ಉಡುಪಿ, ಸೆ.26 www.bengaluruwire.com : ಜಿಲ್ಲೆಯ ಆರೂರಿನ ಶ್ರೀ ಕ್ಷೇತ್ರ ಕುರ್ಡುಂಜೆ ಮಠದ 22ನೆಯ ವರ್ಷದ ನವರಾತ್ರಿ ಮಹೋತ್ಸವದ ಅಂಗವಾಗಿ ಮೊದಲ ದಿನದ ದುರ್ಗಾ ದೇವಿಯ ಪೂಜೆ ಶಾಸ್ತ್ರೋಕ್ತವಾಗಿ ನೆರವೇರಿತು.
ಸೆ.26ರಿಂದ ಅಕ್ಟೋಬರ್ 4ನೆಯ ತಾರೀಖಿನವರೆಗೆ ಶ್ರೀ ದೇವರಿಗೆ ದುರ್ಗಾಹೋಮ, ಶ್ರೀ ಅನ್ನಪೂರ್ಣೇಶ್ವರಿ ದೇವರಿಗೆ ಪಂಚಾಮೃತ ಅಭಿಷೇಕ, ಸಪ್ತಶತಿ ಪಾರಾಯಣ, ಕಲ್ಪೋಕ್ತ ಪ್ರಸನ್ನ ಪೂಜಾ, ಭಾಗೀನ ಸೇವೆ, ಪ್ರಸಾದ ವಿತರಣೆ ಹಾಗೂ ಅನ್ನಸಂತರ್ಪಣೆ ಕಾರ್ಯಕ್ರಮ ನಡೆಯಲಿದೆ ಎಂದು ಶ್ರೀ ಕ್ಷೇತ್ರ ಕುರ್ಡುಂಜೆ ಮಠದ ಅರ್ಚಕರು ಹಾಗೂ ಅನುವಂಶಿಕ ಮೊಕ್ತೇಸರರಾದ ಕೆ.ಜನಾರ್ದನ್ ಭಟ್ ತಿಳಿಸಿದ್ದಾರೆ.
ಅ.2ರಿಂದ ಸಂಜೆ 6:30ರಿಂದ ದುರ್ಗಾ ನಮಸ್ಕಾರ ಪೂಜೆ ಮತ್ತು ಪ್ರಸಾದ ವಿತರಣೆ, ಅ.5ರ ಬುಧವಾರ ಬೆಳಗ್ಗೆ 8 ಗಂಟೆಯಿಂದ ಭಕ್ತಾದಿಗಳ ಸೇವಾರೂಪವಾಗಿ “ಸಾರ್ವಜನಿಕ ಚಂಡಿಕಾ ಹೋಮ”, ಆರು ವರ್ಷದ ಮಕ್ಕಳಿಗೆ ಅಕ್ಷರಾಭ್ಯಾಸ, ಕಲ್ಪೋಕ್ತ ಪ್ರಸನ್ನ ಪೂಜೆ ನಡೆಯಲಿದೆ. ಅದೇ ದಿನ ಮಧ್ಯಾಹ್ನ 1ರಿಂದ ಬ್ರಾಹ್ಮಣ ಸುವಾಸಿನಿ ಆರಾಧನೆ ಹಾಗೂ ಸಾರ್ವಜನಿಕ ಅನ್ನಸಂತರ್ಪಣೆ ಕಾರ್ಯಕ್ರಮ ಜರುಗಲಿದೆ.
ಅದೇ ದಿನ ಸಂಜೆ 7ಗಂಟೆಯಿಂದ ಹೂವಿನ ಪೂಜೆ, 7.30ರಿಂದ ಭಾಗವತರಾದ ಶಂಕರಭಟ್ಟ ಬ್ರಹ್ಮೂರು ಹಾಗೂ ಪರಮೇಶ್ವರ ಭಂಡಾರಿ ಕರ್ಕಿ ಮದ್ದಳೆಯಲ್ಲಿ ಯಕ್ಷಗಾನ ಬಯಲಾಟ ಪ್ರಸಂಗ “ಭೀಷ್ಮಪ್ರತಿಜ್ಞೆ” ನಡೆಯಲಿದೆ.