ರಾಜರಾಜೇಶ್ವರಿ ನಗರದ ಶ್ರೀ ಯೋಗ ಮತ್ತು ಸಾಂಸ್ಕೃತಿಕ ಅಕಾಡೆಮಿ ವತಿಯಿಂದ ಮೂವರು ಮಹಿಳಾ ಸಾಧಕರಿಗೆ ಮಂಗಳವಾರ ಯೋಗಶ್ರೀ ಪ್ರಶಸ್ತಿಯನ್ನು ನೀಡಲಾಯಿತು.
ರಾಜರಾಜೇಶ್ವರಿ ನಗರದ ಶ್ರೀ ಯೋಗ ಮತ್ತು ಸಾಂಸ್ಕೃತಿಕ ಅಕಾಡೆಮಿಯ ಸಭಾಂಗಣದಲ್ಲಿ ಜೂ.21ರ ಮಂಗಳವಾರ ವಿಶ್ವ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯ ಅಂಗವಾಗಿ ಆಯೋಜಿಸಿರುವ ಸಮಾರಂಭದಲ್ಲಿ ಬೆಂಗಳೂರು ಉತ್ತರ ಜಿಲ್ಲಾ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ಎಂ.ರಾಜಕುಮಾರ ಅವರು ಗೀತಾ ಚಕ್ರಧರ್, ಅಪರ್ಣ ಶರ್ಮಾ ಮತ್ತು ಹರ್ಷದ ಅನಂತನಾರಾಯಣ ಅವರಿಗೆ ಯೋಗಶ್ರೀ ಪ್ರಶಸ್ತಿ ಪ್ರಧಾನ ಮಾಡಿದರು.
ಈ ಸಂದರ್ಭದಲ್ಲಿ ಮುಖ್ಯ ಅತಿಥಿಗಳಾಗಿ ಬಿಜೆಪಿ ಮುಖಂಡ ವಿ.ಸಿ ಚಂದ್ರು, ಪೊಲೀಸ್ ಇನ್ಸ್ಪೆಕ್ಟರ್ ಶಿವಣ್ಣ ಮತ್ತು ಹಿರಿಯ ಪತ್ರಕರ್ತ ನ.ಶ್ರೀ. ಸುಧೀಂದ್ರ ರಾವ್ ಅವರು ಪಾಲ್ಗೊಂಡಿದ್ದರು. ಯೋಗ ಶಿಕ್ಷಕಿ ಮತ್ತು ಯೋಗ ಕೇಂದ್ರದ ಕಾರ್ಯದರ್ಶಿ ಬಿ.ವಿ ಶ್ರೀಮತಿ ರಮೇಶ್ ಚಿತ್ರದಲ್ಲಿದ್ದಾರೆ.