ಬೆಂಗಳೂರು, ಮೇ.21 (www.bengaluruwire.com) : ರಾಜಧಾನಿ ಬೆಂಗಳೂರಿನ ಜಿಲ್ಲಾಧಿಕಾರಿ ಕಚೇರಿ ಮೇಲೆ ಶನಿವಾರ ಭ್ರಷ್ಟಾಚಾರ ನಿಗ್ರಹ ದಳ (ACB) ದಾಳಿ ನಡೆಸಿದ್ದಾರೆ.
ಆಜಂ ಖಾನ್ ಎಂಬುವವರ ಬಳಿ ಲಂಚ ಪಡೆಯುತ್ತಿದ್ದಾಗ ಎಸಿಬಿ ಟ್ರ್ಯಾಪ್ ಮಾಡಿದೆ. 5 ಲಕ್ಷ ರೂ. ಲಂಚ ಪಡೆಯುತ್ತಿದ್ದಾಗ ಡೆಪ್ಯುಟಿ ತಹಸಿಲ್ದಾರ್ ಮಹೇಶ್, ಕೋರ್ಟ್ ಸಹಾಯಕ ಚಂದ್ರು ಅವರನ್ನು ಎಸಿಬಿ ಪೊಲೀಸರು ಬಂಧಿಸಿದ್ದಾರೆ.
ಕೂಡ್ಲು ಬಳಿ ಜಮೀನ ಸಂಬಂಧ ಜಿಲ್ಲಾಧಿಕಾರಿಗಳ ಕೋರ್ಟ್ ನಲ್ಲಿ ಕೇಸ್ ಇತ್ತು. ಈ ಸಂಬಂಧ ಕೇಸ್ ಇರ್ತರ್ಥಕ್ಕಾಗಿ ಲಂಚ ಕ್ಕೆ ಬೇಡಿಕೆ ಇಡಲಾಗಿತ್ತು ಎಂದು ತಿಳಿದು ಬಂದಿದೆ. ಕೋರ್ಟ್ ಸಹಾಯಕ ಚಂದ್ರು ಎಂಬಾತ ಗುತ್ತಿಗೆ ನೌಕರ. ಇಂದು ಮಧ್ಯಾಹ್ನ ಡಿಸಿ ಕಚೇರಿಯಲ್ಲಿ ಮಧ್ಯಾಹ್ನ ಊಟಕ್ಕೆಂದು ಮೆಟ್ಟಿಲಿಳಿದು ಕೆಳಗೆ ಬರುತ್ತಿದ್ದಾಗ ಮುಚ್ಚಿದ ಲಕೋಟೆಯಲ್ಲಿ ಆಜಂಖಾನ್ ನೀಡಿದ ಹಣ ಪಡೆಯುತ್ತಿದ್ದಾಗ ಎಸಿಬಿ ಅಧಿಕಾರಿಗಳು ಖುದ್ದಾಗಿ ಆತನನ್ನು ವಶಕ್ಕೆ ಪಡೆದು, ಆತ ನೀಡಿದ ಹೇಳಿಕೆ ಮೇರೆಗೆ ಡಿಸಿ ಕಚೇರಿ ವ್ಯವಸ್ಥಾಪಕನಾದ ಮಹೇಶ್ ನನ್ನ ಎಸಿಬಿ ಪೊಲೀಸರು ಬಂಧಿಸಿದ್ದಾರೆ.
ಪ್ರಕರಣ ಇತ್ಯರ್ಥಕ್ಕಾಗಿ ಉಪ ತಹಸೀಲ್ದಾರ್ ಮಹೇಶ್ ಹಾಗೂ ಹಾಗೂ ಕೋರ್ಟ್ ಸಹಾಯಕ ಚಂದ್ರು ಅವರನ್ನು ಭೇಟಿ ಮಾಡುವಂತೆ ಡಿಸಿ ಹೇಳಿದ್ದಾಗಿ ದೂರುದಾರರಾದ ಆಜಂ ಖಾನ್ ಆರೋಪಿಸಿದ್ದಾರೆ ಎಂದು ತಿಳಿದುಬಂದಿದೆ.
ಪ್ರಕರಣದ ಇತ್ಯರ್ಥಕ್ಕೆ ಒಟ್ಟು 15 ಲಕ್ಷ ರೂ. ಲಂಚ ಹಣಕ್ಕೆ ಬೇಡಿಲೆಯಿಟ್ಟಿದ್ದು, ಆ ಪೈಕಿ ಮೊದಲ ಹಂತವಾಗಿ 5 ಲಕ್ಷ ರೂ. ಹಣ ನೀಡುವಾಗ ಎಸಿಬಿಬ ದಾಳಿ ನಡೆಸಿದೆ.
ಎಸಿಬಿ ಡಿವೈಎಸ್ಪಿ ರವಿಶಂಕರ್ ನೇತೃತ್ವದಲ್ಲಿ ಈ ದಾಳಿ ನಡೆಸಲಾಗಿದೆ. ಡಿಸಿ ಕಚೇರಿ ಮೇಲೆ ದಾಳಿ ನಡೆಸಿ ಎಸಿಬಿ ಅಧಿಕಾರಿಗಳು ಸಾಕ್ಷಿ ಕಲೆ ಹಾಕುತ್ತಿದ್ದಾರೆ.
ಎಸಿಬಿ ದಾಳಿ -ಅಶೋಕ್ ಗೆ ಕುಟುಕಿದ ಹೆಚ್ ಡಿಕೆ :
ನಗರದಲ್ಲಿ ಇಂದು ನಗರ ಜಿಲ್ಲಾಧಿಕಾರಿ ಹಾಗೂ ವಿಶೇಷ ಜಿಲ್ಲಾಧಿಕಾರಿಗಳ ಕಚೇರಿಗಳ ಮೇಲೆ ಎಸಿಬಿ ದಾಳಿ ನಡೆಸಿದ ಹಿನ್ನೆಲೆಯಲ್ಲಿ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಕಂದಾಯ ಸಚಿವ ಅಶೋಕ್ ಅವರಿಗೆ ಚಾಟಿ ಬೀಸಿದ್ದಾರೆ
ಕಂದಾಯ ಸಚಿವರೇ ನಿಮ್ಮ ಬೆಂಗಳೂರು ಜಿಲ್ಲಾಧಿಕಾರಿ ಕಚೇರಿಯಲ್ಲಿ ಏನ್ ನಡೀತಿದೆ ನೋಡಿ. ನಿಮ್ಮ ಇಲಾಖೆಯ ಕರ್ಮಕಾಂಡವನ್ನು. ಐದು ಲಕ್ಷ ರೂ. ಭ್ರಷ್ಟಾಚಾರದ ಹಣವನ್ನು ರೆಡ್ ಹ್ಯಾಂಡ್ ಆಗಿ ಹಿಡಿದಿದ್ದಾರೆ ಎಂದು ಚುಚ್ಚಿದರು.