ಬೆಂಗಳೂರು, ನ.18 www.bengaluruwire.com : ರಾಜಧಾನಿ ಬೆಂಗಳೂರಿಗೆ ಕಾವೇರಿ ನೀರು ಪೂರೈಸುವ ಕೊಳವೆ ಮಾರ್ಗಗಳ ಬದಲಾವಣೆ ಕಾಮಗಾರಿಯನ್ನು ನ.21ರಂದು ಕೈಗೊಳ್ಳುತ್ತಿರುವುದರಿಂದ ನಗರದ ವಿವಿಧೆಡೆ ನೀರು ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ ಎಂದು ಬೆಂಗಳೂರು ಜಲಮಂಡಳಿ ತಿಳಿಸಿದೆ.
ನ.21ರ ಬೆಳಗ್ಗೆ 6ರಿಂದ ಸಂಜೆ 6 ಗಂಟೆಯವರೆಗೆ ಈ ಕೆಳಕಂಡ ಸ್ಥಳಗಳಲ್ಲಿ ನೀರು ಪೂರೈಕೆಯಲ್ಲಿ ವ್ಯತ್ಯಯವಿರಲಿದೆ : ಜಂಬೂ ಸವಾರಿ ದಿಣ್ಣೆ, ಪುಟ್ಟೇನಹಳ್ಳಿ, ಕೋಣನಕುಂಟೆ ಕ್ರಾಸ್, ಜರಗನಹಳ್ಳಿ, ಜೆ.ಪಿ.ನಗರ 4,5, 6 ಹಾಗೂ 7ನೇ ಹಂತ, ಚುಂಚಕಟ್ಟೆ ಮುಖ್ಯ ರಸ್ತೆ, ದೊರೆಸಾನಿಪಾಳ್ಯ, ಬನ್ನೇರುಘಟ್ಟ ಮುಖ್ಯರಸ್ತೆ, ಕೋಡಿಚಿಕ್ಕನಹಳ್ಳಿ, ಜಯದೇವ ಆಸ್ಪತ್ರೆ, ಬಿಳೇಕಹಳ್ಳಿ, ಕೋಡಿಚಿಕ್ಕಹಳ್ಳಿ, ಬೊಮ್ಮನಹಳ್ಳಿ, ಹೊಂಗಸಂದ್ರ, ಮಂಗನಮ್ಮನಪಾಳ್ಯ, ಹೊಸಪಾಳ್ಯ, 3ನೇ ಬ್ಲಾಕ್ ಕೋರಮಂಗಲ, ಶ್ರೀನಿವಾಗಿಲು, ಬಿಸ್ಮಿಲ್ಲಾ ನಗರ, ನಾರಾಯಣಪ್ಪ ಗಾರ್ಡನ್, ಬಾಲಾಜಿ ನಗರ, ಭವಾನಿ ನಗರ, ಎನ್.ಎಸ್.ಪಾಳ್ಯ ಸುತ್ತಮುತ್ತಲಿನ ಪ್ರದೇಶಗಳು.