ಬೆಂಗಳೂರು, ಅ.13 www.bengaluruwire.com : ನಮ್ಮ ಮೆಟ್ರೊ ನೂತನ ಮಾರ್ಗವಾದ ವೈಟ್‌ಫೀಲ್ಡ್‌ನಿಂದ ಗರುಡಾಚಾರ್ ಪಾಳ್ಯದ ಮೆಟ್ರೋ ನಿಲ್ದಾಣದವರೆಗಿನ ರೈಲು ವ್ಯವಸ್ಥೆಗಳ ಬಗ್ಗೆ ಬೆಂಗಳೂರು ಮೆಟ್ರೊ ರೈಲು ನಿಗಮ (BMRCL)ದ ವ್ಯವಸ್ಥಾಪಕ ನಿರ್ದೇಶಕ ಅಂಜುಮ್ ಪರ್ವೇಜ್ ಗುರುವಾರ ಇಡೀ ದಿನ ಪರಿಶೀಲನೆ ನಡೆಸಿದರು.
ಇದೇ ವೇಳೆ ಟ್ರ್ಯಾಕ್ ಮತ್ತು ಮೂರನೇ ಮೋಟಾರ್ ಟ್ರಾಲಿ ತಪಾಸಣೆ ನಡೆಸಿ ಮಾತನಾಡಿ, ಮೆಟ್ರೋ ಎಂಡಿ ಅಂಜುಮ್ ಪರ್ವೇಜ್, ವೈಟ್ ಫೀಲ್ಡ್ ಸೇರಿದಂತೆ ಎರಡನೇ ಹಂತದ ಕಾಮಗಾರಿಗಳ ಬಗ್ಗೆ ತೃಪ್ತಿ ವ್ಯಕ್ತಪಡಿಸಿದರು. 2023 ರ ಫೆಬ್ರವರಿ ಮೊದಲ ವಾರದಲ್ಲಿ ರೈಲು ಸುರಕ್ಷತೆಯ ಆಯುಕ್ತರನ್ನು ಆಹ್ವಾನಿಸಲು, ಜನವರಿ ಅಂತ್ಯದ ವೇಳೆಗೆ ಕಾಮಗಾರಿಗಳನ್ನು ಪೂರ್ಣಗೊಳಿಸಲು ಹೆಚ್ಚಿನ ವೇಗದ ಅಗತ್ಯವಿದೆ. ಈ ಬಗ್ಗೆ ಕ್ರಮ ಕೈಗೊಳ್ಳಿ ಎಂದ ಅಧಿಕಾರಿಗಳಿಗೆ ತಾಕೀತು ಮಾಡಿದರು.
ಭೈಯ್ಯಪ್ಪನಹಳ್ಳಿ ಯಲ್ಲಿ ಮೆಟ್ರೋ ಬೋಗಿಗಳನ್ನು ವೈಟ್ ಫೀಲ್ಡ್ ಡಿಪೋಗೆ ಗುರುವಾರ ರಾತ್ರಿ ಟ್ರಕ್ ಗಳಲ್ಲಿ ಜೋಡಿಸಿ ಸಾಗಿಸಲಾಗುತ್ತಿದೆ. ಶುಕ್ರವಾರ ಬೆಳಗ್ಗೆ 9.30ಕ್ಕೆ ಆ ಬೋಗಿಗಳನ್ನು ಟ್ರಕ್ ನಿಂದ ಇಳಿಸಲಾಗುತ್ತದೆ. ಅ.25ರಿಂದ ಭೈಯ್ಯಪ್ಪನಹಳ್ಳಿಯಿಂದ ವೈಟ್ ಫೀಲ್ಡ್ ನಡುವಿನ 15.5 ಕಿ.ಮೀ ಮಾರ್ಗದ ರೈಲು ಪರೀಕ್ಷೆ ಆರಂಭವಾಗಲಿದೆ ಎಂದು ಅವರು ಹೇಳಿದ್ದಾರೆ.
ಎಂಡಿ ಜೊತೆ ಮೆಟ್ರೊ ಆರ್ ಎಸ್ ಇ ನಿರ್ದೇಶಕ ಎನ್.ಎಂ ಧೋಕೆ ಮತ್ತು ಇತರ ಹಿರಿಯ ಅಧಿಕಾರಿಗಳು ಜೊತೆಗಿದ್ದರು.