ಬೆಂಗಳೂರು, ಫೆ.15 www.bengaluruwire.com : ಬಿಇಎಂಎಲ್ ಸಂಸ್ಥೆಯು ಚಾಲಕ ರಹಿತ ಸ್ವದೇಶಿ ಮೆಟ್ರೊ ಟ್ರೈನ್ ಅದನ್ನು ಅಭಿವೃದ್ಧಿಪಡಿಸಿದ್ದು, ಮುಂಬೈಗೆ 2021 ರಲ್ಲಿ 25 ರೈಲನ್ನು ಇಲ್ಲಿಯ ತನಕ ಪೂರೈಕೆ ಮಾಡಿದೆ.
ಆದರೆ ಚಾಲಕ ರಹಿತ ಮೆಟ್ರೊ ರೈಲಿಗೆ ಇನ್ನೂ ಮುಂಬೈನಲ್ಲಿ ಮೂಲಭೂತ ಸೌಕರ್ಯ ಕಲ್ಪಿಸದ ಕಾರಣ ಚಾಲಕ ಸಹಿತವಾಗಿವಾಗಿಯೇ ಚಾಲನೆ ಮಾಡಲಾಗುತ್ತಿದೆ. ಆಯಾ ಗ್ರಾಹಕರ ಅಗತ್ಯಕ್ಕೆ ತಕ್ಕಂತೆ
ಕಂಟ್ರೋಲ್ ರೂಮ್ ಮೂಲಕ ಚಾಲಕ ರಹಿತ ಮೆಟ್ರೋ ರೈಲಿನ ಓಡಾಟವನ್ನು ಸಿಗ್ನಲ್ ಮೂಲಕ ನಿಯಂತ್ರಿಸಲಾಗುತ್ತೆ. ಒಟ್ಟು 6 ಬೋಗಿಗಳನ್ನು ಹೊಂದಿರುವ ಈ ರೈಲಿನಲ್ಲಿ ಏಕ ಕಾಲಕ್ಕೆ 2,280 ಮಂದಿ ಪ್ರಯಾಣಿಸಬಹುದಾಗಿದೆ. ಒಟ್ಟು 90 ಕಿ.ಮೀ ನಷ್ಟು ಗರಿಷ್ಠ ವೇಗದಲ್ಲಿ ಸಂಚರಿಸುವ ರೀತಿ ವಿನ್ಯಾಸ ಮಾಡಿದ್ದು 80 ಕಿ.ಮೀ ವೇಗದಲ್ಲಿ ಸಾಗುತ್ತದೆ. ಇವು ಉಕ್ಕುಸಹಿತ ಬೋಗಿಯನ್ನು ಹೊಂದಿದೆ ಎಂದು ಬಿಇಎಂಎಲ್ ಸಹಾಯಕ ಪ್ರಧಾನ ವ್ಯವಸ್ಥಾಪಕ ಸಂಜಯ್ ಸಿಂಗ್ ಬೆಂಗಳೂರು ವೈರ್ ಗೆ ತಿಳಿಸಿದ್ದಾರೆ.
ಎಲೆಕ್ಟ್ರಿಕ್ ಮಲ್ಟಿಪಲ್ ಯೂನಿಟ್ ಚಾಲಕ ರಹಿತ ಮೆಟ್ರೊ ರೈಲನ್ನು ನಗರದಲ್ಲಿ ಓಡಿಸಬೇಕಾದರೆ ಮೇಲ್ಭಾಗದಲ್ಲಿ ಪ್ರತ್ಯೇಕ ಎಲೆಕ್ಟ್ರಿಕ್ ಲೈನ್ ಹಾಕಬೇಕು. ಬೆಂಗಳೂರಿನಲ್ಲಿನ ಮೆಟ್ರೊ ಲೈನಿನಲ್ಲಿ ವಿದ್ಯುತ್ ಅನ್ನು ಕೆಳಗೆ ಅಳವಡಿಸಲಾಗಿದೆ. ಹಾಗಾಗಿ ಸದ್ಯ ಇರೋ ಮೆಟ್ರೊ ಲೈನ್ ನಲ್ಲಿ ಚಾಲಕರಹಿತ ಮೆಟ್ರೊ ಓಡಾಟ ಸಾಧ್ಯವಾಗುವುದಿಲ್ಲ ಎಂದು ಬೆಮೆಲ್ ಅಧಿಕಾರಿಯೊಬ್ಬರು ಹೇಳಿದರು.
ಈ ಟ್ರೈನ್ 20 ಕಿಲೊ ವೋಲ್ಟ್ಸ್, ಬೆಂಗಳೂರಿನ ಮೆಟ್ರೊ 750 ವೋಲ್ಟ್ಸ್ ವಿದ್ಯುತ್ ಬಳಸಿಕೊಂಡು ಓಡುತ್ತದೆ. ತಿಂಗಳಿಗೆ 30 ರಿಂದ 34 ಬೋಗಿಗಳನ್ನು ತಯಾರಿಸುವ ಸಾಮರ್ಥ್ಯವನ್ನು ಬೆಮೆಲ್ ಹೊಂದಿದೆ.
ಐಟಿಐ ಮಲ್ಟಿ ಪೋಲಿಂಗ್ ಇವಿಎಂ :
ಕೇಂದ್ರ ಸರ್ಕಾರಿ ಸ್ವಾಮ್ಯದ ಐಟಿಐ ಸಂಸ್ಥೆಯು ರೂಪಿಸಿದ ನೂತನ ಬಹುವಿಧದ ವಿವಿಪ್ಯಾಟ್ ಮತಯಂತ್ರದ ಉಪಕರಣವು ವಿಶೇಷವಾಗಿದೆ. ಲೋಕಸಭೆ, ವಿಧಾನಸಭೆ ಚುನಾವಣೆಗಳಲ್ಲಿ ಬಳಸುವ ಇವಿಎಂ ಮತ ಯಂತ್ರದಲ್ಲಿ ಯಾವುದಾದರೂ ಒಬ್ಬ ಅಭ್ಯರ್ಥಿಗೆ ಮತ ಹಾಕಬಹುದು. ಆದರೆ ಐಟಿಐ ನಿರ್ಮಿಸಿದ ಎಲೆಕ್ಟ್ರಾನಿಕ್ ಮತಯಂತ್ರ (EVM)ದಲ್ಲಿ ಏಕ ಕಾಲಕ್ಕೆ ಹಲವು ಅಭ್ಯರ್ಥಿಗಳಿಗೆ ಓಟು ಹಾಕುವ ರೀತಿಯಲ್ಲಿ ಅಭಿವೃದ್ಧಿಪಡಿಸಲಾಗಿದೆ. ಇದನ್ನು ಜಿಲ್ಲಾ ಪಂಚಾಯ್ತಿ, ತಾಲ್ಲೂಕು ಹಾಗೂ ಗ್ರಾಮಪಂಚಾಯ್ತಿ ಚುನಾವಣೆಗಳಲ್ಲಿ ಬಳಸಬಹುದಾಗಿದೆ.
ಈ ಕುರಿತಂತೆ ರಾಜ್ಯ ಚುನಾವಣಾ ಆಯೋಗಗಳಿಗೆ ಸ್ಥಳೀಯಾಡಳಿತ ಸಂಸ್ಥೆಗಳ ಚುನಾವಣೆಗಳಲ್ಲಿ ಇಂತಹ ಯಂತ್ರಗಳನ್ನು ಬಳಸಿಕೊಳ್ಳುವಂತೆ ಸೂಚನೆ ನೀಡಿತ್ತು. ಒಬ್ಬ ಮತದಾರ ಪಂಚಾಯ್ತಿ ಚುನಾವಣೆಗಳಲ್ಲಿ ಸದಸ್ಯ ಸ್ಥಾನಗಳಿಗೆ ನಡೆಯುವ ಚುನಾವಣೆಯಲ್ಲಿ ಹಲವು ಅಭ್ಯರ್ಥಿಗಳಿಗೆ ಏಕ ಕಾಲದಲ್ಲಿ ಮತದಾನ ಮಾಡಬಹುದು. ಚುನಾವಣಾ ಆಯೋಗ ಇಂತಹ ಮತಯಂತ್ರಗಳ ಪರಿಶೀಲನೆ ನಡೆಸಿ ಸೂಕ್ತ ಯಂತ್ರದ ಮಾದರಿಗೆ ಒಪ್ಪಿಗೆ ನೀಡಲು ತಾಂತ್ರಿಕ ಸಲಹಾ ಸಮಿತಿಯನ್ನು ರಚನೆ ಮಾಡಿತ್ತು.
ಐಟಿಐ, ಭಾರತ್ ಎಲೆಕ್ಟ್ರಾನಿಕ್ಸ್ ಲಿ. (BEL), ಎಲೆಕ್ಟ್ರಾನಿಕ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ ಸಂಸ್ಥೆಗಳು ಇಂತಹ ಇವಿಎಮ್ ತಯಾರಿಕೆಯಲ್ಲಿ ನಿರತವಾಗಿವೆ. ಅವುಗಳ ಪೈಕಿ ಐಟಿಐ ಮಲ್ಟಿ ಪೋಸ್ಟಿಂಗ್ (ಮಲ್ಟಿ ವೋಟಿಂಗ್) ಇವಿಎಂ ಮೆಷಿನ್ ಅನ್ನು ತಯರಿಸಿದ್ದು, ಮುಂದಿನ ತಿಂಗಳು ಇವುಗಳನ್ನು ಚುನಾವಣಾ ಆಯೋಗದ ಮುಂದೆ ಪ್ರಾತ್ಯಕ್ಷಿಕೆ ನೀಡಲಾಗುತ್ತದೆ ಎಂದು ಐಟಿಐನ ಅನುಭವ್ ತ್ರಿಪಾಠಿ ಬೆಂಗಳೂರು ವೈರ್ ಗೆ ತಿಳಿಸಿದ್ದಾರೆ.