ಬೆಂಗಳೂರು, ನ.26 www.bengaluruwire.com : ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (BBMP)ಯ ಜಾಹೀರಾತು ನೀತಿಗೆ ಸಂಬಂಧಿಸಿದ ಕಡತಗಳು ನಾಪತ್ತೆಯಾಗಿವೆ ಎಂಬ ಮಾಜಿ ಮುಖ್ಯಮಂತ್ರಿ ಹಾಗೂ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರ ಆರೋಪ ನಿರಾಧಾರವಾಗಿದ್ದು, ತಪ್ಪು ಮಾಹಿತಿ ನೀಡುವಂತದ್ದು ಎಂದು ನಗರಾಭಿವೃದ್ಧಿ ಇಲಾಖೆ (Urban Development Department) ಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಡಾ.ರಾಕೇಶ್ ಸಿಂಗ್ ಸ್ಪಷ್ಟಪಡಿಸಿದ್ದಾರೆ.
ಶನಿವಾರ ಬಿಡುಗಡೆ ಮಾಡಿದ ಹೇಳಿಕೆಯಲ್ಲಿ, ರಾಕೇಶ್ ಸಿಂಗ್ , ಬಿಬಿಎಂಪಿಯ ಜಾಹೀರಾತು ನೀತಿಯ ಕುರಿತು ಕೆಲವು ಸ್ಪಷ್ಟೀಕರಣವನ್ನು ಕೋರಿ ಫೈಲ್ ಸಂಖ್ಯೆ. UDD/439/MNU/2018 ಭಾಗ (2) ಅನ್ನು ಸಲ್ಲಿಸಲಾಗಿದೆ ಮತ್ತು ಅದು ಈಗ ಸ್ವೀಕರಿಸಲ್ಪಟ್ಟಿದೆ.
ಈ ಫೈಲ್ ಮತದಾರರ ಪಟ್ಟಿ ಪರಿಷ್ಕರಣೆ ಅಥವಾ ಯಾವುದೇ ಇತರ ವಿಷಯಗಳಿಗೆ ಸಂಬಂಧಿಸಿದ್ದಲ್ಲ. ಬಿಬಿಎಂಪಿಯ ಜಾಹೀರಾತು ನೀತಿಗೆ ಸಂಬಂಧಿಸಿದ ಎಲ್ಲ ಕಡತಗಳು (ಮುಖ್ಯ ಕಡತ, ಭಾಗ 1, ಭಾಗ 3 ಮತ್ತು ಭಾಗ 4) ನಗರಾಭಿವೃದ್ಧಿ ಇಲಾಖೆಯಲ್ಲಿವೆ.
ಬಿಬಿಎಂಪಿಯ ಜಾಹೀರಾತು ನೀತಿಗೆ ಸಂಬಂಧಿಸಿದ ಈ ಕಡತಗಳು ಯಾವುದೇ ಸಚಿವರ ಕಚೇರಿ ಅಥವಾ ಮುಖ್ಯಮಂತ್ರಿಗಳ ಕಚೇರಿಯಲ್ಲಿ ಕಾಣೆಯಾಗಿಲ್ಲ ಅಥವಾ ತಪ್ಪಿಹೋಗಿಲ್ಲ. ಆದರೆ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಲು ನಗರಾಭಿವೃದ್ಧಿ ಇಲಾಖೆಯಲ್ಲಿ ಹಾಗೆಯೇ ಇವೆ ಎಂದು ಅಧಿಕೃತ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.