ಬೆಂಗಳೂರು, ಜು.16 www.bengaluruwire.com : ವಿಪ್ರ ಬ್ಯುಸಿನೆಸ್ ಫೋರಮ್ (Vipra Business Forum) ವಾಣಿಜ್ಯೋದ್ಯೋಮಿಗಳ 5ನೇ ವರ್ಷದ ಹಲವು ಉತ್ಪನ್ನಗಳ ವಸ್ತು ಪ್ರದರ್ಶನ ಹಾಗೂ ಮಾರಾಟ ಮೇಳ ನಗರದ ಗಾಂಧಿಬಜಾರ್ ಡಿವಿಜಿ ರಸ್ತೆಯ ಅಬಲಾಶ್ರಮದಲ್ಲಿ ಜು.15ರಿಂದ 17ನೇ ತಾರೀಖಿನ ವರೆಗೆ ನಡೆಯುತ್ತಿದೆ.
ಈ ಮೇಳದಲ್ಲಿ ಬ್ರಾಹ್ಮಣ ವಾಣಿಜ್ಯೋದ್ಯಮಿಗಳು ತಮ್ಮ ಉತ್ಪನ್ನ, ವಸ್ತುಗಳ ಪ್ರದರ್ಶನ ಮತ್ತು ಮಾರಾಟವನ್ನು ಮಾಡುವುದರ ಜೊತೆಗೆ ಪ್ರಮುಖ ವಾಣಿಜ್ಯೋದ್ಯಮಿಗಳು ತಮ್ಮ ಸೇವೆ, ಉತ್ಪನ್ನಗಳ ಬಗ್ಗೆ ತಿಳಿಸಲು ವಿಶೇಷ ಸಮ್ಮೇಳನವನ್ನು ಆಯೋಜಿಸಲಾಗಿದೆ.
ವಿಪ್ರ ಬ್ಯುಸಿನೆಲ್ ಫೋರಮ್ ವಸ್ತು ಪ್ರದರ್ಶನ ಮತ್ತು ಮಾರಾಟ ಮೇಳದಲ್ಲಿ ಒಟ್ಟು 26 ಸ್ಟಾಲ್ ಗಳಿವೆ. ಅದರಲ್ಲಿ ಪ್ರಮುಖವಾಗಿ ಆಹಾರ ಪದಾರ್ಥ, ಬಳಪದ ಕಲ್ಲಿನ ಪಾತ್ರೆಗಳು, ಗೃಹೋಪಯೋಗಿ ವಸ್ತುಗಳು, ಸರ್ಕಾರದ ಕಾಶಿಯಾತ್ರೆ ಸಬ್ಸೀಡಿ ಸೌಲಭ್ಯ ಪಡೆದುಕೊಳ್ಳಲು ನೋಂದಣಿ, ತತ್ವಮಸಿಯೆಂಬ ಭಾರತೀಯ ಸನಾತನ ಸಂಸ್ಕೃತಿಯ ಸರ್ಕಾರೇತರ ಸಂಸ್ಥೆ, ಪೂಜಾ ಸಾಮಗ್ರಿಗಳ ಮಾರಾಟ, ವಿಭಿನ್ನ ಬಗೆಯ ಪೂಜಾ ದೀಪಗಳು, ಮಡಿ ಒಲೆ, ಗೃಹಸಾಲ, ಕರಕುಶಲ ವಸ್ತುಗಳು ಸೇರಿದಂತೆ ಮತ್ತಿತರ ವಸ್ತುಗಳನ್ನು ಪ್ರದರ್ಶನ ಮತ್ತು ಮಾರಾಟಕ್ಕೆಇಡಲಾಗಿದೆ. ಹೂಡಿಕೆ ಮತ್ತು ಹಣಕಾಸು ಸೇವೆ, ಗೃಹಸಾಲ, ವಧುವರಾನ್ವೇಷಣಾ ಸೇವೆ, ಶುಭಸಮಾರಂಭಗಳ ಆಯೋಜನೆ ಸೇರಿದಂತೆ ಮತ್ತಿತರ ಸೇವೆಗಳ ಕುರಿತ ಮಳಿಗೆಗಳನ್ನು ಸ್ಥಾಪಿಸಲಾಗಿದೆ.
ವಿಪ್ರ ವಾಣಿಜ್ಯೋದ್ಯಮಿಗಳಿಗೆ ಸ್ವಯಂ ಉದ್ಯೋಗ ಕೈಗೊಳ್ಳುವವರಿಗೆ ವಿಪ್ರೋ ಬ್ಯುಸಿನೆಸ್ ಫೋರಮ್ ಒಂದು ವೇದಿಕೆ ಒದಗಿಸಿದ್ದು, ವಿವಿಧ ಕ್ಷೇತ್ರಗಳ 700ಕ್ಕೂ ಹೆಚ್ಚು ಉದ್ಯಮಿಗಳಿಗೆ ತಮ್ಮ ವ್ಯವಹಾರ ಚಟುವಟಿಕೆಗಳಿಗೆ ಪರಸ್ಪರ ಸಹಾಯವಾಗುವ ರೀತಿಯಲ್ಲಿ ಈ ಫೋರಮ್ ನಿಂದ ಅನುಕೂಲವಾಗಿದೆ ಎಂದು ಹೇಳುತ್ತಾರೆ ವಿಪ್ರ ಬ್ಯುಸಿನೆಸ್ ಫೋರಮ್ ನ ಅಧ್ಯಕ್ಷರಾದ ಜಯತೀರ್ಥ.
ಸೂಜಿಗಲ್ಲಿನಂತೆ ಸೆಳೆಯುತ್ತಿದೆ ತಮಾಲ ಎಂಬ ಕರಕುಶಲ ಉತ್ಪನ್ನ ಮಳಿಗೆ :
ಈ ಮಾರಾಟ ಮೇಳದಲ್ಲಿ ತಮಾಲ ಎಂಬ ಸಂಸ್ಥೆಯ ಗ್ರಾಮೀಣ ಕರಕುಶಲ ಉತ್ಪನ್ನದ ಪ್ರದರ್ಶನ ಮತ್ತು ಮಾರಾಟ ಮಳಿಗೆಯನ್ನು ನೋಡುಗರನ್ನು ತನ್ನತ್ತ ಸೆಳೆಯುತ್ತಿದೆ. ತಮಾಲ ಎಂದರೆ ನಿರಂತರ ಹಸಿರಾಗಿರುವ ಮರ ಅರ್ಥ. ಜೆಪಿ ನಗರದಲ್ಲಿ ಕಚೇರಿಯನ್ನು ಹೊಂದಿರುವ ತಮಾಲ ಎಂಬ, ದೇಶದ 13 ರಾಜ್ಯಗಳಲ್ಲಿನ 41 ವಿಭಾಗಗಳಲ್ಲಿನ 150 ಗ್ರಾಮೀಣ ಕರಕುಶಲ ಕಲಾವಿದರು ಹಾಗೂ ನಗರ ಪ್ರದೇಶದ 15 ಕಲಾವಿದರ ಛಾಯಾಚಿತ್ರ, ಕಲ್ಲಿನ ಕೆತ್ತನೆ, ಚಿತ್ರಕಲೆ, ಕಸೂತಿ, ಕರಕುಶಲ ಆಭರಣಗಳು, ಲ್ಯಾಟರ್ನ್ಸ್, ಆಟಿಕೆ, ಭಾರತದ ಸಾಂಪ್ರದಾಯಿಕ ಆಟಗಳು ಸೇರಿದಂತೆ ಸುಮಾರು 300 ವಿವಿಧ ರೀತಿಯ ಉತ್ಪನ್ನಗಳನ್ನು ಗ್ರಾಹಕರಿಗೆ ಒದಗಿಸುತ್ತಿದೆ.
ದೇಶದಲ್ಲಿನ ಕರಕುಶಲ ಕಲಾವಿದರ ಬದುಕಿಗೆ ಆಸರೆಯಾಗುವ ನಿಟ್ಟಿನಲ್ಲಿ ತಮಾಲ ಆ ಕಲಾವಿದರ ಉತ್ಪನ್ನಕ್ಕೆ ಮಾರುಕಟ್ಟೆ ಒದಗಿಸಿ, ಆ ಕಲಾವಿದರ ಜೀವನಕ್ಕೆ ಒಂದು ದಾರಿ ಮಾಡಿಕೊಡುವ ಉದ್ದೇಶದಿಂದ ತಮಾಲ ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಹೇಳುತ್ತಾರೆ ತಮಾಲ ಸಂಸ್ಥಾಪಕರಾದ ಸುವರ್ಣ ಮತ್ತು ವಿನಯ್ ಪ್ರಶಾಂತ್.
ಗ್ರಾಮೀಣ ಕಲಾವಿದರ ವುಡನ್ ಮೊಬೈಲ್ ಆಂಪ್ಲಿಫೈಯರ್ ಪ್ರಾಜೆಕ್ಟ್ :
ಆ ಮಳಿಗೆಯಲ್ಲಿ ಮೈಸೂರು ಅರಮನೆಯ ಸ್ಮಾರಕದ ಸಣ್ಣ ಮಾದರಿ, ಚೀನಾ ಬ್ಲೂಟೂತ್ ಸ್ಪೀಕರ್ ಗೆ ಪರ್ಯಾಯವಾಗಿ ಗ್ರಾಮೀಣ ಭಾಗದ ಪ್ರತಿಭೆಗಳು ಹಳೆಮರ (ದಂತದ ಮರ) ಎಂಬುದರಿಂದ ತಯಾರಿಸಿದ ಚನ್ನಪಟ್ಟಣ ಮೊಬೈಲ್ ಆಂಪ್ಲಿಫಯರ್ ಉತ್ಪನ್ನ ಎಲ್ಲರ ಗಮನ ಸೆಳೆಯುತ್ತಿದೆ. ಈ ಮೊಬೈಲ್ ಅಂಪ್ಲಿಫಯರ್ ಎರಡು ಬದಿಯಲ್ಲಿ ಕೊಳವೆಯ ರೀತಿ ಜಾಗ ಬಿಡಲಾಗಿದ್ದು, ಉತ್ಪನ್ನದ ಮಧ್ಯದಲ್ಲಿನ ಜಾಗದಲ್ಲಿ ನಿಮ್ಮ ಮೊಬೈಲ್ ಇಟ್ಟು ಯಾವುದಾದರೂ ಹಾಡು ಪ್ಲೇ ಮಾಡಿದರೆ ಸಾಕು, ಯಾವುದೇ ವೈರ್ ಲೆಸ್ ಸ್ಪೀಕರ್ ಗೆ ಸರಿಸಮನಾಗಿ ಸಂಗೀತ ಹೊರಹೊಮ್ಮುತ್ತದೆ. ಈ ಮೊಬೈಲ್ ಆಂಪ್ಲಿಫೈಟರ್ ಮರದ ವಸ್ತುವಿಗೆ ನೈಸರ್ಗಿಕ ಬಣ್ಣವನ್ನು ಲೇಪಿಸಿ ತಯಾರಿಸಲಾಗಿದ್ದು ನೋಡಲು ಸುಂದರವಾಗಿದೆ. ಇದೇ ರೀತಿ ಮಣ್ಣಿನಿಂದ ತಯಾರಿಸಿದ ಉದ್ದನೆಯ ಸ್ಪೀಕರ್ ಆಕಾರದ ಕೊಳವೆಯಲ್ಲೂ ಮೊಬೈಲ್ ನಿಲ್ಲಿಸಿ ಹಾಡು ಪ್ಲೇ ಮಾಡಿದರೆ ಇದೇ ರೀತಿಯ ಶಬ್ದ ಹೊರಹೊಮ್ಮುತ್ತದೆ. ಮೊಬೈಲ್ ವಿಡಿಯೋ ಕಾಲಿಂಗ್ ಹಾಗೂ ಮೀಟಿಂಗ್ ಗೂ ಬಳಸುವ ರೀತಿಯಲ್ಲಿ ಈ ಎರಡು ಉತ್ಪನ್ನಗಳನ್ನು ವಿನ್ಯಾಸಗೊಳಿಸಲಾಗಿದೆ. ಇದು ಗ್ರಾಮೀಣ ಭಾಗದ ಕಲಾವಿದರ ಹೊಸ ಅವಿಷ್ಕಾರವಾಗಿದೆ.
ಈ ಸುದ್ದಿಯನ್ನೂ ಓದಿ : BW SPECIAL | BBMP E- Property News | ಬಿಬಿಎಂಪಿಯಲ್ಲಿ ಇ-ಆಸ್ತಿ ಸೇವೆ ಜಾರಿಯು ಅಂದುಕೊಂಡಷ್ಟು ಸುಲಭವಿಲ್ಲ…! ಇ-ಆಸ್ತಿ ನೋಂದಣಿ ಮಾಡಿಸಿದರೆ ಆಸ್ತಿ ಮಾಲೀಕರಿಗೇನು ಅನುಕೂಲ?
ಅಜ್ಜಿಯ ಅರಮನೆ ಮಳಿಗೆ :
ಇತ್ತೀಚಿನ ದಿನಗಳಲ್ಲಿ ಸಾಂಪ್ರದಾಯಿಕ ಕಲ್ಲು, ಕಂಚು, ಹಿತ್ತಾಳೆ, ಬೆಳ್ಳಿ ಮತ್ತು ತಾಮ್ರದ ಪಾತ್ರೆಗಳ ಬಳಕೆ ಸಂಪೂರ್ಣವಾಗಿ ಕಡಿಮೆಯಾಗಿದೆ. ವಿಪ್ರೋ ಬ್ಯುಸಿನೆಸ್ ಫೋರಮ್ ವಸ್ತುಪ್ರದರ್ಶನಕ್ಕೆ ಭೇಟಿಕೊಟ್ಟವರನ್ನು ತಪ್ಪದೇ ಸೆಳೆಯುವ ಮತ್ತೊಂದು ಮಳಿಗೆಯೆಂದರೆ ಅಜ್ಜಿ ಅರಮನೆ ಮಳಿಗೆ. ಈ ಮಳಿಗೆಯಲ್ಲಿ ಸಾಂಪ್ರದಾಯಿಕ ಬಳಪದ ಕಲ್ಲಿನ ಪಾತ್ರೆಗಳು ಒಂದಕ್ಕಿಂತ ಒಂದು ಗಮನ ಸೆಳೆಯುತ್ತಿದೆ. ದೋಸೆಕಲ್ಲು, ಕಡಾಯಿ, ಒಂದರಿಂತ 5 ಲೀಟರ್ ವರೆಗಿನ ಪಾತ್ರೆಗಳು, ಅರೆಯುವ ಕಲ್ಲು ಹೀಗೆ ನಾನಾ ಉತ್ಪನ್ನಗಳು ಖರೀದಿಸಲು ಯೋಗ್ಯವಾಗಿದೆ. ಇವು ಆರೋಗ್ಯ ರಕ್ಷಣೆಯಲ್ಲಿ ಪ್ರಮುಖ ಪಾತ್ರವಹಿಸುತ್ತವೆ ಎನ್ನುತ್ತಾರೆ ಮಳಿಗೆಯ ರೇವತಿ ವೆಂಕಟೇಶ್.
ಒಟ್ಟಿನಲ್ಲಿ ವಿಪ್ರ ಬ್ಯುಸಿನೆಸ್ ಫೋರಮ್ ಐದನೇ ವರ್ಷದ ವಸ್ತುಪ್ರದರ್ಶನ ಮತ್ತು ಮಾರಾಟ ಮೇಳ ಮತ್ತು ಸಮ್ಮೇಳನವು ಯುವ ಉದ್ಯಮಿಗಳು, ಸ್ವಯಂ ಉದ್ಯೋಗಿಗಳಿಗೆ ಉತ್ತಮ ವೇದಿಕೆ ಒದಗಿಸಿದೆ.