ಬೆಂಗಳೂರು, ಜ.6 www.bengaluruwire.com : ರಾಜ್ಯದ ಸಿರಿಧಾನ್ಯ ಮತ್ತು ಸಾವಯವ ಉತ್ಪನ್ನಗಳಿಗೆ ಮಾರುಕಟ್ಟೆ ಸಂಪರ್ಕ, ಗ್ರಾಹಕರಲ್ಲಿ ಅರಿವು ಮೂಡಿಸುವ ಉದ್ದೇಶದಿಂದ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಸಿರಿಧಾನ್ಯ ಮತ್ತು ಸಾವಯವ ಅಂತರರಾಷ್ಟ್ರೀಯ ವಾಣಿಜ್ಯ ಮೇಳ ನಗರದ ಅರಮನೆ ಮೈದಾನದ ತ್ರಿಪುರವಾಸಿನಿಯಲ್ಲಿ ಜ. 20ರಿಂದ 22ರವರೆಗೆ ನಡೆಯಲಿದೆ.
ಈ ಕುರಿತಂತೆ ಕೃಷಿ ಸಚಿವ ಬಿ.ಸಿಪಾಟೀಲ್ ಗುರುವಾರ ನಗರದ ಖಾಸಗಿ ಹೋಟೆಲ್ ನಲ್ಲಿ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಾ, ಜನರು “ಜಂಕ್ಫುಡ್ ಗುಲಾಮಗಿರಿ” ಯಿಂದ ಹೊರಬಂದು ಆರೋಗ್ಯಕರ ಆಹಾರ ಶೈಲಿಗೆ ಹೆಚ್ಚು ಒತ್ತು ನೀಡಬೇಕು. 2023 ರ ವರ್ಷವನ್ನು ಅಂತಾರಾಷ್ಟ್ರೀಯ ಸಿರಿಧಾನ್ಯಗಳ ವರ್ಷವೆಂದು ಘೋಷಿಸಲಾಗಿದೆ.ಅದರನ್ವಯ ಪೂರ್ವಭಾವಿಯಾಗಿ ಸಭೆ ನಡೆಯುತ್ತಿದೆ.ಸಿರಿಧಾನ್ಯಬಳಕೆ ಮತ್ತು ಬೆಳೆಯುವಲ್ಲಿ ಕರ್ನಾಟಕ ಇಡೀ ದೇಶಕ್ಕೆ ಮಾದರಿಯಾಗಿದೆ.ಕರ್ನಾಟಕ “ಸಿರಿಧಾನ್ಯಗಳ ರಾಜ” ಎಂದು ಕರೆಯಲಾಗಿದೆ.
ಮಸಾಲೆ ಉತ್ಪನ್ನಗಳು, ಸೌಂದರ್ಯವರ್ದಕ ಉತ್ಪನ್ನಗಳು,ಪರಿಸರ ಸ್ನೇಹಿ ಉತ್ಪನ್ನಗಳುಸೇರಿದಂತೆ ಹಲವು ಉತ್ಪನ್ನಗಳನ್ನು ಸಹ ಸಾವಯವ ಸಿರಿಧಾನ್ಯದಿಂದ ತಯಾರಿಸಲಾಗುತ್ತಿದ್ದೆ. ಪೌಷ್ಠಿಕ ಆಹಾರದ ಬಗ್ಗೆ ಜನ ಹೆಚ್ಚು ಉತ್ಸುಕರಾಗುತ್ತಿದ್ದಾರೆ. ಜಂಕ್ ಫುಡ್‌ಗಳ ಗುಲಾಮರು ಜನರಾಗಿದ್ದು ಇದರಿಂದ ಆರೋಗ್ಯ ಹದಗೆಡುತ್ತಿದ್ದೆ.ಹೀಗಾಗಿ ಜನರು ಇತ್ತೀಚೆಗೆ ಸಾವಯವ ಸಿರಿಧಾನ್ಯಗಳಿಗೆ ಹೆಚ್ಚು ಮಹತ್ವ ನೀಡುತ್ತಿದ್ದಾರೆ.ಜನರು ಜಂಕ್ಪಪುಡ್ ಮಾದರಿಯನ್ನು ಕೈಬಿಡಬೇಕು.ಉತ್ತಮ ಆರೋಗ್ಯಕ್ಕಾಗಿ ಸಾವಯವ ಸಿರಿಧಾನ್ಯಗಳಿಗೆ ಹೆಚ್ಚು ಒತ್ತು ನೀಡಬೇಕು ಎಂದು ಕರೆ ನೀಡಿದರು.
‘ಕರ್ನಾಟಕ ರಾಜ್ಯ ಕೃಷಿ ಉತ್ಪನ್ನಗಳ ಸಂಸ್ಕರಣೆ ಮತ್ತು ರಫ್ತು ನಿಗಮ ನಿಯಮಿತ’ (ಕೆಎಪಿಪಿಇಸಿ) ಮತ್ತು ಅಂತರರಾಷ್ಟ್ರೀಯ ಸಾವಯವ ಕೃಷಿ ಸ್ಪರ್ಧಾತ್ಮಕ ಕೇಂದ್ರದ (ಐಸಿಸಿಒಎ) ಸಹಯೋಗದಲ್ಲಿ ಈ ಮೇಳ ಆಯೋಜಿ ಸಲಾಗುತ್ತಿದೆ. ಮೇಳದ ಅಂಗವಾಗಿ ಆಯೋಜಿಸಿರುವ ವಸ್ತು ಪ್ರದರ್ಶನದಲ್ಲಿ 300ಕ್ಕೂ ಹೆಚ್ಚು ಮಳಿಗೆಗಳಿಗೆ ಅವಕಾಶ ಕಲ್ಪಿಸಲಾಗಿದೆ’ ಎಂದು ಕೃಷಿ ಸಚಿವ ಬಿ.ಸಿ. ಪಾಟೀಲ್ ಈ ವಿಷಯ ತಿಳಿಸಿದರು.
‘ಸಿರಿಧಾನ್ಯ ಸಾವಯವ ಮತ್ತು ನೈಸರ್ಗಿಕ ಕೃಷಿ -ಸವಾಲುಗಳ ನಡುವೆ ಅವಕಾಶಗಳು ಕುರಿತು ಅಂತರರಾಷ್ಟ್ರೀಯ ಸಮ್ಮೇಳನ ಸಹ ಇದೇ ಸಂದರ್ಭದಲ್ಲಿ ಆಯೋಜಿಸಲಾಗಿದೆ. ಇದಲ್ಲದೆ, ಮೇಳದಲ್ಲಿ ಅಂತರರಾಷ್ಟ್ರೀಯ ಸಾವಯವ ಉತ್ಪನ್ನಗಳ ಕಂಪನಿಗಳು ಸಹ ಭಾಗವಹಿಸಲಿವೆ. ಕರ್ನಾಟಕ ಪೆವಿಲಿಯನ್ ನಲ್ಲಿ ರಾಜ್ಯದ ಕೃಷಿ ನೀತಿಗಳು, ಕೃಷಿ ಪದ್ಧತಿಗಳು ಮತ್ತು ತಾಂತ್ರಿಕತೆಯನ್ನು ಪ್ರದರ್ಶಿಸಲಾಗುವುದು. ಕಾರ್ಯಕ್ರಮದ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಪಾಲ್ಗೊಳ್ಳಲಿದ್ದಾರೆ’ ಎಂದು ಸಚಿವರು ಹೇಳಿದರು.
ಸಿರಿಧಾನ್ಯ ಮತ್ತು ಸಾವಯವ ಅಂತರರಾಷ್ಟ್ರೀಯ ವಾಣಿಜ್ಯ ಮೇಳದಲ್ಲಿ ಕೃಷಿ ಉತ್ಪನ್ನಗಳ ರಫ್ತುದಾರರು, ಮಾರುಕಟ್ಟೆದಾರರು, ಸಂಸ್ಕರಣೆದಾರರು, ಸಾವಯವ ಹಾಗೂ ಸಿರಿಧಾನ್ಯ ಪಾಲುದಾರರು ಪಾಲ್ಗೊಳ್ಳಲಿದ್ದಾರೆ. ಕೃಷಿ ಇಲಾಖೆಯ ನಿರ್ದೇಶಕಜಿ.ಟಿ.ಪುತ್ರನ್ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಕೃಷಿಇಲಾಖೆಯ ಆಯುಕ್ತರಾದ ಶರತ್, ಕೆಪೆಕ್ ಅಧ್ಯಕ್ಷ ವಿರೂಪಾಕ್ಷಪ್ಪ ,ಕೆಮಿಕ್‌ನಿರ್ದೇಶಕ ಪದ್ಮನಾಭಯ್ಯ, ಕೆಪೆಕ್ ವ್ಯವಸ್ಥಾಪಕ ನಿರ್ದೇಶಕ ಬಂತನಾಳ್ ಜಲಾನಯನ ಅಭಿವೃದ್ಧಿಇಲಾಖೆಯ ನಿರ್ದೇಶಕ ಶ್ರೀನಿವಾಸ್, ಅಪೆಡಾ ಜಿಎಂ, ರವೀಂದ್ರ ಸೇರಿದಂತೆ ಮತ್ತಿತ್ತರ ಪ್ರಮುಖರು ವೇದಿಕೆಯಲ್ಲಿ ಉಪಸ್ಥಿತರಿದ್ದು ಅಧಿಕಾರಿಗಳು ಪಾಲ್ಗೊಂಡಿದ್ದರು.