ಬೆಂಗಳೂರು, (www.bengaluruwire.com) : ವಿವೇಕ್ ಅಗ್ನಿಹೋತ್ರಿ ನಿರ್ದೇಶನದ “ದಿ ಕಾಶ್ಮೀರ್ ಫೈಲ್ಸ್” ಚಿತ್ರಪ್ರದರ್ಶನಕ್ಕೆ ಕರ್ನಾಟಕದಲ್ಲಿ ತೆರಿಗೆ ವಿನಾಯಿತಿ ನೀಡುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಘೋಷಿಸಿದ್ದಾರೆ.
ನಗರದ ಖಾಸಗಿ ಮಾಲ್ ನಲ್ಲಿನ ಥಿಯೇಟರ್ ನಲ್ಲಿ ಭಾನುವಾರ ರಾತ್ರಿ “ದಿ ಕಾಶ್ಮೀರ್ ಫೈಲ್ಸ್” ಚಿತ್ರ ವೀಕ್ಷಿಸಿದ ಬಳಿಕ, ಟ್ವೀಟ್ ಮಾಡಿರುವ ಅವರು, “ಜಮ್ಮು ಮತ್ತು ಕಾಶ್ಮೀರದಲ್ಲಿ 1990ರ ದಶಕದಲ್ಲಿ ಕಾಶ್ಮೀರಿ ಪಂಡಿತರ ನರಮೇಧ ಘಟನೆ, ಅವರ ಮೇಲೆ ನಡೆದ ದೌರ್ಜನ್ಯ ಹಾಗೂ ಅವರು ಆ ಪ್ರದೇಶದಿಂದ ನಿರ್ಗಮಿಸಿದ ಕುರಿತ ಸತ್ಯ ಘಟನೆ ಆಧಾರಿತ “ದಿ ಕಾಶ್ಮೀರ್ ಫೈಲ್ಸ್” ಚಲನಚಿತ್ರವನ್ನು ರಾಜ್ಯದಲ್ಲಿನ ಸಾಮಾನ್ಯ ಜನರು ವೀಕ್ಷಿಸಲು ಅನುವಾಗುವಂತೆ ಈ ಚಿತ್ರಕ್ಕೆ ತೆರಿಗೆ ವಿನಾಯಿತಿ ನೀಡುವುದಾಗಿ ತಿಳಿಸಿದ್ದಾರೆ.