯರಿಗೆ ‘ವಿದ್ಯಾ ವಾಹಿನಿ’ ಎಂಬ ಯೋಜನೆಯಡಿ ಉಚಿತ ಬಸ್ ಪಾಸ್ ಸೌಲಭ್ಯ. ಇದಕ್ಕಾಗಿ 350 ಕೋಟಿರೂ. ವೆಚ್ಚ.
*ಆಸಿಡ್ ದಾಳಿ ಸಂತ್ರಸ್ತ ಮಹಿಳೆಯರಿಗೆ ರಾಜೀವ್ ಗಾಂಧಿ ವಸತಿ ನಿಗಮದಿಂದ ವಸತಿ ಸೌಲಭ್ಯ, ಸ್ವಯಂ ಉದ್ಯೊಗಕ್ಕಾಗಿ ಮಹಿಳಾ ಅಭಿವೃದ್ಧಿ ನಿಗಮದ ಮೂಲಕ ಬಡ್ಡಿ ರಹಿತ ಸಾಲ.
ಇಲಾಖಾವಾರು ಅನುದಾನ ಹಂಚಿಕೆ :
- ಶಿಕ್ಷಣ – 37,960 ಕೋಟಿ
- ಜಲಸಂಪನ್ಮೂಲ – 22,854 ಕೋಟಿ
- ಗ್ರಾಮೀಣಾಭಿವೃದ್ಧಿ – 20,494 ಕೋಟಿ
- ನಗರಾಭಿವೃದ್ಧಿ – 17,938 ಕೋಟಿ
- ಕಂದಾಯ – 15,943 ಕೋಟಿ
- ಆರೋಗ್ಯ ವಲಯ – 15,151 ಕೋಟಿ
- ಒಳಾಡಳಿತ, ಸಾರಿಗೆ – 14,509 ಕೋಟಿ
- ಇಂಧನ – 13,803 ಕೋಟಿ ಕೋಟಿ
- ಲೋಕೋಪಯೋಗಿ – 10,741 ಕೋಟಿ
- ಸಮಾಜ ಕಲ್ಯಾಣ – 11,163
- ಕೃಷಿ, ತೋಟಗಾರಿಕೆ – 9,456 ಕೋಟಿ
- ಮಹಿಳಾ, ಮಕ್ಕಳ ಕಲ್ಯಾಣ – 5,676 ಕೋಟಿ
- ಆಹಾರ ವಲಯ – 4,600 ಕೋಟಿ
- ವಸತಿ – 3,787 ಕೋಟಿ
- ಇತರೆ – 1,16,968 ಕೋಟಿ