ಬೆಂಗಳೂರು, ಜು.10 www.bengaluruwire.com : ಬಿಬಿಎಂಪಿ ವಾರ್ಡ್ ಗಳ ಮರುವಿಂಗಡಣಾ ಕರಡು ಪ್ರಸ್ತಾವನೆಗೆ 2,500ಕ್ಕೂ ಹೆಚ್ಚು ಆಕ್ಷೇಪಣೆ, ಸಲಹೆ ಮತ್ತು ದೂರುಗಳು ದಾಖಲಾಗಿವೆ.
ಜೂನ್ 23ರಂದು ಪ್ರಕಟಿಸಲಾದ ಕರ್ನಾಟಕ ಗೆಜೆಟ್ ನಲ್ಲಿ ಆಕ್ಷೇಪಣೆ ಸಲ್ಲಿಸಲು 15 ದಿನಗಳ ಅವಕಾಶ ನೀಡಲಾಗಿತ್ತು.
ಶನಿವಾರ ಸಂಜೆ 5 ಗಂಟೆಗೆ ಈ ಆಕ್ಷೇಪಣೆ ಸಲ್ಲಿಕೆ ಅವಧಿ ಮುಕ್ತಾಯವಾಗಿದೆ. ಭಾನುವಾರವಾದ ಇಂದು ಆಕ್ಷೇಪಣೆಗಳ ಕ್ರೋಢೀಕರಣ ಕಾರ್ಯವು ವಿಕಾಸ ಸೌಧದಲ್ಲಿರುವ ನಗರಾಭಿವೃದ್ಧಿ ಇಲಾಖೆಯ ಕಚೇರಿಯಲ್ಲಿ ನಡೆಯಿತು. ಸುಮಾರು 2,500ಕ್ಕೂ ಹೆಚ್ಚು ಆಕ್ಷೇಪಣೆಗಳು, ಸಲಹೆಗಳು ಮತ್ತು ದೂರುಗಳು ಬಂದಿದ್ದು ಇವುಗಳನ್ನು ದಾಖಲಿಸಿ ಕ್ರೋಢೀಕರಣ ಮಾಡಲಾಗುತ್ತಿದೆ ಎಂದು ನಗರಾಭಿವೃದ್ಧಿ ಅಧಿಕಾರಿಗಳು ತಿಳಿಸಿದ್ದಾರೆ.
ಈ ಮಾಹಿತಿ ಕ್ರೋಢೀಕರಣ ಸಂದರ್ಭದಲ್ಲಿ ನಗರಾಭಿವೃದ್ಧಿ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರಾಕೇಶ್ ಸಿಂಗ್ ಉಪಸ್ಥಿತರಿದ್ದರು.