ಬೆಂಗಳೂರು, ನ.24 www.bengaluruwire.com : ನಂದಿನಿ ಬ್ರಾಂಡಿನ ಎಲ್ಲಾ ರೀತಿಯ ಹಾಲು ಮತ್ತು ಮೊಸರಿನ ದರವನ್ನು ಪ್ರತಿ ಲೀಟರ್ ಗೆ 2 ರೂ. ಹೆಚ್ಚಳವಾಗಿದ್ದು ಇಂದಿನಿಂದ ನೂತನ ದರ ಚಾಲ್ತಿಗೆ ಬಂದಿದೆ. ಕರ್ನಾಟಕ ಹಾಲು ಮಹಾ ಮಂಡಳದ (KMF) ಬುಧವಾರ ನಡೆದ ಆಡಳಿತ ಮಂಡಳಿಯ ಸಭೆಯಲ್ಲಿ ಈ ತೀರ್ಮಾನ ಕೈಗೊಂಡಿದೆ.
ನ.14ರಂದು ಕೆಎಂಎಫ್ ಪ್ರತಿ ಲೀ. ಹಾಲಿನ ದರವನ್ನು 3 ರೂ. ಹೆಚ್ಚಿಸಿಲು ನಿರ್ಧಾರ ಮಾಡಿತ್ತು. ಇದಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ದರ ಹೆಚ್ಚಿಸದಂತೆ ಸೂಚಿಸಿದ್ದರು. ಗ್ರಾಹಕರು ಮತ್ತು ರೈತರಿಗೆ ಹೊರೆಯಾಗದಂತೆ ನಿರ್ಣಯ ಕೈಗೊಳ್ಳಿ ಎಂದು ಕೆಎಂಎಫ್ ಗೆ ಹೇಳಿದ್ದರು. ಮುಖ್ಯಮಂತ್ರಿಗಳ ಸೂಚನೆ ಅನ್ವಯ ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ನೇತೃತ್ವದಲ್ಲಿ ಆಡಳಿತ ಮಂಡಳಿ ಸಭೆಯಲ್ಲಿ ನೂತನ ಪರಿಷ್ಕೃತ ದರಗಳನ್ನು ತರಲು ತೀರ್ಮಾನಿಸಲಾಗಿತ್ತು.
ಹಾಲು ಒಕ್ಕೂಟಗಳಲ್ಲಿ ಹಳೆಯ ದರ ಮುದ್ರಿತವಾಗಿರುವ ಪ್ಯಾಕೆಟ್ ಗಳ ದಾಸ್ತಾನು ಸಾಕಷ್ಟಿದೆ. ಇವುಗಳು ಖಾಲಿಯಾಗುವ ತನಕ ಹಳೆಯ ದರ, ಮುದ್ರಿತ ಪ್ಯಾಕೇಟ್ ಗಳಲ್ಲಿ ಹಾಲು ಪೂರೈಕೆಯಾಗಲಿದೆ ಎಂದು ಕೆಎಂಎಫ್ ತಿಳಿಸಿದೆ.
ಕಳೆದ ಎರಡು ವರ್ಷಗಳಿಂದ ರಾಸುಗಳ ಸಾಕಣೆ ವೆಚ್ಚ ಹೆಚ್ಚಾಗಿರುವುದು, ಪಶು ಆಹಾರ ಉತ್ಪಾದನೆ ಬಳಸುವ ಮೆಕ್ಕೇಜೋಳ, ಭತ್ತದ ತೌಡು, ಹತ್ತಿಕಾಳು ಹಿಂಡಿ ಹಾಗೂ ಪೌಷ್ಠಿಕ ಪದಾರ್ಥಗಳ ಬೆಲೆ ಏರಿಕೆಯಾಗಿದೆ. ಹೀಗಾಗಿ ರೈತರ ಹಿತದೃಷ್ಟಿಯಿಂದ ನಂದಿನಿ ಹಾಲಿನ ದರ ಏರಿಕೆ ಮಾಡಲಾಗಿದೆ. ಗ್ರಾಹಕರಿಂದ ದೊರೆಯುವ ಒಂದು ರೂ. ಹಣದಲ್ಲಿ 75 ಪೈಸೆ ರೈತರಿಗೆ ಕೊಡುತ್ತೇವೆ ಎಂದು ಕೆಎಂಎಫ್ ವ್ಯವಸ್ಥಾಪಕ ನಿರ್ದೇಶಕ ಬಿ.ಸಿ.ಸತೀಶ್ ಹೇಳಿದ್ದಾರೆ.
ವಿವಿಧ ನಂದಿನ ಬ್ರ್ಯಾಂಡ್ ಹಾಲು – ಮೊಸರು ದರ ಎಷ್ಟು ಏರಿಕೆಯಾಗಿದೆ? :
*ನಂದಿನಿ ಟೋನ್ಡ್ ಹಾಲು ಪ್ರತಿ ಲೀಟರ್ ಗೆ 37 ರಿಂದ 39 ರೂ.
*ಹೋಮೋಜಿನೈಸ್ಡ್ ಟೋನ್ಡ್ ಹಾಲು ಲೀ. 38 ರಿಂದ 40 ರೂ.
*ಹೋಮೋಜಿನೈಸ್ಡ್ ಹಸುವಿನ ಹಾಲು ಲೀ. 42 ರಿಂದ 44 ರೂ.
*ಕೆಎಂಎಫ್ ನಂದಿನಿ ಸ್ಪೆಷಲ್ ಹಾಲು ಲೀ. 43 ರಿಂದ 45 ರೂ..
*ಹೋಮೋಜಿನೈಸ್ಡ್ ಸ್ಟಾಂಡರ್ಡ್ ಹಾಲು ಲೀ. 44 ರಿಂದ 46 ರೂ.
*ನಂದಿನಿ ಸಮೃದ್ಧಿ ಹಾಲು ಪ್ರತಿ ಲೀ. 48 ರಿಂದ 50 ರೂ.
*ಸಂತೃಪ್ತಿ ಹೋಮೋಜಿನೈಸ್ಡ್ ಹಾಲು ಲೀ. 50 ರಿಂದ 52 ರೂ.
*ನಂದಿನಿ ಮೊಸರು ಪ್ರತಿ ಕೆಜಿಗೆ 45 ರಿಂದ 47 ರೂ.ಗೆ ಏರಿಕೆಯಾಗಿದೆ.
ಹಾಲು ವಿತರಕರು ಹೇಳುವುದೇನು?
ಬೆಂಗಳೂರು ಸೇರಿದಂತೆ ಹಲವು ಜಿಲ್ಲೆಗಳಲ್ಲಿ ನಿರಂತರವಾಗಿ ಮನೆಗಳಿಗೆ ಹಾಲು ಪೂರೈಸುವ ಏಜಂಟರುಗಳು ಮೊದಲೇ ಗ್ರಾಹಕರಿಂದ ಹಣ ಪಡೆದು ಹಾಲಿನ ಚೀಟಿ ನೀಡಿರುತ್ತಾರೆ. ಈಗ ಏಕಾ ಏಕಿ ನ.24ರಿಂದ ನೂತನ ಹಾಲು- ಮೊಸರಿನ ದರ ಏರಿಸಿದರೆ ವ್ಯತ್ಯಾಸದ ಹಣ ಗ್ರಾಹಕರಿಂದ ವಸೂಲಿ ಮಾಡಲು ಕಷ್ಟವಾಗುತ್ತದೆ ಎಂದು ಹಾಲು- ಮೊಸರು ರಿಟೇಲ್ ವಿತರಕರಿಗೆ ಸಮಸ್ಯೆಯಾಗಲಿದೆ. ಅದರ ಬದಲು ಹಾಲು, ಮೊಸರು ದರ ಏರಿಕೆ ಪರಿಷ್ಕೃತ ದರಗಳನ್ನು ತಿಂಗಳ ಪ್ರಾರಂಭದಿಂದ ಜಾರಿಗೆ ತಂದರೆ ಅನುಕೂಲವಾಗುತ್ತದೆ ಎಂದು ಹಾಲು ವಿತರಕರೊಬ್ಬರು ವಾಸ್ತವ ಸಮಸ್ಯೆಯನ್ನು ಬಿಡಿಸಿ ಹೇಳಿದ್ದಾರೆ.
ರಿಟೇಲ್ ದಾರರಿಗೆ ಎಷ್ಟು ಹಣಕ್ಕೆ ಹಾಲು, ಮೊಸರು ಲಭ್ಯವಾಗುತ್ತದೆ ಹಾಗೂ ಅವರು ಎಷ್ಟು ದರದಲ್ಲಿ ನಂದಿನಿಯ ಎಲ್ಲಾ ಬ್ರ್ಯಾಂಡ್ ಹಾಲು ಮೊಸರನ್ನು ಮಾರಬಹುದು? ಆ ಉತ್ಪನ್ನಗಳ ಗರಿಷ್ಠ ಮಾರಾಟ ದರವೆಷ್ಟು? ಇಲ್ಲಿದೆ ಅವುಗಳ ಸಮಗ್ರ ಮಾಹಿತಿ :