ಮಂಗಳೂರು, ಜು.22, www.bengaluruwire.com :
ನವ ಮಂಗಳೂರಿನ ಬಳಿಯ ಅರಬ್ಬಿ ಸಮುದ್ರದಲ್ಲಿ ಮುಳಗುವ ಹಂತದಲ್ಲಿದ್ದ ಎಂ.ವಿ.ಪ್ರಿನ್ಸಸ್ ಮಿರಾಲ್ ಹಡಗಿನಲ್ಲಿನ ಸಿರಿಯಾ ದೇಶದ 15 ನಾವಿಕರನ್ನು ಭಾರತೀಯ ಕರಾವಳಿ ಕಾವಲು ಪಡೆ (ICG) ಮಂಗಳವಾರ ರಕ್ಷಿಸಿ ಕರೆತಂದಿದೆ.
ಕರಾವಳಿ ಕಾವಲು ಪಡೆಯ ವಿಕ್ರಮ್ ಮತ್ತು ಅಮೃತ್ಯ ಹಡಗಿನ ಸಹಾಯದಿಂದ ಶೋಧನೆ ಮತ್ತು ರಕ್ಷಣಾ ಕಾರ್ಯಾಚರಣೆ (SAR) ಮೂಲಕ ಎಂ.ವಿ.ಪ್ರಿನ್ಸಸ್ ಮಿರಾಲ್ ಹಡಗಿನಲ್ಲಿ ನೀರು ತುಂಬಿ ಮುಳುಗುವ ಹಂತದಲ್ಲಿದ್ದ ನಾವಿಕರನ್ನು ಹವಾಮಾನ ವೈಪರೀತ್ಯದ ನಡುವೆ ಕಾವಲು ಪಡೆಯ ಯೋಧರು ಆ ನಾವಿಕರನ್ನು ರಕ್ಷಿಸಿದ್ದಾರೆ. ಈ ಹಡಗು ಮಲೆಷ್ಯಾದಿಂದ ಲೆಬೆನಾನ್ ಗೆ ಹೋಗಬೇಕಾಗಿತ್ತು.
ಈ ಯಶಸ್ವಿ ಕಾರ್ಯಾಚರಣೆಯ ಮೂಲಕ ಭಾರತೀಯ ನೌಕಾಪಡೆಯ ಭಾಗವಾಗಿರುವ ಕರಾವಳಿ ಕಾವಲು ಪಡೆ ತನ್ನ ಸಾಮರ್ಥ್ಯವನ್ನು ಮತ್ತೊಮ್ಮೆ ಪ್ರದರ್ಶಿಸಿದೆ.