ಬೆಂಗಳೂರು, ಆ.14 www.bengaluruwire.com : ದೇಶದ ಸ್ವಾತಂತ್ರ್ಯ ಅಮೃತ ಮಹೋತ್ಸವ ಅಂಗವಾಗಿ ಏರ್ ವಾರಿಯರ್ ಸಿಂಫೊನಿ ವಾದ್ಯತಂಡ ಭಾನುವಾರ ಲಾಲ್ ಬಾಗ್ ಫಲಪುಷ್ಪ ಪ್ರದರ್ಶನದ ನಡುವೆ ದೇಶಭಕ್ತಿ ಸಾರುವ ಸಂಗೀತವನ್ನು ಪ್ರಸ್ತುತಪಡಿಸಿತು.
ಜಲಹಳ್ಳಿಯಲ್ಲಿರುವ ವಾಯುನೆಲೆಯಲ್ಲಿನ ಟ್ರೈನಿಂಗ್ ಕಮಾಂಡ್ ಲಾಲ್ ಬಾಗ್ ಬೊಟಾನಿಕಲ್ ಉದ್ಯಾನವನದಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಮೊದಲಿಗೆ ತಿರಂಗ ಸೇನಾನಿ ಗಾಯನವನ್ನು ಪ್ರಸ್ತುತಪಡಿಸಲಾಯಿತು. ಬಳಿಕ ಕನ್ನಡ ಹಾಗೂ ಹಿಂದಿಯಲ್ಲಿ ರಾಗಗಳನ್ನು ವಾದ್ಯತಂಡ ನುಡಿಸಿ, ನೆರೆದ ಪ್ರೇಕ್ಷಕರು ದೇಶಭಕ್ತಿಯಲ್ಲಿ ಮಿಂದೇಳುವಂತೆ ಮಾಡಿತು.
ಒಟ್ಟಾರೆ ಏರ್ ವಾರಿಯರ್ ಸಿಂಫೊನಿ ಬ್ಯಾಂಡ್ 16 ರಾಗಗಳನ್ನು ನುಡಿಸಿತು. ಇದರಿಂದ ಭಾನುವಾರ ಫಲಪುಷ್ಪ ಪ್ರದರ್ಶನಕ್ಕೆ ಬಂದವರಿಗೆ ಬ್ಯಾಂಡ್ ಸಂಗೀತ ಮುದ ನೀಡಿತು.
ಫ್ಲೈಟ್ ಲೆಫ್ಟಿನೆಂಟ್ ರೂಪೇಶ್ ಚಂದ್ರ ನೇತೃತ್ವದಲ್ಲಿ ಈ ಕಾರ್ಯಕ್ರಮ ನೆರವೇರಿತು. ಜಲಹಳ್ಳಿಯಲ್ಲಿರುವ ವಾಯುನೆಲೆಯ ಏರ್ ಆಫೀಸರ್ ಏರ್ ಕಮಾಂಡರ್ ಎನ್.ಕೆ.ನಾಯರ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.