ಬೆಂಗಳೂರು,ಸೆ.11 www.bengaluruwire.com : ಶ್ರೀ ನಾರಾಯಣಗುರುಗಳ ಆದರ್ಶ, ವಿಚಾರಧಾರೆಗಳು ಇಂದಿಗೂ ಪ್ರಸ್ತುತ ಎಂದು ರೇಷ್ಮೆ, ಯುವ ಸಬಲೀಕರಣ ಮತ್ತು ಕ್ರೀಡಾ ಸಚಿವ ಡಾ.ನಾರಾಯಣಗೌಡ ಅವರು ಸ್ಮರಿಸಿದರು.
ಬಿಲ್ಲವ ಅಸೋಸಿಯೇಷನ್ ಬೆಂಗಳೂರು ವತಿಯಿಂದ ಭಾನುವಾರ ಆಯೋಜಿಸಿದ್ದ ಬ್ರಹ್ಮಶ್ರೀ ನಾರಾಯಣಗುರುಗಳ 168ನೇ ಜಯಂತೋತ್ಸವದಲ್ಲಿ ಪಾಲ್ಗೊಂಡಿದ್ದ ಸಚಿವ ಡಾ.ನಾರಾಯಣಗೌಡ ಅವರು, ಬಿಲ್ಲವ ಅಸೋಸಿಯೇಷನ್ ಗೂ ನನಗೂ ಅವಿನಾಭಾವ ಸಂಬಂಧವಿದೆ. 30-35 ವರ್ಷಗಳಿಂದ ಬಿಲ್ಲವ ಅಸೋಸಿಯೇಷನ್ ಜೊತೆ ನನ್ನ ಸಂಬಂಧ ಇದೆ ಎಂದು ಬಿಲ್ಲವರ ಜೊತೆಗಿನ ತಮ್ಮ ಸಂಬಂಧವನ್ನು ಮೆಲುಕು ಹಾಕಿದರು.
ನಾರಾಯಣಗುರುಗಳು ಒಂದು ಜಾತಿ, ಒಂದು ಧರ್ಮಕ್ಕೆ ಸೀಮಿತರಲ್ಲ. ಬಡವರು ಶೋಷಿತರ ಪರವಾಗಿ ನಿಂತು ಶ್ರಮಿಸಿದವರು. ಗುರುಗಳ ವಿಚಾರಧಾರೆ ಇಂದಿಗೂ ಪ್ರಸ್ತುತವಾಗಿವೆ ಎಂದು ಸಚಿವರು ಹೇಳಿದರು.
ಕರ್ನಾಟಕ ಆರ್ಯ ಈಡಿಗರ ಸಂಘದ ಅಧ್ಯಕ್ಷ ತಿಮ್ಮೇಗೌಡ, ಬಿಲ್ಲವ ಅಸೋಸಿಯೇಷನ್ ಅಧ್ಯಕ್ಷ ವೇದಕುಮಾರ್, ಬಿಲ್ಲವ ಅಸೋಸಿಯೇಷನ್ ಮಹಿಳಾ ಘಟಕದ ಅಧ್ಯಕ್ಷೆ ಜಲಜ ಶೇಖರ್ ಹಾಗೂ ಚೆಫ್ ಟಾಕ್ ಮಾಲೀಕರಾದ ಗೋವಿಂದ ಪೂಜಾರಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.