ಬೆಂಗಳೂರು, ಮೇ.22 (www.bengaluruwire.com) ಮಳೆ ಅನಾಹುತಗಳ ಸಮಸ್ಯೆಗಳನ್ನು ಸಮರ್ಥವಾಗಿ ಎದುರಿಸುವ ಉದ್ದೇಶದಿಂದ ಬೆಂಗಳೂರಿನಲ್ಲಿ 8 ವಲಯಗಳಿಗೆ ಬೆಂಗಳೂರಿನ ಸಚಿವರ ನೇತೃತ್ವದಲ್ಲಿ ಕಾರ್ಯಪಡೆಗಳನ್ನು ರಚಿಸಲಾಗಿದೆ.
ಇದರಲ್ಲಿ ಸಂಬಂಧಪಟ್ಟ ವಲಯಗಳ ಶಾಸಕರು, ಸಂಸದರು ಮತ್ತು ಬಿಬಿಎಂಪಿ ಅಧಿಕಾರಿಗಳು ಸದಸ್ಯರಾಗಿರುತ್ತಾರೆ. ವಲಯಗಳ ಜಂಟಿ ಆಯುಕ್ತರು ಸಂಚಾಲಕರಾಗಿ ಕಾರ್ಯ ನಿರ್ವಹಿಸುತ್ತಾರೆ. ಈ ಹಿಂದೆ ಮುಖ್ಯಮಂತ್ರಿಗಳು ಮಳೆ ಹಾನಿ ಪ್ರದೇಶದಲ್ಲಿ ಪರಿಶೀಲನೆ ನಡೆಸಿದ ಬಳಿಕ ಕಾರ್ಯಪಡೆ ರಚನೆ ಬಗ್ಗೆ ತೀರ್ಮಾನಿಸಿದ್ದರು. ಅದರಂತೆ ಟಾಸ್ಕ್ ಫೋರ್ಸ್ ರಚಿಸಿ ಅವುಗಳನ್ನು ತಮ್ಮ ಅಧಿಕೃತ ಟ್ವಿಟರ್ ನಲ್ಲಿ ಹಂಚಿಕೊಂಡಿದ್ದಾರೆ.
ಕಾರ್ಯಪಡೆ ನೇತೃತ್ವದ ವಿವರ ಇಂತಿದೆ.
ಆರ್ ಅಶೋಕ್ – ದಕ್ಷಿಣ ವಲಯ
ಡಾ. ಅಶ್ವಥ್ ನಾರಾಯಣ್ – ಪೂರ್ವ ವಲಯ
ವಿ. ಸೋಮಣ್ಣ – ಪಶ್ಚಿಮ ವಲಯ
ಎಸ್. ಟಿ. ಸೋಮಶೇಖರ್ – ಆರ್ ಆರ್ ನಗರ ವಲಯ
ಬೈರತಿ ಬಸವರಾಜ್ – ಮಹದೇವಪುರ ವಲಯ
ಗೋಪಾಲಯ್ಯ – ಬೊಮ್ಮನಹಳ್ಳಿ ವಲಯ
ಮುನಿರತ್ನ – ಯಲಹಂಕ ಮತ್ತು ದಾಸರಹಳ್ಳಿ ವಲಯ