ಬೆಂಗಳೂರು, (www.bengaluruwire.com) : ನಮ್ಮ ಮೆಟ್ರೋ ಎರಡನೇ ಹಂತದ ಕಾಮಗಾರಿಯಲ್ಲಿ ಟಿಬಿಎಮ್-ಲವಿ ಯಂತ್ರವು ಶಿವಾಜಿನಗರದಿಂದ ಸುರಂಗಮಾರ್ಗ ಕೊರೆದು ಎಂಜಿ ರಸ್ತೆವರೆಗೆ ಯಶಸ್ವಿಯಾಗಿ ಕೊರೆದು ಭೂಮಿಯಡಿಯಿಂದ ಆಚೆ ಬಂದಿದೆ.
ಫೆ.10ರಂದು ಶಿವಾಜಿನಗರ ಮೆಟ್ರೋ ಸ್ಟೇಷನ್ ನಿಂದ ನೆಲದಡಿ ಮಾರ್ಗವನ್ನು ಕೊರೆಯಲು ಪ್ರಾರಂಭಿಸಿ 1,076 ಮೀಟರ್ ಮಾರ್ಗದಲ್ಲಿ ಭೂಮಿಯನ್ನು ಕೊರೆಯುವ ಕಾರ್ಯವನ್ನು ಪೂರ್ಣಗೊಳಿಸಿದೆ.
ಈ ಮಾರ್ಗದ ಸುರಂಗ ಕೊರೆಯುವ ಮಾರ್ಗದಲ್ಲಿ 232 ಮೀಟರ್ ಶಿಲಾ ಪದರ ಎದುರಾಗಿತ್ತು. ಈ ಹಂತದಲ್ಲಿ ಟನಲ್ ಕೊರೆಯುವುದು ಸಾಕಷ್ಟು ಸವಾಲಿನ ಕೆಲಸವಾಗಿತ್ತು. ಅಲ್ಲದೇ ಆಗಾಗ ಲವಿ ಟಿಬಿಎಮ್ ಯಂತ್ರವನ್ನು ನಿರ್ವಹಣೆ ಮಾಡುವ ಕಾರ್ಯವನ್ನು ಕೈಗೊಳ್ಳಲಾಗಿತ್ತು. ಇದೇ ಯಂತ್ರ ಇನ್ನು ಮುಂದೆ ಎಂಜಿ ರಸ್ತೆ ಹಾಗೂ ರಾಷ್ಟ್ರೀಯ ಮಿಲಿಟರಿ ಶಾಲೆ ಸ್ಟೇಷನ್ ನಡುವೆ ತನ್ನ ಕಾರ್ಯಾಚರಣೆ ಕೈಗೊಳ್ಳಲಿದೆ.