ಮಂಡ್ಯ, (www.bengaluruwire.com) : ವಿಶ್ವವಿಖ್ಯಾತ ಮೇಲುಕೋಟೆ ಚೆಲುವನಾರಾಯಣಸ್ವಾಮಿ ವೈರಮುಡಿ ಉತ್ಸವ ಇಂದು (ಮಾ.14) ಸಂಜೆ ಮೇಲುಕೋಟೆಯಲ್ಲಿ ನಡೆಯಲಿದೆ.
ಮಂಡ್ಯ ಜಿಲ್ಲೆ ಪಾಂಡವಪುರ ತಾಲೂಕಿನ ಮೇಲುಕೋಟೆ
ಉತ್ಸವದಲ್ಲಿ ಸಿಎಂ ಬಸವರಾಜ್ ಬೊಮ್ಮಾಯಿ ಭಾಗಿಯಾಗಲಿದ್ದಾರೆ . ಇಂದು ರಾತ್ರಿ 8 ಗಂಟೆಗೆ ಮೇಲುಕೋಟೆ ಪ್ರಮುಖ ಬೀದಿಗಳಲ್ಲಿ ಚಲುವನಾರಾಯಣಸ್ವಾಮಿಗೆ ಕೀರಿಟಧಾರಣೆ ಮಾಡಿ ವೈರಮುಡಿ ಉತ್ಸವ ನಡೆಯಲಿದೆ.
ಇಂದು ಬೆಳಿಗ್ಗೆ ಜಿಲ್ಲಾ ಖಜಾನೆಯಿಂದ ರಾಜಮುಡಿ, ವೈರಮುಡಿ ಹಾಗೂ ತಿರುವಾಭರಣ ಪೆಟ್ಟಿಗೆ ಹೊರತೆಗೆದು ಅಧಿಕಾರಿಗಳು ಪುರೋಹಿತರ ಮುಖೇನ ಆಭರಣಗಳಿಗೆ ಪೂಜೆ ಸಲ್ಲಿಸಿದರು. ಬಳಿಕ ಪೆಟ್ಟಿಗೆಯನ್ನು ಜಿಲ್ಲಾಡಳಿತದಿಂದ ದಾರಿಯುದ್ದಕ್ಕೂ ಗ್ರಾಮಗಳಲ್ಲಿ ಭಕ್ತರು ಆಭರಣ ಪೆಟ್ಟಿಗೆಗೆ ಸ್ವಾಗತ ಕೋರಿ ಪೂಜೆ ಸಲ್ಲಿಸುತ್ತಿದ್ದಾರೆ. ಮಾರ್ಗದಲ್ಲಿ ವೈರಮುಡಿ ಮಂಟಪಗಳಲ್ಲಿ ಕಿರೀಟವಿಟ್ಟು ಪೂಜೆ ಸಲ್ಲಿಸಲಾಗುತ್ತಿದೆ. ಬಳಿಕ ಇಂದ ಸಂಜೆ ಮೇಲುಕೋಟೆ ದೇವಾಲಯಕ್ಕೆ ಹಸ್ತಾಂತರವಾಗಲಿದೆ. ಸಂಜೆ ವೇಳೆಗೆ ಕಿರೀಟ ಧಾರಣೆ ಮಾಡಿದ ಬಳಿಕ ರಾತ್ರಿ 8.30ರಿಂದ ಮಾರನೇ ದಿನ ನಸುಕಿನ 3.30ರವರೆಗೆ ವೈರಮುಡಿ ಉತ್ಸವ ನಡೆಯಲಿದೆ.
ಉತ್ಸವಕ್ಕಾಗಿ ಆಂಧ್ರಪ್ರದೇಶ, ತಮಿಳುನಾಡು, ಸೇರಿದಂತೆ ಹೊರರಾಜ್ಯಗಳಿಂದ ಭಕ್ತರು ಆಗಮಿಸಿದ್ದಾರೆ. ಚಿನ್ನಜೀಯರ್ ಮಠ, ಆದಿಚುಂಚನಗಿರಿ ಮಠಗಳಲ್ಲಿ ವಾಸ್ತವ್ಯಕ್ಕೆ ವ್ಯವಸ್ಥೆ ಮಾಡಲಾಗಿದೆ. ಮಂಡ್ಯ ಸುತ್ತಮುತ್ತಲ ಭಾಗಗಳ ಜಿಲ್ಲೆಗಳಿಂದ ಮೇಲುಕೋಟೆಗೆ 200 ಕ್ಕೂ ಹೆಚ್ಚು ವಿಶೇಷ ಬಸ್ ವ್ಯವಸ್ಥೆ ಮಾಡಲಾಗಿದೆ. ಭಕ್ತರಿಗೆ ಅನ್ನದಾನ ವ್ಯವಸ್ಥೆ, ವೈದ್ಯಕೀಯ ಸೇವೆಗೆ 10 ಆಂಬುಲೆನ್ಸ್, ವೈದ್ಯಕೀಯ ಸಿಬ್ಬಂದಿ, ಭದ್ರತೆಗೆ ಎರಡು ಸಾವಿರ ಪೊಲೀಸರನ್ನು ನಿಯೋಜಿಸಲಾಗಿದೆ.