“ಬೆಂಗಳೂರು ವೈರ್” ಆನ್ ಲೈನ್ ಕನ್ನಡ ವೆಬ್ ನ್ಯೂಸ್ ಪೋರ್ಟಲ್ ಗೆ ಈಗ 2ನೇ ವಾರ್ಷಿಕೋತ್ಸವದ ಸಂಭ್ರಮ. ಈ ಎರಡು ವರ್ಷದ ಅವಧಿಯಲ್ಲಿ “ಬೆಂಗಳೂರು ವೈರ್” ನಾಡಿನ ಜನರ ಹಿತಾಸಕ್ತಿ, ಆಸಕ್ತಿ, ನೆಲ, ಜಲ, ಭಾಷೆ, ವಿಜ್ಞಾನ, ತಂತ್ರಜ್ಞಾನ, ಹಣಕಾಸು, ಪರಿಸರ, ಪ್ರಮುಖವಾಗಿ ಬೆಂಗಳೂರನ್ನು ಆದ್ಯತೆಯಾಗಿಟ್ಟುಕೊಂಡು ಮಾಡಿದ ಅನೇಕ ಸುದ್ದಿಗಳನ್ನು ನೀವು ಓದಿ ಪ್ರೋತ್ಸಾಹಿಸಿದ್ದೀರಿ. ಬೆನ್ನು ತಟ್ಟಿದ್ದೀರಿ.
ಈ ಎರಡು ವರ್ಷದ ಅವಧಿಯಲ್ಲಿ “Bengaluru Wire” ಡಿಜಿಟಲ್ ಮೀಡಿಯಾ ಎಂಬ ಹೊಸ ಮನ್ವಂತರಕ್ಕೆ ಒಗ್ಗಿಕೊಂಡು ನಮ್ಮ ದೇಶ, ಕನ್ನಡ ನೆಲದ ಅಭಿವೃದ್ಧಿಗೆ, ನಾಗರೀಕರ ಸಮಸ್ಯೆ, ಸವಾಲು, ಅಭಿಪ್ರಾಯಗಳಿಗೆ ಧ್ವನಿಯಾಗಿ ಕೆಲಸ ಮಾಡಿದೆ.
ಆಡಳಿತ ನಡೆಸುವ ಸರ್ಕಾರ, ಸ್ಥಳಿಯ ಸಂಸ್ಥೆಗಳಲ್ಲಿನ ಹುಳಕುಗಳನ್ನು ಸಮರ್ಥವಾಗಿ ದಾಖಲೆ ಸಹಿತವಾಗಿ ನಿಮ್ಮ ಮುಂದಿಟ್ಟಿದೆ. ತನಿಖಾ ಪತ್ರಿಕೋದ್ಯಮ, ಎಕ್ಸ್ ಕ್ಲೂಸಿವ್ ಹಾಗೂ ವಿಶೇಷ ವರದಿಗಳ ಮೂಲಕ ಕರ್ತವ್ಯ ಲೋಪ ಎಸಗಿದ ಆಳುವ ಜನಪ್ರತಿನಿಧಿಗಳನ್ನು, ಅಧಿಕಾರಿಗಳನ್ನು ಎಚ್ಚರಿಸಿದೆ. ವ್ಯವಸ್ಥೆಯಲ್ಲಿನ ಸಮಸ್ಯೆಗಳಿಗೆ ಅಗತ್ಯ ಪರಿಹಾರಗಳನ್ನು ವಿಷಯ ತಜ್ಞರಿಂದ ಸಂಗ್ರಹ ಮಾಡಿ ಸುದ್ದಿ ಪ್ರಕಟಿಸಿದೆ. ಇಲ್ಲಿ ಸುದ್ದಿಗಳ ಸಂಖ್ಯೆಗಿಂತ, ಗುಣಮಟ್ಟ ಮತ್ತು ಎಲ್ಲಾ ಆಯಾಮಗಳನ್ನು ಒಳಗೊಂಡ ಮೌಲ್ಯಯುತ ಸುದ್ದಿಗಳಿಗೆ ಪ್ರಾಮುಖ್ಯತೆ ನೀಡುವುದು ನಮ್ಮ ಉದ್ದೇಶವಾಗಿದೆ.
ಈ ಅವಧಿಯಲ್ಲಿ ಸಾರ್ವಜನಿಕರ ಸಂಕಷ್ಟಗಳನ್ನು ಅಧಿಕಾರಸ್ಥರ ಮುಂದೆ ತೆರೆದಿಟ್ಟಿದ್ದೇವೆ. ಆಡಳಿತದಲ್ಲಿನ ಭ್ರಷ್ಟಾಚಾರಗಳನ್ನು ಮುಲಾಜಿಲ್ಲದೆ ಬಹಿರಂಗ ಮಾಡಿದ್ದೇವೆ. ಒಳ್ಳೆಯ ಕೆಲಸಗಳಾದಾಗ ಅವುಗಳನ್ನು ಜನರಿಗೆ ಸುದ್ದಿ ಪ್ರಕಟಿಸುವ ಮೂಲಕ ತಿಳಿಸಿದ್ದೇವೆ.
ವೃತ್ತಿಪರತೆಯಿಂದ “ಬೆಂಗಳೂರು ವೈರ್” ಡಿಜಿಟಲ್ ಮಾಧ್ಯಮವನ್ನು ನಡೆಸಿಕೊಂಡು ಬಂದ ಕಾರಣಕ್ಕೆ ನೀವು ನಮಗೆ ಬೆಂಬಲ ನೀಡಿ ಹರಿಸಿದ್ದೀರಿ. ಇದು ಹೀಗೆಯೇ ಮುಂದುವರೆಯಲಿ. ನಮ್ಮ ಸಾಮಾಜಿಕ ಜವಾಬ್ದಾರಿಯ ಮೂಲಕ ಆಳುವ ಸರ್ಕಾರವನ್ನು ನಿರಂತರವಾಗಿ ಜನಪರವಾಗಿ ಕೆಲಸ ಮಾಡುವ ನಿಟ್ಟಿನಲ್ಲಿ ಸುದ್ದಿಯ ಮೂಲಕ ಎಚ್ಚರಿಸುವ ನಮ್ಮ ಕಾಯಕ ಹೀಗೆ ನಿರಂತರವಾಗಿ ನಡೆಯಲಿದೆ ಎಂದು ನಿಮಗೆ ಭರವಸೆ ನೀಡುತ್ತೇವೆ.
-✍🏻 ಸಂಪಾದಕರು
ಸ್ವತಂತ್ರ ಮತ್ತು ವಾಸ್ತವ ಸುದ್ದಿ