ಬೆಂಗಳೂರು, ಆ.04 www.bengaluruwire.com : ಇಂದಿರಾಗಾಂಧಿ ರಾಷ್ಟ್ರೀಯ ಮುಕ್ತ ವಿಶ್ವವಿದ್ಯಾಲಯದಲ್ಲಿ ವಿದ್ಯಾರ್ಥಿಗಳ ಭವಿಷ್ಯದ ಒಳತಿಗಾಗಿ ಹಾಗೂ ಉನ್ನತ ಶಿಕ್ಷಣ ನೀಡಬೇಕೆಂಬ ಉದ್ದೇಶದಿಂದ ಸ್ನಾತಕೋತ್ತರ ಪದವಿ ಮತ್ತು ಸರ್ಟಿಫಿಕೇಟ್ ಕೋರ್ಸ್ ಗಳಲ್ಲಿ 22 ವಿನೂತನ ಕೋರ್ಸುಗಳನ್ನು ಪ್ರಾರಂಭಿಸಲಾಗಿದೆ ಎಂದು ಇಂದಿರಾಗಾಂಧಿ ರಾಷ್ಟ್ರೀಯ ಮುಕ್ತ ವಿಶ್ವವಿದ್ಯಾಲಯದ (IGNOU) ಹಿರಿಯ ಪ್ರಾದೇಶಿಕ ನಿರ್ದೇಶಕರಾದ ಡಾ.ಎಸ್ ರಾಧಾ ರವರು ತಿಳಿಸಿದ್ದಾರೆ.
ನಗರದ ಇಗ್ನೋ ಪ್ರಾದೇಶಿಕ ಕೇಂದ್ರದಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ವಿವಿಧ ರೀತಿಯ ಕೋರ್ಸ್ ಗಳಾದ ಸ್ನಾತಕೋತ್ತರ ಪದವಿಗಳಾದ ಎಂ.ಬಿ.ಎ.ಹೆಚ್.ಎಮ್ (Master Of Business Administration In Human Resource Management ), ಎಂ.ಬಿ.ಎ.ಎಫ್.ಎಂ, ಎಂ.ಬಿ.ಎ.ಒ.ಎಂ, ಎಂ.ಬಿ.ಎ.ಎಂ.ಎಂ, ಎಂ.ಎಸ್.ಸಿ.ಡಿ.ಎಫ್.ಎಸ್.ಎಂ, ಎಂ.ಎ.ಹೆಚ್.ವಿ, ಎಂ.ಎ.ಎ.ಆರ್.ಬಿ, ಬಿ.ಎ.ವಿ.ಎಸ್, ಪಿ.ಜಿ.ಡಿ.ಎ.ಎಂ.ಎಲ್ ಇನ್ನೂ ಮುಂತಾದ ಪಿ.ಜಿ ಗ್ರಾಜ್ಯುಯೇಟ್ ಕೋರ್ಸ್ ಮತ್ತು ಸರ್ಟಿಫಿಕೇಟ್ ಕೋರ್ಸ್ ಗಳನ್ನು ಪ್ರಾರಂಭಿಸಲಾಗಿದ್ದು ಆಸಕ್ತಿಯುಳ್ಳ ಅಭ್ಯರ್ಥಿಗಳು ಅರ್ಜಿಗಳನ್ನು ಸಲ್ಲಿಸಬಹುದಾಗಿದೆ ಎಂದು ಹೇಳಿದರು.
ಈ ಬಾರಿಯ ಪ್ರವೇಶಾತಿಯಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳಿಗೆ 54 ಕೋರ್ಸ್ ಗಳಿಗೆ ಉಚಿತ ಪ್ರವೇಶಾತಿಯನ್ನು ನೀಡಲಾಗಿದ್ದು, ಈ ಅಭ್ಯರ್ಥಿಗಳಿಗೆ ವಿದ್ಯಾರ್ಥಿ ವೇತನ ಸೌಲಭ್ಯವನ್ನು ಕಲ್ಪಿಸಲಾಗಿದೆ ಎಂದರು.
ರಾಷ್ಟ್ರೀಯ ಕೌಶಲ್ಯ ತರಬೇತಿ ಸಂಸ್ಥೆಗಳು (NSTI), ಐಟಿಐ ಗಳು, ಪ್ರಧಾನ ಮಂತ್ರಿ ಕೌಶಲ್ ಕೇಂದ್ರಗಳು (PMKK) ತರಬೇತಿಗಾಗಿ ಉನ್ನತ ಶಿಕ್ಷಣಕ್ಕೆ ವೃತ್ತಿಪರ ಶಿಕ್ಷಣ ಮತ್ತು ತರಬೇತಿಯನ್ನು ಸಂಯೋಜಿಸಲು ಎಂ ಎಸ್ ಡಿ ಇ ( ಭಾರತದ ಕೌಶಲ್ಯ ಅಭಿವೃದ್ಧಿ ಮತ್ತು ವಾಣಿಜ್ಯೋದ್ಯಮ ಸರ್ಕಾರದ ಸಚಿವಾಲಯ) ಜೊತೆಗೆ ಇಗ್ನೊ ಸಹಿ ಹಾಕಿದೆ ಎಂದು ಅವರು ತಿಳಿಸಿದರು.
ಆಸಕ್ತ ವಿದ್ಯಾರ್ಥಿಗಳು ಆನ್ ಲೈನ್ ನೋಂದಣಿಗಾಗಿ ಅಥವಾ ಪ್ರವೇಶಕ್ಕಾಗಿ www.ignou.ac.in (ignou.samarth.edu.in) ಗೆ ಭೇಟಿ ನೀಡಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ಇ-ಮೇಲ್ [email protected] ಹಾಗೂ ವಾಟ್ಸಾಪ್ ಸಂ.9449337272, ದೂ.ಸಂ. 080-29607272 ಗೆ ಸಂಪರ್ಕಿಸಬಹುದು ಅಥವಾ ಇಗ್ನೋ ಪ್ರಾದೇಶಿಕ ಕೇಂದ್ರಕ್ಕೆ ಖುದ್ದಾಗಿ ಭೇಟಿ ನೀಡಬಹುದು ಎಂದು ಮಾಹಿತಿ ನೀಡಿದರು.
ಇದೇ ಸಂದರ್ಭದಲ್ಲಿ ಹರ್ ಘರ್ ತಿರಂಗಾ ಅಭಿಯಾನದಡಿ ಕಚೇರಿಯ ಸಿಬ್ಬಂದಿಗಳಿಗೆ ರಾಷ್ಟ್ರ ಧ್ವಜವನ್ನು ವಿತರಿಸಿದರು. ಪತ್ರಿಕಾಗೋಷ್ಠಿಯಲ್ಲಿ ರಾಷ್ಟ್ರೀಯ ಕೌಶಲ್ಯ ತರಬೇತಿ ಸಂಸ್ಥೆಯ ನಿರ್ದೇಶಕರಾದ ಡಾ.ಎಸ್ ಶ್ರೀಧರ್, ಇಂದಿರಾಗಾಂಧಿ ರಾಷ್ಟ್ರೀಯ ಮುಕ್ತ ವಿಶ್ವವಿದ್ಯಾಲಯದ ಪ್ರಾದೇಶಿಕ ನಿರ್ದೇಶಕರಾದ ಡಾ. ಹೇಮಮಾಲಿನಿ, ಡಾ.ಎಸ್ ಷಣ್ಮುಗಂ,ಉಪಸ್ಥಿತರಿದ್ದರು.