ಬೆಂಗಳೂರು, (www.bengaluruwire.com) :
ವಿಶ್ವ ಮಹಿಳಾ ದಿನಾಚರಣೆ – 2022ರ ಅಂಗವಾಗಿ ಆರೋಹಣ ಸಂಸ್ಥೆ ಹಾಗೂ ಲೈಫ್ – ಪಾಸಿಟಿವ್ ಚೇಂಜ್ ಕ್ಲಿನಿಕ್ ಜಂಟಿಯಾಗಿ, “ಭಗಿನಿ” ಸಾಧನೆಗೆ ಸನ್ಮಾನ ಕಾರ್ಯಕ್ರಮವನ್ನು ಇತ್ತೀಚೆಗೆ ನಗರದಲ್ಲಿ ಆಯೋಜಿಸಿತ್ತು.
ಸೈಬರ್ ಕ್ರೈಮ್ ಎಸಿಪಿ ಗೀತ ಕುಲಕರ್ಣಿ ಅವರು ಮುಖ್ಯ
ಅತಿಥಿಯಾಗಿ ಭಾಗವಹಿಸಿ ಮಾತನಾಡುತ್ತಾ, ಮೊಬೈಲ್ ಫೋನ್‍ಗಳನ್ನು ಹಿತ ಮಿತವಾಗಿ ಬಳಸಿ, ಆನ್ ಲೈನ್‍ನಲ್ಲಿ ವ್ಯವಹರಿಸುವಾಗ ಎಚ್ಚರಿಕೆಯಿಂದಿರಿ. ಆಗಾಗ ಇಂಥ ಸಭೆಗಳನ್ನು ಏರ್ಪಡಿಸಿ ಜನರೊಂದಿಗೆ ಬೆರೆಯಿರಿ ಎಂದು ಕಿವಿಮಾತು ಹೇಳಿದರು.
ಮಹಿಳಾ ಉದ್ಯಮಿಹಾಗೂ ಆರೋಹಣ ಸಂಸ್ಥೆಯ ಗೌರವ ಅಧ್ಯಕ್ಷೆ ರೂಪನಾಗೇಂದ್ರ, ಕಳೆದ ನಾಲ್ಕು ವರ್ಷಗಳಿಂದ ಆರೋಹಣ ಸಂಸ್ಥೆಯ ನಡೆಸುತ್ತಿರುವ ಕಾರ್ಯಕ್ರಮಗಳ ಬಗ್ಗೆ ತಿಳಿಸಿ ಅವರು ನಡೆಸುತ್ತಿರುವ ಎಸ್ ಎಂಡ್ಎಸ್ ಎಂಟರ್‌ಪ್ರೈಸ್ ಕಂಪನಿಯಲ್ಲಿ ಮಹಿಳೆಯರಿಗೇ ಮಾನ್ಯತೆ ಎಂದರು.
ಲೈಫ್ – ಪಾಸಿಟಿವ್ ಚೇಂಜ್ ಕ್ಲಿನಿಕ್‍ನ ಡಾ.ರೇಖಾ ಕೃಷ್ಣ ಮಾತನಾಡಿ ಮಹಿಳೆ ಎಲ್ಲಾ ಕ್ಷೇತ್ರದಲ್ಲೂ ಇದ್ದಾಳೆ ಅವಳಿಗೆ ತನ್ನಕುಟುಂಬದ ಸಹಕಾರ ದೊರೆತರೆ ಇನ್ನೂ ಹೆಚ್ಚಿನದನ್ನು ಸಾಧಿಸುತ್ತಾಳೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಗಿನ್ನೀಸ್ ದಾಖಲೆ ಹೊಂದಿರುವ
ರಂಗಲಕ್ಷ್ಮಿ ಶ್ರೀನಿವಾಸ, ಚಲನಚಿತ್ರ ನಿರ್ಮಾಪಕಿ ಮಹಾಲಕ್ಷ್ಮಿ, ಕೋವಿಡ್ ಸಮಯದಲ್ಲಿ ಹಗಲೂ ರಾತ್ರಿ ದುಡಿದ ಉಷಾ ಹಾಗೂ ಪೌರಕಾರ್ಮಿಕರಾದ ಚಂದ್ರಮ್ಮ ಅವರುಗಳನ್ನು ಸನ್ಮಾನಿಸಲಾಯಿತು.
ಕ್ರೆಡೊ ಹೆಲ್ತ್ ನ ಡಾ. ಸ್ನೇಹಲತ ಅವರು ವಿಶೇಷ ಆಹ್ವಾನಿತರಾಗಿದ್ದರು. ಆರೋಹಣ ಸಂಸ್ಥೆಯ ಸ್ಥಾಪಕ ಸುಧೀಂದ್ರ, ಲೈಫ್ – ಪಾಸಿಟಿವ್ ಚೇಂಜ್ ಕ್ಲಿನಿಕ್‍ನ ಡಾ. ಪ್ರಿಯದರ್ಶಿನಿ, ಡಾ.ಶೃತಿ ಭಾಗವಹಿಸಿದ್ದರು.