ಬೆಂಗಳೂರು, ನ.27 www.bengaluruwire.com : ರಾಜಧಾನಿ ಬೆಂಗಳೂರಿನ ಆಕಾಶದಲ್ಲಿ ಲೋಹದ ಹಕ್ಕಿಗಳ ಹಾರಾಟ ನೋಡಲು ಮತ್ತೆ ಅವಕಾಶ ಕೂಡಿಬಂದಿದೆ. ಯಲಹಂಕದ ವಾಯುನೆಲೆಯಲ್ಲಿ ಫೆಬ್ರವರಿ 13 ರಿಂದ 17ರವರೆಗೆ ಐದು ದಿನಗಳ ಕಾಲ ಏಷ್ಯಾದ ಅತಿದೊಡ್ಡ ಏರ್ ಶೋ ನಡೆಯಲಿದೆ.
ಈ ವಿಷಯವನ್ನು ಏರ್ ಶೋ-2023 ಆಯೋಜಿಸುವ ಭಾರತೀಯ ರಕ್ಷಣಾ ಉತ್ಪಾದನಾ ಇಲಾಖೆ ತನ್ನ ಅಧಿಕೃತ ಟ್ವಟರ್ ನಲ್ಲಿ ಈ ವಿಷಯವನ್ನು ಹಂಚಿಕೊಂಡಿದೆ.
ದ್ವೈವಾರ್ಷಿಕ ಈ ವೈಮಾನಿಕ ಪ್ರದರ್ಶನದಲ್ಲಿ ದೇಶ ವಿದೇಶಗಳ ರಕ್ಷಣೆಗೆ ಸಂಬಂಧಿಸಿದ ಶಸ್ತ್ರಾಸ್ತ್ರಗಳ ಪ್ರದರ್ಶನ, ಒಡಂಬಡಿಕೆ, ವಿದೇಶಿ ಯುದ್ಧ ವಿಮಾನಗಳ ರೋಮಾಂಚಕಾರಿ ಹಾರಾಟ ಪ್ರದರ್ಶನ ಸೇರಿದಂತೆ ನಾನಾ ಚಟುವಟಿಕೆಗಳು ನಡೆಯಲಿದೆ.
1996ನೇ ಇಸವಿಯಿಂದ ಏರ್ ಶೋ ದ್ವೈವಾರ್ಷಿಕ ಪ್ರದರ್ಶನ ಆರಂಭವಾಗಿದೆ. ಕರೋನಾ ಸೋಂಕು ಹೆಚ್ಚಾಗಿದ್ದ ಕಾರಣಕ್ಕೆ 2021ನೇ ಇಸವಿಯ ಏರ್ ಶೋ ಹೈಬ್ರೀಡ್ ಶೋ ರೀತಿ ಪ್ರದರ್ಶನಕ್ಕೆ ಅವಕಾಶ ಕಲ್ಪಿಸಲಾಗಿತ್ತು. ಈ ಬಾರಿ ಕರೋನಾ ಸೋಂಕು ಬಹುತೇಕ ಇಳಿಕೆಯಾಗಿರುವ ಕಾರಣ ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ವೈಮಾನಿಕ ಪ್ರದರ್ಶನದಲ್ಲಿ ಪಾಲ್ಗೊಳ್ಳುವ ನಿರೀಕ್ಷೆಯಿದೆ.