ಕೋಲ್ಕತಾ, ಮೇ.2 www.bengaluruwire.com : ಪ್ರೀತಿಗೆ ಕಣ್ಣಿಲ್ಲ ಅಂತಾರೆ. ಆ ಕಾರಣಕ್ಕೆನೇ ತನ್ನ ಪ್ರಿಯಕರನನ್ನು ಸೇರಲು 22 ವರ್ಷದ ಆ ತರುಣಿ ಕರೆಳಿದ ನದಿಯನ್ನೂ ಲೆಕ್ಕಿಸದೆ ಸತತ ಒಂದು ಗಂಟೆಗಳ ಕಾಲ ಉಕ್ಕಿ ಹರಿಯುತ್ತಿದ್ದ ನದಿಯನ್ನು ದಾಟಿದ್ದಳು.
ತನ್ನ ಬಾಯ್ ಫ್ರೆಂಡ್ ಅನ್ನು ಭೇಟಿಯಾಗಿ ಮದುವೆಯಾಗಲು ನಿಶ್ಚಿಯಿಸಿದ್ದರೂ ಬಾಂಗ್ಲಾದೇಶದ ಗಡಿದಾಟಿ ಭಾರತದ ಪಶ್ಚಿಮ ಬಂಗಾಳದಲ್ಲಿ ನೆಲೆಸಿದ್ದ ತನ್ನ ಪ್ರಿಯಕರನನ್ನು ಭೇಟಿಯಾಗಲು ಸಾಧ್ಯವಾಗಿರಲಿಲ್ಲ. ಆಗ ಆಕೆ ಜಲಮಾರ್ಗದಲ್ಲಿ ಈಜಿಕೊಂಡು ಬಂದು ಆತನ ತೋಳಲ್ಲಿ ಸೇರಲು ನಿರ್ಧರಿಸಿದಳು. ಆಗ ಆಕೆಗೆ ಸುಂದರ್ ಬನ್ಸ್ ನಲ್ಲಿನ ಅಪಾಯಕಾರಿ ಸ್ಥಿತಿಯಲ್ಲಿ ಹರಿಯುವ ನದಿಯಾಗಲಿ, ರಾಯಲ್ ಬೆಂಗಾಲ್ ಹುಲಿಯಾಗಲಿ, ಆ ಕಾಡಿನಲ್ಲಿ ವನ್ಯಪ್ರಾಣಿಯಾಗಲಿ ಭಯ ಅಥವಾ ನಡುಕ ತರಿಸಲಿಲ್ಲ. ಗುರಿ ನಿಗಧಿಯಾಗಿತ್ತು. ಬಾಂಗ್ಲಾದೇಶದಿಂದ ನದಿಯಲ್ಲಿ ಯಶಸ್ವಿಯಾಗಿ ಒಂದುಗಂಟೆಗಳ ಕಾಲ ನಿರಂತವಾಗಿ ಈಜಿ ಭಾರತದ ಬಂಗಾಲವನ್ನು ಸೇರಿದಳು.
ಅಂದ್ಹಾಗೆ ಇದು ಯಾವುದೋ ಸಿನಿಮಾ ಕಥೆ ಅಂತ ಅಂದುಕೊಂಡರಾ. ಇಲ್ಲ. ಇದು ಪಶ್ಚಿಮ ಬಂಗಾಲದಲ್ಲಿ ನಾಲ್ಕು ದಿನದ ಹಿಂದೆ ನಡೆದ ಸತ್ಯ ಘಟನೆ.
ಇದೊಂದು ಅಪರೂಪದ ಪ್ರೇಮಕಥೆ : ಬಂಗಾಲದ ಅವಿಕ್ ಮಂಡಾಲ್ ಹಾಗೂ ಬಾಂಗ್ಲಾದೇಶದ ಯುವತಿ ಕೃಷ್ಣಾ ಮಂಡಾಲ್ ಮೊದಲಿಗೆ ಫೇಸದ ಬುಕ್ ನಲ್ಲಿ ಪ್ರಪ್ರಥಮವಾಗಿ ಪರಿಚಿತರಾದರು. ಅಲ್ಲಿಂದಲೇ ಅವರ ಪ್ರೇಮ ಬೆಳೆದು ದಿನ ಕಳೆದಂತೆ ಒಬ್ಬರನ್ನೊಬ್ಬರು ಬಿಟ್ಟಿರಲಾರದಷ್ಟು ಗಾಢವಾಗಿ ಪ್ರೀತಿಸಲು ಪ್ರಾರಂಭಿಸಿದರು. ಒಂದು ದಿನ ತಾವಿಬ್ಬರೂ ದಾಂಪತ್ಯ ಜೀವನಕ್ಕೆ ಕಾಲಿಡಲು ನಿರ್ಧರಿಸಿದರು. ಆಗಲೇ ಪರಸ್ಪರರನ್ನು ಭೇಟಿಯಾಗಲು ತೀರ್ಮಾನಿಸಿದರೂ, ಕೃಷ್ಣ ಮಂಡಾಲ್ ಬಳಿ ಪಶ್ಚಿಮ ಬಂಗಾಲಕ್ಕೆ ಬರಲು ಪಾಸ್ ಪೋರ್ಟ್ ಇರಲಿಲ್ಲ. ಹೀಗಾಗಿ ಆಕೆ ಗಡಿ ಭೂಭಾಗದಿಂದ ಬರಲಾಗದ ಕಾರಣ ಅಕ್ರಮವಾಗಿ ಜಲಮಾರ್ಗದ ಮೂಲಕ ಬರಲು ನಿರ್ಧರಿಸಿ ಈ ಹಾದಿ ತುಳಿದಿದ್ದಳು.
ರಾಯಲ್ ಬಂಗಾಳ ಹುಲಿ ಹೆಚ್ಚಾಗಿ ಕಂಡು ಬರುವ ಸುಂದರಬನ್ಸ್ ನಲ್ಲಿ, ಮುಳುಗಿ ಹೋಗಿದ್ದ ಮಾತ್ಲಾ ನದಿಯನ್ನು ಯಾವುದೇ ಅಂಜಿಕೆಯಿಲ್ಲದೆ ಒಂದು ಗಂಟೆ ಈಜಿ ತನ್ನ ಗಮ್ಯವನ್ನು ತಲುಪಿದಳು ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಆಮೇಲೆ ಏನಾಯ್ತು?
ಕೃಷ್ಣಾ ಮಂಡಲ್ ತನ್ನ ಬಾಯ್ ಫ್ರೆಂಡ್ ಅಬಿಕ್ ರನ್ನ ಭೇಟಿಯಾದಳಾ? ಆತನನ್ನು ಭೇಟಿಯಾಗುವ ಆಕೆಯ ಪ್ರಯತ್ನ ಫಲ ನೀಡಿತ್ತಾ? ಅಥವಾ ವಿಫಲವಾಯಿತಾ? ಆ ಪ್ರೇಮಿಗಳು ಪರಸ್ಪರ ಭೇಟಿಯಾಗಲು ಕಾಯುತ್ತಿದ್ದ ಆ ಕ್ಷಣ ಬಂದೇ ಬಿಟ್ಟಿತು. ಕೃಷ್ಣ ನದಿ ದಾಟಿ ಬಂಗಾಲಕ್ಕೆ ಬರುತ್ತಿದ್ದಂತೆ ಆ ಹುಚ್ಚು ಪ್ರೇಮಿ ಅಬಿಕ್ ದಡದಲ್ಲಿ ಕಾಯುತ್ತಿದ್ದ. ಆಕೆ ಬಂದ ಕೂಡಲೇ ಅವಳನ್ನು ತಬ್ಬಿ ಮುದ್ದಾಡಿದ್ದ.
ಈಗ್ಗೆ ಮೂರು ದಿನಗಳ ಹಿಂದೆ ಆ ಜೋಡಿಗಳು ಕೋಲ್ಕತಾದ ಕಾಲಿಘಾಟ್ ದೇವಸ್ಥಾನದಲ್ಲಿ ಪರಸ್ಪರ ವಿವಾಹವಾಗಿ ನೂತನ ದಾಂಪತ್ಯ ಕ್ಕೆ ಕಾಲಿರಿಸಿದರು. ಆದರೂ ಈ ಯುವ ಪ್ರೇಮಿಗಳಿಗೆ ಭಾರತದಲ್ಲಿ ನೆಲೆಸಲು ಅವಕಾಶ ಸಿಗಲಿಲ್ಲ. ಕೃಷ್ಣ ಅಕ್ರಮವಾಗಿ ಭಾರತಕ್ಕೆ ಗಡಿದಾಟಿ ಬಂದ ಹಿನ್ನಲೆಯಲ್ಲಿ ಪೊಲೀಸರು ಆಕೆಯನ್ನು ಬಂಧಿಸಿದ್ದಾರೆ. ಮೂಲಗಳ ಪ್ರಕಾರ ಕೃಷ್ಣಾಳನ್ನು ಪೊಲೀಸರು ಬಾಂಗ್ಲಾದೇಶ ರಾಯಭಾರ ಕಚೇರಿಗೆ ಹಸ್ತಾಂತರಿಸಿದ್ದಾರೆ.
ಈ ವರ್ಷದ ಆರಂಭದಲ್ಲಿ ಬಾಂಗ್ಲಾದೇಶದ ಪೋರನೊಬ್ಬ ಚಾಕ್ಲೇಟ್ ಖರೀದಿಸುವ ಆಸೆಯಿಂದ ಅಕ್ರಮವಾಗಿ ಅಕ್ರಮವಾಗಿ ಸಣ್ಣ ನದಿಯಲ್ಲಿ ಈಜಿ ಭಾರತದ ಗಡಿದಾಟಿ ಬಂದು ತನ್ನ ನೆಚ್ಚಿನ ಚಾಕ್ಲೇಟ್ ಖರೀದಿಸಿ ಪೊಲೀಸರಿಗೆ ಸಿಕ್ಕಿಬಿದ್ದಿದ್ದ. ಇಮಾನ್ ಹುಸೇನ್ ಎಂಬಾತನೇ ಆ ಬಾಲಕ. ಈತನನ್ನು ಸ್ಥಳೀಯ ಪೊಲೀಸರು ಕೋರ್ಟ್ ಗೆ ಹಾಜರುಪಡಿಸಿ 15 ದಿನಗಳ ನ್ಯಾಯಾ.ಮಗ ಬಂಧನಕ್ಕೆ ನೀಡಿದ್ದರು.
ಇದೀಗ ಕೃಷ್ಣ- ಅಬಿಕ್ ಪ್ರೇಮ ಪ್ರಕರಣ ನಡೆದಿದೆ. ಅಕ್ರಮವಾಗಿ ಗಡಿದಾಟಿ ಬಂದ ಕಾರಣಕ್ಕೆ ಬಂಧಿತರಾಗಿ ಬಾಂಗ್ಲಾದೇಶ ರಾಯಭಾರ ಕಚೇರಿಗೆ ಹಸ್ತಾಂತಸಿದ ಕೃಷ್ಣಾ ಭವಿಷ್ಯ ಏನಾಗಲಿದೆ? ಕೃಷ್ಣ ಮಂಡಲ್ ಮತ್ತು ಅವಿಕ್ ಪ್ರೇಮಕಥೆ ಈ ಅನಿಶ್ಚಿತ ಘಟನೆಯಿಂದ ಶಾಶ್ವತವಾಗಿ ಮುರಿದು ಬೀಳುತ್ತಾ? ಅಥವಾ ಅವರಿಬ್ಬರು ಮತ್ತೆ ಒಂದಾಗಿ ಬಾಳುತ್ತಾರಾ? ಕಾದು ನೋಡಬೇಕಿದೆ.