ಬೆಂಗಳೂರು, ಅ.6 www.bengaluruwire.com : ಬೆಂಗಳೂರು ಜಲಮಂಡಳಿಯ 4ನೇ ಹಂತ 1ನೇ ಘಟ್ಟದ ವ್ಯಾಪ್ತಿಗೆ ಒಳಪಡುವ ಜೆ.ಡಿ.ಮರ ಬನ್ನೇರಘಟ್ಟ ರಸ್ತೆ ಸಮೀಪ ಹಾಲಿ ಇರುವ ಕೊಳವೆ ಮಾರ್ಗಕ್ಕೆ ಹೊಸದಾಗಿ 9೦೦ ಮಿ.ಮೀ. ವ್ಯಾಸದ ನೀರು ಸರಬರಾಜು ಮಾಡುವ ಕೊಳವೆ ಮಾರ್ಗವನ್ನು ಜೋಡಣೆ ಮಾಡುವ ಕಾಮಗಾರಿ ಕೈಗೆತ್ತಿಕೊಂಡಿರುವುದರಿಂದ ಶುಕ್ರವಾರ (ಅ.7) ಈ ಕೆಳಕಂಡ ಪ್ರದೇಶಗಳಲ್ಲಿ ಕಾವೇರಿ ನೀರು ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ ಎಂದು ಬೆಂಗಳೂರು ಜಲಮಂಡಳಿ ಪತ್ರಿಕಾ ಪ್ರಕಟಣೆಯಲ್ಲಿ ಹೇಳಿದೆ.
ಜೆ.ಪಿ.ನಗರ 4ನೇ ಹಂತದಿಂದ 8ನೇ ಹಂತದವರೆಗೂ, ಪುಟ್ಟೇನಹಳ್ಳಿ, ಜರಗನಹಳ್ಳಿ, ಆರ್.ಬಿ.ಐ.
ಲೇಔಟ್, ಪಾಂಡುರಂಗ ನಗರ, ಅರಕೆರೆ, ಮೈಕೋ ಲೇಔಟ್, ದೊರೆಸ್ವಾಮಿ ಪಾಳ್ಯ, ಕೊತ್ತನೂರು ದಿಣ್ಣೆ,
ವೆಂಕಟಾದ್ರಿಲೇಔಟ್, ಚುಂಚಘಟ್ಟ, ಕೋಣನಕುಂಟೆ, ಎಸ್.ಬಿ.ಎಂ.ಲೇಔಟ್, ಸುಪ್ರೀಂ ರೆಸಿಡೆನ್ಸಿ ಲೇಔಟ್, ಲೇಕ್
ಸಿಟಿ, ನಾದಮ್ಮ ಲೇಔಟ್, ರೋಟರಿ ನಗರ, ಕೋಡಿಚಿಕ್ಕನಹಳ್ಳಿ, ಹೆಚ್.ಎಸ್.ಆರ್. ಲೇಔಟ್ 1ನೇ ಸೆಕ್ಟರ್ ನಿಂದ 7ನೇ ಸೆಕ್ಟರ್ ವರೆಗೆ, ಅಗರ ವಿಲೇಜ್, ಮಂಗಮ್ಮನಪಾಳ್ಯ, ಮದೀನ ನಗರ, ಐಟಿಐ ಲೇಔಟ್, ಹೊಸಪಾಳ್ಯ,ಬಂಡೇಪಾಳ್ಯ, 4ನೇ ‘ಟಿ’ ಬ್ಲಾಕ್ ಜಯನಗರ, ಬಿ.ಜಿ.ರಸ್ತೆ ಪಾರ್ಟ್ ಆಫ್ 3ನೇ ಹಂತ 2ನೇ ಘಟ್ಟ, ಬಿ.ಜಿ.ರಸ್ತೆ ಈಸ್ಟ್ ರಸ್ತೆ, ಎನ್.ಎ.ಸಿ.ಲೇಔಟ್, ತಿಲಕನಗರ, ಜಯದೇವ ಆಸ್ಪತ್ರೆ, ಬಿ.ಟಿ.ಎಂ.2ನೇ ಮತ್ತು 3ನೇ ಹಂತ,
ಕೆ.ಎಸ್.ಕಾಲೋನಿ, ಮಡಿವಾಳ, ತಾವರೆಕೆರೆ, ಐಕ್ಯೂಬ್ ನಗರ, ನಾರಾಯಣಪ್ಪ ಗಾರ್ಡನ್, ಡಾಲರ್ಸ್
ಕಾಲೋನಿ, ಸೋಮೇಶ್ವರ ಕಾಲೋನಿ, ವೆಂಕಟಾಪುರ, ಟೀಚರ್ಸ್ ಕಾಲೋನಿ, ಸಿದ್ದಾರ್ಥ ಕಾಲೋನಿ,
ಕೋರಮಂಗಳ 4ನೇ ‘ಇ’ ಬ್ಲಾಕ್ ಮತ್ತು ‘ಜೆ’ ಬ್ಲಾಕ್ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ನೀರು
ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ.
ಹೀಗಾಗಿ ಈ ಮೇಲ್ಕಂಡ ಪ್ರದೇಶದ ವ್ಯಾಪ್ತಿಯಲ್ಲಿರುವ ಸಾರ್ವಜನಿಕರು ಕಾವೇರಿ ನೀರು ಪೂರೈಕೆಯಲ್ಲಿ ವ್ಯತ್ಯಯವಿರುವ ಕಾರಣ ಮುನ್ನೆಚ್ಚರಿಕೆವಹಿಸುವಂತೆ ಎಂದು ಬೆಂಗಳೂರು ಜಲಮಂಡಳಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.