ನವದೆಹಲಿ, ನ.29 www.bengaluruwire.com : ನವದೆಹಲಿಯಿಂದ ಖಾನ್ ಪುರಕ್ಕೆ ಸ್ಪೈಸ್ ಜೆಟ್ ವಿಮಾನ 2745ನಲ್ಲಿ ಬಂದಿಳಿದ ಪ್ರಯಾಣಿಕರಿಗೆ ಮಂಗಳವಾರ ಆಶ್ಚರ್ಯ ಕಾದಿತ್ತು. ಆ ವಿಮಾನವನ್ನು ಕಳೆದ 10 ವರ್ಷಗಳಿಂದ ಚಲಾಯಿಸುತಿದ್ದ ಸ್ಪೈಸ್ ಜೆಟ್ ಚೀಫ್ ಪೈಲೆಟ್ ಇಂದು ಈ ವಿಮಾನ ಚಲಾಯಿಸುವಿಕೆಯ ಕೊನೆಯ ಹಾರಾಟವಾಗಿತ್ತು.
ವಿಮಾನದಲ್ಲಿ ಕೋ- ಪೈಲೆಟ್ ನಿವೃತ್ತಿಯಾಗುತ್ತಿರುವ ಚೀಫ್ ಪೈಲೆಟ್ ಕ್ಯಾಪ್ಟನ್ ಹರ್ ಕಮಲ್ ಜಿತ್ ಸಿಂಗ್ ಸೋಕೆ ಅವರ ಸಲ್ಲಿಸಿದ ಸೇವೆಯನ್ನು ಸ್ಮರಿಸಿದರು. ಭಾರತೀ ವಾಯುಸೇನೆಯಲ್ಲಿ 1979ರಲ್ಲಿ ಸೇವೆಗೆ ಸೇರಿದ ಕ್ಯಾಪ್ಟನ್ ಹರ್ ಕಮಲ್ ಜಿತ್ ಸಿಂಗ್ 1999ರಲ್ಲಿ ಕಾರ್ಗಿಲ್ ಯುದ್ಧ ಸೇರಿದಂತೆ ಒಟ್ಟು 33 ವರ್ಷಗಳ ಕಾಲ ದೇಶಸೇವೆಗೆ ತಮ್ಮನ್ನು ಸಮರ್ಪಿಸಿಕೊಂಡಿದ್ದರು. ಅದಾದ ಬಳಿಕ ಸ್ಪೈಸ್ ಜೆಟ್ ಸೇರಿ 10 ವರ್ಷಗಳ ಸೇವೆ ಸಲ್ಲಿಸಿ ಮಂಗಳವಾರ ನಿವೃತ್ತಿಯಾಗುತ್ತಿದ್ದಾರೆ ಎಂದು ಘೋಷಿಸಿದರು.
ಆ ಸಂದರ್ಭದಲ್ಲಿ ನಿರ್ಗಮಿತ ಚೀಫ್ ಪೈಲೆಟ್ ಸೇವೆಯ ಬಗ್ಗೆ ತಿಳಿದು ವಿಮಾನದಲ್ಲಿದ್ದ ಪ್ರಯಾಣಿಕರು ಚಪ್ಪಾಳೆ ತಟ್ಟಿ ತಮ್ಮ ಸಂತಸವನ್ನು ವ್ಯಕ್ತಪಡಿಸಿದರು. ತಮಗೆ ಸಂತೋಷದಿಂದ ಬೀಳ್ಕೊಡುಗೆ ಕೊಟ್ಟ ಸಹ ಪೈಲೆಟ್ ಹಾಗೂ ಪ್ರಯಾಣಿಕರಿಗೆ ಕ್ಯಾಪ್ಟನ್ ಹರ್ ಕಮಲ್ ಜಿತ್ ಸಿಂಗ್ ಅಭಿನಂದನೆ ಸಲ್ಲಿಸಿದರು. ಈ ವಿಡಿಯೋವನ್ನು ಸ್ಪೈಸ್ ಜೆಟ್ ತನ್ನ ಅಧಿಕೃತ ಟ್ವಿಟರ್ ನಲ್ಲಿ ಹಂಚಿಕೊಂಡಿದೆ.