ಬೆಂಗಳೂರು, ಜು.18 www.bengaluruwire.com :
ನಂದಿನಿ ಮೊಸರು, ಮಜ್ಜಿಗೆ, ಲಸ್ಸಿ ಮೇಲೆ ಜಿಎಸ್ ಟಿ ತೆರಿಗೆ ಸೇರ್ಪಡೆಯಿಂದ ಹೆಚ್ಚಾಗಿದ್ದ ದರವನ್ನು ಕರ್ನಾಟಕ ಸಹಕಾರಿ ಹಾಲು ಉತ್ಪಾದಕರ ಮಹಾಮಂಡಲ ನಿಯಮಿತ (KMF)ಮರು ಪರಿಷ್ಕರಣೆ ಮಾಡಿದೆ.
ನಂದಿನಿ ಬ್ರಾಂಡಿನ ಮೊಸರು, ಮಜ್ಜಿಗೆ, ಲಸ್ಸಿ ಬಿಡಿ ಮಾರಾಟ ದರಗಳು ಶೇ.5 ಜಿಎಸ್ ಟಿ ತೆರಿಗೆ ಸೇರಿ ಸೋಮವಾರದಿಂದ 1 ರೂ.ನಿಂದ 3 ರೂ. ತನಕ ಏರಿಕೆಯಾಗಿತ್ತು. ಈ ಬಗ್ಗೆ ನಿನ್ನೆಯಷ್ಟೆ ಕೆಎಂಎಫ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿತ್ತು.
ದರ ಇಳಿಕೆ ಮಾಡುವ ಬಗ್ಗೆ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಒತ್ತಡ ಬಂದ ಹಿನ್ನಲೆಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೂಚನೆ ಮೇರೆಗೆ ಕೆಎಂಎಫ್ ಹಾಲಿನ ಉತ್ಪನ್ನಗಳ ದರವನ್ನು 50 ರೂ. ನಿಂದ 2 ರೂ. ತನಕ ಮರು ಪರಿಷ್ಕರಣೆ ಮಾಡಿದೆ.
ಮೊಸರು, ಮಜ್ಜಿಗೆ ಮತ್ತು ಲಸ್ಸಿ ಮೇಲೆ ಶೇ.5 ರಷ್ಟು ಜಿ.ಎಸ್.ಟಿ ದರ ಹೆಚ್ಚಾಗಿತ್ತು. ಆದರೆ ಇಂದು ಸಂಜೆಯೊಳಗೆ ದರ ಮರು ಪರಿಷ್ಕರಣೆ ಮಾಡಲಾಗಿದೆ.
ಮುಂದಿನ ವರ್ಷ ರಾಜ್ಯದಲ್ಲಿ ಸಾರ್ವತ್ರಿಕ ವಿಧಾನಸಭಾ ಚುನಾವಣೆಯಿದೆ. ಗ್ಯಾಸ್, ಎಣ್ಣೆ- ಬೇಳಕಾಳು, ದವಸಧಾನ್ಯಗಳು ಸೇರಿದಂತೆ ವಿವಿಧ ವಸ್ತುಗಳ ಬೆಲೆ ಏರಿಕೆ ಬಗ್ಗೆ ಜನರು ಈಗಾಗಲೇ ಪರಿತಪಿಸುತ್ತಿರುವಾಗ ಗಾಯದ ಮೇಲೆ ಬರೆ ಎಳೆದಂತೆ ಅಗತ್ಯವಸ್ತುಗಳಾದ ಹಾಲಿನ ಉತ್ಪನ್ನದ ಮೇಲೂ ಶೇ.5ರ ಜಿಎಸ್ ಟಿ ದರ ಸೇರ್ಪಡೆಯಾಗಿ ಬೆಲೆ ಹೆಚ್ಚಳವಾಗಿತ್ತು. ಇದರಿಂದ ನಾಗರೀಕರ ಮನತಣಿಸಲು ಸಿಎಂ ಬೊಮ್ಮಾಯಿ ಕೆಎಂಎಫ್ ಗೆ ದರ ಪರಿಷ್ಕರಣೆಗೆ ಸೂಚನೆ ನೀಡಿದ್ದಾರೆ.