ನವದೆಹಲಿ, ಜು.29 www.bengaluruwire.com : ಆದಾಯ ತೆರಿಗೆ ಇಲಾಖೆಗೆ ಜು.28ನೇ ತಾರೀಖಿನವರೆಗೆ ಒಟ್ಟು 4.09 ಕೋಟಿ ತೆರಿಗೆದಾರರು ತಮ್ಮ ಆದಾಯ ತೆರಿಗೆ ವಿವರವನ್ನು (IT Return) ಸಲ್ಲಿಕೆ ಮಾಡಿದ್ದಾರೆ ಎಂದು ಇಲಾಖೆ ತಿಳಿಸಿದೆ.
2022-23ನೇ ಮೌಲ್ಯಮಾಪನಾ ವರ್ಷದ ಆದಾಯ ತೆರಿಗೆ ವಿವರ ಸಲ್ಲಿಸಲು ಜು.31 ಕೊನೆಯ ದಿನವಾಗಿದೆ. ಜು.28ರಂದು ಒಂದೇ ದಿನ 36 ಲಕ್ಷ ಮಂದಿ ತಮ್ಮ ಐಟಿಆರ್ ಸಲ್ಲಿಕೆ ಮಾಡಿದ್ದಾರೆ ಎಂದು ಆದಾಯ ತೆರಿಗೆ ಇಲಾಖೆಯು ಟ್ವೀಟ್ ಮಾಡಿದೆ.
ಜು.31 ರ ನಂತರ ಐಟಿಆರ್ ಸಲ್ಲಿಸಿದರೆ ಅದಕ್ಕೆ ದಂಡ ವಿಧಿಸಲಾಗುತ್ತದೆ. ಹಾಗಾಗಿ ದಂಡ ಮೊತ್ತವನ್ನು ತಪ್ಪಿಸಲು ಐಟಿ ಫೈಲ್ ಮಾಡಿ ಎಂದು ತಿಳಿಸಿದೆ.