ಬೆಂಗಳೂರು, ಡಿ.15 www.bengaluruwire.com : ಕಾಳೇನ ಅಗ್ರಹಾರ ಮೆಟ್ರೊ ನಿಲ್ದಾಣದ ಕಾಮಗಾರಿ ನಡೆಯುತ್ತಿರುವುದರಿಂದ ಬನ್ನೇರುಘಟ್ಟ ಮುಖ್ಯರಸ್ತೆಗೆ ಸಂಪರ್ಕ ಕಲ್ಪಿಸುವ ಲೊಯೊಲಾ ಕಾಲೇಜು ಜಂಕ್ಷನ್ ನಲ್ಲಿರುವ ಕೊತ್ತನೂರು ಅಡ್ಡ ರಸ್ತೆಯ ಸಂಚಾರವನ್ನು ಡಿ.19 ರಿಂದ ಮುಚ್ಚಲಾಗುತ್ತಿದೆ ಎಂದು ಬೆಂಗಳೂರು ಮೆಟ್ರೊ ರೈಲು ನಿಗಮ ನಿಯಮಿತ (BMRCL)ವು ತಿಳಿಸಿದೆ.
ಕಾಮಗಾರಿಯನ್ನು ಕೈಗೊಳ್ಳುತ್ತಿರುವುದರಿಂದ ಸಂಚಾರ ಸುಗಮಗೊಳಿಸಲು ಸಂಚಾರ ಪೊಲೀಸರು ಪ್ರಸ್ತಾಪಿಸಿದ ಪರ್ಯಾಯ ಮಾರ್ಗ ಕೆಳಕಂಡಂತಿದೆ :
*ಬನ್ನೇರುಘಟ್ಟದಿಂದ ಕೊತ್ತನೂರು ಕಡೆಗೆ ಸಂಚರಿಸುವವರು, ಗೊಟ್ಟಿಗೆರೆಯಲ್ಲಿ ತಿರುವು ಪಡೆದು ಜಂಬೂ ಸವಾರಿ ದಿನ್ನೆ ಮೂಲಕ ಬಿ.ಕೆ. ಸರ್ಕಲ್ ತಲುಪ ಬಹುದು.
*ಜಯದೇವ ಜಂಕ್ಷನ್ನಿಂದ ಕೊತ್ತನೂರು ಕಡೆಗೆ ಸಂಚರಿಸುವವರು, ಅರೆಕೆರೆ ಜಂಕ್ಷನ್ನಲ್ಲಿ ತಿರುವು ಪಡೆದು ಬ್ರಿಗೇಡ್ ಮಿಲೇನಿಯಂ ರಸ್ತೆ, ಆರ್ಬಿಐ ಲೇಔಟ್ ಮೂಲಕ ಬಿ.ಕೆ. ಸರ್ಕಲ್ ತಲುಪ ಬಹುದು.
*ಬನ್ನೇರುಘಟ್ಟ ಮುಖ್ಯರಸ್ತೆಯ ವಾಹನ ಸಂಚಾರದಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ.