ಬಸವನಗುಡಿಯ ಮೂರು ದಿನಗಳ ಕಡಲೆಕಾಯಿ ಪರಿಷೆ ಮಂಗಳವಾರಕ್ಕೆ ಮುಕ್ತಾಯವಾಗಲಿದೆ. ಕರೋನಾ ಸೋಂಕು ನಿವಾರಣೆಯಾದ ಬಳಿಕ ನಡೆಯುತ್ತಿರುವ ಐತಿಹಾಸಿಕ ಕಡಲೆಕಾಯಿ ಪರಿಷೆಗೆ ಲಕ್ಷಾಂತರ ಜನರು ಭೇಟಿ ಕೊಟ್ಟು ಹಳ್ಳಿಯ ಸೊಗಡಿನ ಈ ಜಾತ್ರೆಗೆ ಮೆರಗು ತಂದಿದ್ದಾರೆ. ಜಾತ್ರೆ ಅಂದ ಮೇಲೆ ಗೊಂಬೆ ವ್ಯಾಪಾರಿಗಳು, ಸಿಹಿ ತಿಂಡಿ ಮಾರುವವರು, ಆಟಿಕೆಗಳ ವ್ಯಾಪಾರಿಗಳು, ಕಡಲೇಕಾಯಿ ಮಾರುವವರು, ಬಲೂನು- ಮುಖವಾಡ ಮಾರುವವರು ಜೊತೆಗೆ ವಿದ್ಯುತ್ ದೀಪಗಳಿಂದ ಅಲಂಕೃತವಾದ ರಸ್ತೆಗಳು ಇವೆಲ್ಲ ಸಂಜೆಯ ಕಡಲೆ ಕಾಯಿ ಪರಿಷೆಯ ಪ್ರಪಂಚಕ್ಕೆ ಹೊಸ ಮೆರುಗನ್ನೇ ನೀಡುತ್ತೆ.