ಪುರಾಣ ಪ್ರಸಿದ್ಧ ಸಾಲಿಗ್ರಾಮದ ಶ್ರೀ ಗುರುನರಸಿಂಹ ದೇವಸ್ಥಾನದ ವಾರ್ಷಿಕ ರಥೋತ್ಸವ ಈ ಬಾರಿ ವೈಭವ, ಸಡಗರ ಮತ್ತು ಸಂಭ್ರಮದಿಂದ ನೆರವೇರುತ್ತಿದೆ. ಜ.21ರ ತನಕ ವಿವಿಧ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ಶ್ರೀ ಗುರುನರಸಿಂಹ ಮತ್ತು ಶ್ರೀ ಆಂಜನೇಯ ದೇವಸ್ಥಾನದಲ್ಲಿ ನಡೆಯಲಿದೆ. ಸೋಮವಾರದ ಬ್ರಹ್ಮರಥೋತ್ಸವದಲ್ಲಿ ಕಂಡು ಬಂದ ದೃಶ್ಯಗಳು ಕ್ಯಾಮರಾ ಕಣ್ಣಲ್ಲಿ ಕಂಡಿದ್ದು ಹೀಗೆ
ಹಿಂದೂ ಧಾರ್ಮಿಕ, ಸಾಂಸ್ಕೃತಿಕ ಆಚರಣೆಗಳೇ ಹಾಗೆ, ಸಮುದಾಯಗಳ ನಡುವೆ, ಜನರ ಜನರ ನಡುವೆ ಶಾಂತಿ, ಸಹಬಾಳ್ವೆ, ವಿಶ್ವಾಸ, ಸಹೋದರತ್ವದ ಭಾವನೆ ಮೂಡಿಸುವ ಉತ್ತಮ ಆಚರಣೆಗಳ ನಮ್ಮ ನಡುವೆ ಈಗಲೂ ಜೀವಂತವಿದೆ. ಇದಕ್ಕೆ ನಾಡಿನೆಲ್ಲಡೆ ಲೆಕ್ಕವಿಲ್ಲದಷ್ಟು ಉದಾಹರಣೆ ಸಿಗುತ್ತದೆ. ಕರಾವಳಿ ಭಾಗದಲ್ಲಿ ಶ್ರೀ ಗುರುನರಸಿಂಹ ದೇವಸ್ಥಾನದಲ್ಲಿ ನಡೆಯುವ ರೀತಿಯ ವಾರ್ಷಿಕ ರಥೋತ್ಸವ ಆಚರಣೆಗಳು ಸ್ಥಳೀಯ ಸಂಪ್ರದಾಯ, ವಿಶಿಷ್ಟ ಆಚರಣೆಗಳ ದ್ಯೋತಕವಾಗಿದೆ. ಇವುಗಳಲ್ಲಿ ಪಾಲ್ಗೊಳ್ಳಲೆಂದೇ ಸಾವಿರಾರು ಭಕ್ತರು ಎಲ್ಲೆಡೆ ಚದುರಿ ಹೋಗಿದ್ದರೂ, ರಥೋತ್ಸವ, ವಾರ್ಷಿಕ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಮಾತ್ರ ತಪ್ಪದೇ ಪಾಲ್ಗೊಳ್ಳುತ್ತಾರೆ.