ಸಾಮಾನ್ಯವಾಗಿ ಎಲ್ಲರೂ ದೆವ್ವ, ಭೂತ ಅವರಿಗೆ ತೊಂದರೆಕೊಟ್ಟಿತು, ಇವರಿಗೆ ಕಾಟ ಕೊಟ್ಟಿತು. ಅವರಿಗೆ ದೆವ್ವ ಕಾಣಿಸಕೊಂಡಿತು ಅಂತೆಲ್ಲಾ ಹೇಳೋದನ್ನ ಕೇಳಿರುತ್ತೇವೆ. ಆದರೆ ನೀವು ಇವತ್ತು ಕಣ್ಣಾರೆ ಸಿಸಿಟಿವಿಯಲ್ಲಿ ಸೆರೆಯಾದ ಭೂತ ಚೇಷ್ಟೆಯ ದೃಶ್ಯವನ್ನು ಸ್ವತಃ ನೋಡಬಹುದು. 24-02-2022 ರಂದು ಮಧ್ಯರಾತ್ರಿ 12:47 ರಿಂದ 12:57ರ ನಡುವೆ ನಡೆದ ಈ ಘಟನೆಯ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಅಂಗಡಿಯ ಮುಂದೆ ಮಧ್ಯರಾತ್ರಿ ಕಾವಲಿಗೆಂದು ಕುಳಿತ ಓರ್ವ ಭದ್ರತಾ ಸಿಬ್ಬಂದಿಗೆ ಹೆಣ್ಣು ದೆವ್ವವೊಂದು ಇನ್ನಿಲ್ಲದಂತೆ ಕಾಟ ಕೊಡುತ್ತದೆ. ಆತನ ಪಾತ್ರೆ ಸಾಮಾನುಗಳನ್ನು ಎಸೆಯುವ, ಕಬ್ಬಿಣ ವಸ್ತುಗಳನ್ನು ಬೀಳಿಸುವ, ಚೇರ್ ಮೇಲೆ ಕುಳಿತ ಸಿಬ್ಬಂದಿ ಮೇಲೆ ಮೇಲಿಂದ ಬಟ್ಟೆ ಎಸೆಯುವ, ಟೂ ವೀಲರ್ ಗಾಡಿಯನ್ನು ಹಿಂದೆಯಿಂದ ಎಳೆಯುವ, ನಿದ್ದೆಗಣ್ಣಿನಲ್ಲಿದ್ದ ಆ ಭದ್ರತಾ ಸಿಬ್ಬಂದಿಯನ್ನು ಕಾಲು ಹಿಡಿದು ಎಳೆದು ಬೀಳಿಸುವ ವಿಲಕ್ಷಣ ಘಟನೆಗಳು ಈ ಸಿಸಿಟಿವಿಯಲ್ಲಿ ದಾಖಲಾಗಿದೆ. ಯಾವುದು ಸತ್ಯ ಅಥವಾ ಮಿಥ್ಯ ನೀವೇ ನೋಡಿ ನಿರ್ಧರಿಸಿ.