‘ದಿ ಕಾಶ್ಮೀರ್ ಫೈಲ್ಸ್’ (The Kashmir Files) ಈ ಹೆಸರು ಇಡೀ ಭಾರತದಲ್ಲಿ ಅತ್ಯಂತ ಸದ್ದು ಮಾಡುತ್ತಿರುವ ಚಲನಚಿತ್ರ. 1990ರಲ್ಲಿ ಕಾಶ್ಮೀರ ಪಂಡಿತರ ನರಮೇಧದ ಸುತ್ತ ಕಥಾ ಹಂದರರವನ್ನು ಹಣೆದು ನಿರ್ದೇಶಕ ವಿವೇಕ್ ರಂಜನ್ ಅಗ್ನಿಹೋತ್ರಿ ಹಿಂದಿ ಭಾಷೆಯಲ್ಲಿ ಈ ಚಿತ್ರವನ್ನು ನಿರ್ದೇಶಿಸಿದ್ದಾರೆ. ಮಾ.11ರ ಶುಕ್ರವಾರದಂದು ದೇಶದ 630 ಚಿತ್ರಮಂದಿರಗಳಲ್ಲಿ ತೆರೆಕಂಡ ಈ ಸಿನಿಮಾ ಬಾಕ್ಸ್ ಆಫೀಸ್ (Box Office) ನಲ್ಲಿ ಮೊದಲೇ ದಿನವೇ 3.55 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ. ಅಲ್ಲದೆ ಮಾ.12ರ ಎರಡನೇ ದಿನ 8.50 ಕೋಟಿ ರೂ. ಹಣ ಸಿನಿಮಾ ಪ್ರದರ್ಶನದಿಂದ ಸಂಗ್ರಹಿಸಿದೆ.
‘ದಿ ಕಾಶ್ಮೀರ್ ಫೈಲ್ಸ್’ ಸಿನಿಮಾ ನಿರ್ದೇಶನದ ಮುನ್ನ ‘ದಿ ತಾಷ್ಕೆಂಟ್ ಫೈಲ್ಸ್’, ಹಾಗೂ ‘ದಿ ಡೆಲ್ಲಿ ಫೈಲ್ಸ್’ ಸಿನಿಮಾವನ್ನು ನಿರ್ಮಿಸಿರುವ ವಿವೇಕ್ ರಂಜನ್ ಅಗ್ನಿಹೋತ್ರಿ, ಅವರ ಪತ್ನಿ ಹಾಗೂ ನಟಿ ಪಲ್ಲವಿ ಜೋಶಿ ಮತ್ತು ನಿರ್ಮಾಪಕ ಅಭಿಷೇಕ್ ಮಾ.12ರಂದು ಪ್ರಧಾನಿ ನರೇಂದ್ರ ಮೋದಿ (PM Narendra Modi) ಯವರನ್ನು ಭೇಟಿಯಾಗಿ ಚಿತ್ರದ ಕುರಿತಂತೆ ಮಾಹಿತಿ ನೀಡಿ, ಮಾತುಕತೆ ನಡೆಸಿದ್ದರು. ಈ ಸಂದರ್ಭದಲ್ಲಿ ಪ್ರಧಾನಿ ಮೋದಿ ‘ದಿ ಕಾಶ್ಮೀರ್ ಫೈಲ್ಸ್’ ಚಲನಚಿತ್ರದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು ಎಂದು ಚಿತ್ರ ವಿಮರ್ಶಕ ತರಣ್ ಆದರ್ಶ್ ಟ್ವಿಟರ್ ನಲ್ಲಿ ಈ ವಿಷಯ ಹಂಚಿಕೊಂಡಿದ್ದಾರೆ.
‘ದಿ ಕಾಶ್ಮೀರ್ ಫೈಲ್ಸ್’ ಸಿನಿಮಾ ಈ ಹಿಂದೆ ಜನವರಿ 26ರಂದು ವಿಶ್ವಾದ್ಯಂತ ಬಿಡುಗಡೆಯಾಗಬೇಕಿತ್ತು. ಕಾಕತಾಳೀಯವಾಗಿ ಜ.26ರಂದು ದೇಶದ ಗಣರಾಜ್ಯೋತ್ಸವ ದಿವಾಗಿತ್ತು. ವಿಶ್ವದೆಲ್ಲಡೆ ಕೋವಿಡ್ ರೂಪಾಂತರಿ ವೈರಾಣು ಓಮಿಕ್ರಾನ್ ಸೋಂಕು ಹೆಚ್ಚಳದಿಂದಾಗಿ ಚಿತ್ರ ಬಿಡುಗಡೆ ದಿನಾಂಕವನ್ನು ಮುಂದೂಡಲಾಗಿತ್ತು. ಮಾರ್ಚ್ 11ರಂದು ದೇಶದ 630ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡಲಾಯಿತು. ಚಿತ್ರ ಬಿಡುಗಡೆಯಾದ ಬಳಿಕ ಚಿತ್ರ ವಿಮರ್ಶಕರು, ಸಿನಿಪ್ರಿಯರು ಹಾಗೂ ನಾನಾ ಸಂಘಟನೆಗಳು, ಸಂಘಸಂಸ್ಥೆಗಳು ಟೀಕೆ- ಪ್ರಶಂಸೆಯನ್ನು ಪಡೆದುಕೊಂಡಿದೆ.
‘ದಿ ಕಾಶ್ಮೀರ್ ಫೈಲ್ಸ್’ ಸಿನಿಮಾದಲ್ಲಿ ದೊಡ್ಡ ದೊಡ್ಡ ಸ್ಟಾರ್ ನಟರುಗಳು ಅಭಿನಯಿಸಿದ್ದಾರೆ. ಅನುಪಮ್ ಖೇರ್, ಮಿಥುನ್ ಚಕ್ರವರ್ತಿ, ದರ್ಶನ್ ಕುಮಾರ್ ಮತ್ತು ಪಲ್ಲವಿ ಜೋಶಿ ಪ್ರಮುಖ ಪಾತ್ರಗಳ ತಾರಾಗಣದಲ್ಲಿದ್ದಾರೆ.
“‘ದಿ ಕಾಶ್ಮೀರ್ ಫೈಲ್ಸ್’ ಸಿನಿಮಾ ನೋಡಲು ಬರುವವರು ಕಾಶ್ಮೀರದಲ್ಲಿ ನಡೆದ ದಂಗೆಯ ಸಂದರ್ಭದಲ್ಲಿ ರಾತ್ರೋರಾತ್ರಿ ಲಕ್ಷಾಂತರ ಪುರುಷರು, ಮಹಿಳೆಯರು ನಿರಾಶ್ರಿತರಾಗುವುದನ್ನು ಕಂಡು ದುಖಃ, ಭಯಪಡುವ, ಬೇಜಾರಾಗುವ ಅನುಭವ ಪಡೆಯುವರು. ಇದೊಂದು ಬಾಲಿವುಡ್ ಮಸಾಲೆಯ ಚಿತ್ರವಲ್ಲ. ಬದಲಿಗೆ ವಾಸ್ತವಾಗಿ ನಡೆದ ಘಟನೆಯನ್ನು ನಿರ್ದೇಶಕ ಅಗ್ನಿಹೋತ್ರಿ ಕಾಮನಬಿಲ್ಲಿನ ಬಣ್ಣದಲ್ಲಿ ತೋರಿಸಿಲ್ಲ. ಬದಲಿಗೆ ನಡೆದಿದ್ದನ್ನು ನಡೆದ ಹಾಗೆ ವಿವರಿಸಿದ್ದಾರೆ.” ಎಂದು ಚಿತ್ರವಿಮರ್ಶಕರು, ವಿವಿಧ ಮಾಧ್ಯಮದವರು ಹೇಳಿದ್ದಾರೆ.
ನಿರ್ದೇಶಕ ವಿವೇಕ್ ರಂಜನ್ ಅಗ್ನಿಹೋತ್ರಿ, ಕಾಶ್ಮೀರ ನರಮೇಧ ಹಾಗೂ 80- 90ರ ದಶಕದಲ್ಲಿ ಅನುಭವಿಸಿದ ಯಾತನೆಯಲ್ಲಿ ನಿರಾಶ್ರಿತರಾದ 700 ವಲಸಿಗರನ್ನು ಎರಡು ವರ್ಷಗಳ ಕಾಲ ಸಂದರ್ಶನ ನಡೆಸಿ ಈ ಕಥೆಯನ್ನು ಸಿದ್ದಪಡಿಸಿದ್ದಾಗಿ ದಿ ಕಾಶ್ಮೀರಿ ಫೈಲ್ಸ್ ಸಿನಿಮಾ ಪೋಸ್ಟರ್ ಫಸ್ಟ್ ಲುಕ್ ಬಿಡುಗಡೆ ಸಂದರ್ಭದಲ್ಲಿ ತಿಳಿಸಿದ್ದರು.
ಐಎಂಡಿಬಿ ರೇಟಿಂಗ್ ನಲ್ಲಿ 10/10 ಪಡೆದ ಸಿನಿಮಾ :
ಚಲನಚಿತ್ರಕ್ಕೆ ಸಿನಿಮಾ ವೀಕ್ಷಕರೇ ಒಂದರಿಂದ ಹತ್ತರ ತನಕ ನೀಡುವ ರೇಟಿಂಗ್ ಸರಾಸರಿಯ ಆಧಾರದ ಮೇಲೆ ಐಎಂಡಿಬಿ ಸಂಸ್ಥೆಯ ವೆಬ್ ಸೈಟ್ ನಲ್ಲಿ ಆಯಾ ಸಿನಿಮಾಗಳ ಎಷ್ಟರ ಮಟ್ಟಿಗೆ ನೋಡಬಹುದೆಂದು ಮೌಲ್ಯಮಾಪನ ಮಾಡಿರುವ ಫಲಿತಾಂಶವನ್ನು ಪ್ರಕಟಿಸಲಿದೆ. ಇಂತಹ ಐಎಂಡಿಬಿನಲ್ಲಿ 66 ಜನರು ರೇಟಿಂಗ್ ನಲ್ಲಿ “‘ದಿ ಕಾಶ್ಮೀರ್ ಫೈಲ್ಸ್’ ಸಿನಿಮಾಗೆ 10/10 ರೇಟಿಂಗ್ ನೀಡಿದ್ದಾರೆ.
ಕಾಶ್ಮೀರಿ ಪಂಡಿತರ ಮೇಲೆ ನಡೆಸಿದ ದೌರ್ಜನ್ಯ- ನರಮೇಧದ ಕಥೆ ಹೇಳುವ ಸಿನಿಮಾ :
1990ರಲ್ಲಿ ಕಾಶ್ಮೀರಿ ಪಂಡಿತರ ನರಮೇಧದ ಸುತ್ತ ಕಥೆ ಹೆಣೆದಿರುವ ಕಥೆಯ ಚಲನಚಿತ್ರ ದಿ ಕಾಶ್ಮೀರ್ ಫೈಲ್ಸ್. ಜಮ್ಮು ಮತ್ತು ಕಾಶ್ಮೀರದಲ್ಲಿನ ಕಾಶ್ಮೀರಿ ಪಂಡಿತರ ಬಲವಂತದ ವಲಸೆ ಹಾಗೂ ಆ ಸಮುದಾಯ ಎದುರಿಸುತ್ತಿರುವ ಸಮಸ್ಯೆಗಳು, ಅವರಿಗೆ ಆದ ಅನ್ಯಾಯ, ಆ ಸಮುದಾಯದ ಮೇಲೆ ನಡೆದ ದಬ್ಬಾಳಿಕೆವನ್ನು ಬಿಂಬಿಸುವ ಕಥೆಯನ್ನು ಈ ಸಿನಿಮಾ ಕಟ್ಟಿಕೊಟ್ಟಿದೆ.
1990 ಇಸವಿಯಲ್ಲಿ ನಡೆದ ಘಟನೆಯೇನು?
ಜಮ್ಮು ಮತ್ತು ಕಾಶ್ಮೀರದಲ್ಲಿ 1984ರಲ್ಲಿ ಫಾರೂಕ್ ಅಬ್ದುಲ್ಲಾ ಸರ್ಕಾರ ಉರುಳಿಸಿ ಅಧಿಕಾರಕ್ಕೆ ಬಂದ ಗುಲಾಮ್ ಮೊಹಮ್ಮದ್ ಷಾ, ಸರ್ವಾಧಿಕಾರಿ ಧೋರಣೆಯ ಮೂಲಕ ಅಧಿಕಾರ ಚಲಾಯಿಸಿದರು. ಇದನ್ನು ಕಂಡ ಸ್ಥಳೀಯ ಜನರು ವಲಸೆ ಹೋಗಲು ಪ್ರಾರಂಭಿಸಿದರು. 1987ರಲ್ಲಿ ಫಾರೂಕ್ ಅಬ್ದುಲ್ಲಾ ಅವರು, ಕಾಂಗ್ರೆಸ್ ಜೊತೆ ಸೇರಿ ಜೆಕೆಎಲ್‌ಎಫ್ ಶುರು ಮಾಡಿದರು. ಫಾರೂಕ್ ರಾಜೀನಾಮೆ ಕೊಟ್ಟ ನಂತರ ರಾಷ್ಟ್ರಪತಿ ಆಳ್ವಿಕೆ ಅಸ್ತಿತ್ವಕ್ಕೆ ಬಂದು, ಧಾರ್ಮಿಕ ಸಂಘರ್ಷ, ಕೋಮು ದ್ವೇಷದ ದಳ್ಳುರಿ ತಾರಕ್ಕೇರಿತ್ತು. 1990ರಿಂದ ಕಾಶ್ಮೀರಿ ಪಂಡಿತರ ಮೇಲೆ ಸಾಕಷ್ಟು ಹಿಂಸೆಗಳು ನಡೆದವು.