ಬೆಂಗಳೂರು, ಮೇ.27 (www.bengaluruwire.com) ರಾಜ್ಯ ಸರ್ಕಾರದ ನೂತನ ಮುಖ್ಯ ಕಾರ್ಯದರ್ಶಿಯಾಗಿ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಹಾಗೂ ಅಭಿವೃದ್ಧಿ ಆಯುಕ್ತರಾಗಿ ಕಾರ್ಯನಿರ್ವಹಿಸುತ್ತಿದ್ದ ವಂದಿತ ಶರ್ಮ ಅವರು ಆಯ್ಕೆಯಾಗಿದ್ದಾರೆ.
1986ನೇ ಬ್ಯಾಚಿನ ಐಎಎಸ್ ಅಧಿಕಾರಿಯಾಗಿರುವ ವಂದಿತ ಶರ್ಮ, ರಾಜ್ಯದಲ್ಲಿ ಈ ಅತ್ಯುನ್ನತ ಹುದ್ದೆಯನ್ನೇರಿದ ನಾಲ್ಕನೇ ಮಹಿಳೆಯಾಗಿದ್ದಾರೆ.
ಸದ್ಯ ಹಾಲಿ ಮುಖ್ಯ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸುತ್ತಿರುವ ಪಿ.ರವಿಕುಮಾರ್ ಇದೇ ಮೇ.31ರಂದು ನಿವೃತ್ತಿ ಹೊಂದುತ್ತಿದ್ದಾರೆ.
ರವಿಕುಮಾರ್ ನಿವೃತ್ತಿ ನಂತರ ಅಧಿಕಾರ ಸ್ವೀಕರಿಸಲಿರುವ ವಂದಿತ ಶರ್ಮ ನವೆಂಬರ್ 2023ರಂದು ನಿವೃತ್ತರಾಗಲಿದ್ದು, ಮುಂದಿನ ವರ್ಷ ನಡೆಯಲಿರುವ ವಿಧಾನಸಭೆ ಚುನಾವಣೆಯಲ್ಲಿ ರಾಜ್ಯ ಸರ್ಕಾರದ ಸಿಎಸ್ ಆಗಿ ಕಾರ್ಯನಿರ್ವಹಿಸಲಿರುವರು.