ಬೆಂಗಳೂರು, (www.bengaluruwire.com): “ರಾಜ್ಯದಲ್ಲಿ11ಇ, ಪೋಡಿ, ಭೂಪರಿವರ್ತನೆ, ಹದ್ದುಬ ಸ್ತು ಮತ್ತು ಇತರ ನಕ್ಷೆಗಳನ್ನು ಪಡೆಯಲು ಮತ್ತು ನಾಗರಿಕರ ಅರ್ಜಿಗಳ ಸ್ಥಿತಿಯ ಮಾಹಿತಿ ಪಡೆಯಲು ಸರ್ವೆ ಕಚೇರಿಗಳಿಗೆ ಓಡಾಡಬೇಕಾದ ಅವಶ್ಯಕತೆಯಿಲ್ಲ. ನಾಗರೀಕರು ಆನಲೈನ್ ಮೂಲಕವೇ ಈ ಸೌಲಭ್ಯಗಳನ್ನು ಪಡೆದುಕೊಳ್ಳಬಹುದು” ಎಂದು ಸರ್ವೆ ಸೆಟ್ಲಮೆಂಟ್ ಮತ್ತು ಭೂ ದಾಖಲೆಗಳ ಆಯುಕ್ತ ಮುನೀಶ್ ಮೌದ್ಗಿಲ್ ಹೇಳಿದ್ದಾರೆ.
“ಅರ್ಜಿ ಸಲ್ಲಿಸುವ ಸಮಯದಲ್ಲಿ, ನಾಗರಿಕರು ಅರ್ಜಿಗಳಿಗೆ ಹಣವನ್ನು ಪಾವತಿಸಿರುತ್ತಾರೆ. ಆದ್ದರಿಂದ, ಅವರ ನಕ್ಷೆಯನ್ನು ಅನುಮೋದಿಸಿದ ತಕ್ಷಣ, http://103.138.196.154/service19/Report/ApplicationDetails ಈ ವೆಬ್‌ಸೈಟ್ ಲಿಂಕ್‌ನಲ್ಲಿ ಅದನ್ನು ಮುದ್ರಿಸಲು ಲಭ್ಯವಿರುತ್ತದೆ. ಅದೇ ವೆಬ್‌ಸೈಟ್ ಲಿಂಕ್‌ನಲ್ಲಿ ಯಾವುದೇ ಸಮಯದಲ್ಲಿ ಅರ್ಜಿದಾರರು ತಮ್ಮ ಅರ್ಜಿಯ ಸ್ಥಿತಿಯನ್ನು ಸಹ ತಿಳಿದುಕೊಳ್ಳಬಹುದು. ಹೆಚ್ಚುವರಿಯಾಗಿ ಯಾವುದೇ ಶುಲ್ಕ ಪಾವತಿಸುವ ಅಗತ್ಯವಿಲ್ಲ” ಎಂದು ಅವರು ಬೆಂಗಳೂರ ವೈರ್ ಗೆ ತಿಳಿಸಿದ್ದಾರೆ.
“ನಾಗರಿಕರು ತಮ್ಮ ನಕ್ಷೆಗಳ ಪ್ರಿಂಟ್ ಔಟ್ ಪಡೆಯಲು ಸರ್ವೆ ಕಚೇರಿಗಳಿಗೆ ಹೋಗಬೇಕಾದ ಅಗತ್ಯವನ್ನು ಇದು ನಿವಾರಿಸುತ್ತದೆ. ಅವರು ಆನ್‌ಲೈನ್‌ನಲ್ಲಿ ಅಪ್ಲಿಕೇಶನ್‌ಗಳ ಸ್ಥಿತಿಯನ್ನು ಸಹ ನೋಡಬಹುದು” ಎಂದು ಅವರು ರಾಜ್ಯದ ನಾಗರೀಕರಿಗೆ ಮಾಹಿತಿ ನೀಡಿದ್ದಾರೆ.