ಬೆಂಗಳೂರು, (www.bengaluruwire.com) : ಕಾವೇರಿ ಮೂರನೇ ಹಂತ ಹಾಗೂ ನಾಲ್ಕನೇ ಹಂತದ 1ನೇ ಘಟ್ಟದಿಂದ ಬೆಂಗಳೂರಿಗೆ ನೀರು ಸರಬರಾಜು ಆಗುವ ಸ್ಥಳಗಳಲ್ಲಿ ಮಾ.3ರಂದು ಬೆಳಗ್ಗೆ 6 ಗಂಟೆಯಿಂದ ಮಧ್ಯರಾತ್ರಿ 12 ಗಂಟೆಯವರೆಗೆ ವಿವಿಧ ಕಾಮಗಾರಿ ಹಾಗೂ ತಾಂತ್ರಿಕ ಕಾರ್ಯಗಳನ್ನು ಕೈಗೊಳ್ಳುವ ಹಿನ್ನಲೆಯಲ್ಲಿ ನೀರು ಪೂರೈಕೆಯಲ್ಲಿ 18 ಗಂಟೆಗಳ ಕಾಲ ವ್ಯತ್ಯಯವಾಗಲಿದೆ (Water Supply Shutdown) ಎಂದು ಬೆಂಗಳೂರು ಜಲಮಂಡಳಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.
ನಗರದ ಬೆಂಗಳೂರು ಜಲಮಂಡಳಿಯ 3ನೇ ಹಂತದ ಜಲಶುದ್ಧೀಕರಣದ ಘಟಕದ ಕಡೆಗೆ ನೀರಿನ ಹರಿವನ್ನು ಸುಗಮಗೊಳಿಸಲು 300 ದಶಲಕ್ಷ ಲೀಟರ್ ಜಲಶುದ್ಧೀಕರಣದ ಘಟಕದ ಬಳಿ ಹೊಸದಾಗಿ ಅಳವಡಿಸುವ ಕಾಮಗಾರಿಯನ್ನು ಕೈಗೊಳ್ಳಲಿದೆ. ಕಾವೇರಿ 3ನೇ ಹಂತದ ಕಚ್ಚಾ ನೀರಿನ ಚಾನಲ್ ಬಳಿ ಇರುವ ಅಡಚಣೆಯನ್ನು ತೆರವುಗೊಳಿಸುವುದು. ಗುಬ್ಬಲಾಳ ಬಳಿಯಿರುವ ಕಾವೇರಿ ನಾಲ್ಕನೇ ಹಂತ ಮೊದಲ ಘಟ್ಟದ 1,350 ಮಿ.ಮೀ ವ್ಯಾಸದ ಕೊಳವೆಯನ್ನು ಬನಶಂಕರಿ 6ನೇ ಹಂತದ ಮುಂದುವರೆದ ಭಾಗದಲ್ಲಿ ಹೊಸದಾಗಿ ನಿರ್ಮಿಸಿರುವ 18 ದಶಲಕ್ಷ ಲೀ. ಸಾಮರ್ಥ್ಯದ ಜಲಸಂಗ್ರಹಾಗಾರಕ್ಕೆ ಜೋಡಿಸುವ ಕಾಮಗಾರಿಯನ್ನು ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ (BWSSB) ಹಮ್ಮಿಕೊಂಡಿರುವ ಹಿನ್ನಲೆಯಲ್ಲಿ ನಗರದ ಈ ಕೆಳಕಂಡ ಪ್ರದೇಶದಲ್ಲಿ ನೀರು ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ.
ರಾಜಧಾನಿಯ ಒಟ್ಟು 172 ಏರಿಯಾಗಳಲ್ಲಿ ನೀರು ಪೂರೈಕೆ ಬಂದ್ :
ಗಾಂಧಿನಗರ, ವಸಂತನಗರ, ಹೈಗ್ರೌಂಡ್ಸ್, ಸಂಪಂಗಿರಾಮನಗರ, ಲಾಲ್ ಬಾಗ್, ಟೌನ್ ಹಾಲ್, ಕಬ್ಬನ್ ಪೇಟೆ, ಸುಂಕಲ್ ಪೇಟೆ, ಕುಂಬಾರ್ ಪೇಟೆ, ಕಾಟನ್ ಪೇಟೆ, ಚಿಕ್ಕಪೇಟೆ, ಭಾರತಿನಗರ, ಸೇಂಟ್ ಚಾನ್ ರಸ್ತೆ, ಇನ್ ಫ್ಯಾಂಟ್ರಿ ರಸ್ತೆ, ಶಿವಾಜಿನಗರ, ಫ್ರೇಜರ್ ಟೌನ್ ಸೇವಾಠಾಣೆ ಅಡಿಯ ಪ್ರದೇಶಗಳು, ಎಂ.ಎಂ.ರಸ್ತೆ, ಬ್ಯಾಡರಹಳ್ಳಿ, ನೇತಾಜಿ ರಸ್ತೆ, ಕೋಲ್ಸ್ ರಸ್ತೆ, ಕಾಕ್ಸ್ ಟೌನ್, ವಿವೇಕಾನಂದ ನಗರ, ಮಾರುತಿ ಕಾಲೋನಿ, ಪಿ&ಟಿ ಕಾಲೋನಿ, ಡಿ.ಜೆ.ಹಳ್ಳಿ, ನಾಗವರ, ಸಮಾಧಾನ ನಗರ, ಪಿಳ್ಳಣ್ಣ ಗಾರ್ಡನ್ 1, 2 ಹಾಗೂ 3ನೇ ಹಂತ, ಲಿಂಗರಾಜಪುರ ಪ್ರದೇಶಗಳಲ್ಲಿ ಫೆ.3ರಂದು ನೀರು ಪೂರೈಕೆಯಲ್ಲಿ ವ್ಯತ್ಯಯವಿರಲಿದೆ.
ಚಾಮರಾಜಪೇಟೆ, ಬ್ಯಾಂಕ್ ಕಾಲೋನಿ, ಗವಿಪುರ, ಹನುಮಂತನಗರ, ಗಿರಿನಗರ, ಬ್ಯಾಟರಾಯನಪುರ, ನೀಲಸಂದ್ರ, ಆವಲಹಳ್ಳಿ, ಶ್ರೀನಗರ, ಬನಶಂಕರಿ, ಉತ್ತರಹಳ್ಳಿಯಲ್ಲಿಯೂ ನೀರು ಸರಬರಾಜು 18 ಗಂಟೆಗಳ ಕಾಲ ಲಭ್ಯವಿರುವುದಿಲ್ಲ.
ಅದೇ ರೀತಿ ಯಶವಂತಪುರ, ಮಲ್ಲೇಶ್ವರ, ಕುಮಾರಪಾರ್ಕ್, ಜಯಮಹಲ್, ಶೇಷಾದ್ರಿಪುರ, ಸದಾಶಿವನಗರ, ಪ್ಯಾಲೇಸ್ ಗುಟ್ಟಹಳ್ಳಿ, ಸಂಜಯನಗರ, ಡಾಲರ್ಸ್ ಕಾಲೋನಿ, ಗೆದ್ದಲಹಳ್ಳಿ, ಭೂಪಸಂದ್ರ, ಕಾವಲ್ ಭೈರಸಂದ್ರ, ಆರ್.ಟಿ.ನಗರ, ಆನಂದ ನಗರ, ಸುಲ್ತಾನ್ ಪಾಳ್ಯ, ಎಂ.ಜಿ.ರಸ್ತೆ, ಎಚ್.ಎ.ಎಲ್.2ನೇ ಹಂತ, ಇಂದಿರಾನಗರ, ಜೀವನ್ ಭೀಮಾ ನಗರ, ಹಲಸೂರು, ಜೋಗುಪಾಳ್ಯ, ದೀನಬಂಧುನಗರ, ಎಸ್.ಪಿ.ರೋಡ್, ಓ.ಟಿ.ಪೇಟೆ, ಜಾಲಿಮೊಹಲ್ಲಾ, ಪಿ.ವಿ.ಆರ್.ರಸ್ತೆ, ಕೆ.ಜಿ.ಹಳ್ಳಿ. ಬಿಟಿಎಂ ಲೇಔಟ್, ಮಡಿವಾಳ, ಡೈರಿಸರ್ಕಲ್, ಮಾರುತಿ ನಗರ, ನೇತಾಜಿನಗರ, ನಿಮ್ಹಾನ್ಸ್, ಗಣಪತಿ ನಗರ, ಎಂಇಐ ಕಾಲೋನಿ, ಲಕ್ಷ್ಮಿದೇವಿನಗರ, ಬಿಎಚ್ ಸಿಎಸ್ ಬಡಾವಣೆ, ಹ್ಯಾಪಿ ವ್ಯಾಲಿ, ಬಿಡಿಎ ಬಡಾವಣೆಯ ಕೆಲವು ಭಾಗಗಳಲ್ಲೂ ಕಾವೇರಿ ನೀರು ಪೂರೈಕೆಯಿರುವುದಿಲ್ಲ.
ಬೆಳ್ಳಂದೂರು, ಇಬ್ಬಲೂರು, ಕೋರಮಂಗಲ 1 ಮತ್ತು 4ನೇ ಬ್ಲಾಕ್, 4ನೇ ಸಿ ಬ್ಲಾಕ್ ಹಾಗೂ ಜೆ ಬ್ಲಾಕ್, ಮಿಲಿಟರಿ ಕಾಂಪಸ್, ಎಸಿಎಸ್ ಸೆಂಟರ್, ಸಿದ್ಧಾರ್ಥ ಕಾಲೋನಿ, ವೆಂಕಟಪುರ, ಟೀರ್ಸ್ ಕಾಲೊನಿ, ಜಕ್ಕಸಂದ್ರ, ಎಸ್.ಟಿ.ಬೆಡ್ ಪ್ರದೇಶ, ಅರಸು ಕಾಲೋನಿ, ತಿಲಕ್ ನಗರ, ಎನ್ ಇಐ ಬಡಾವಣೆ, ಈಸ್ಟ್ ಎಂಡ್ ಎ ಮತ್ತು ಬಿ ಮುಖ್ಯರಸ್ತೆಗಳು, ಕೃಷ್ಣಪ್ಪ ಬಡಾವಣೆ, ಬಿಎಚ್ ಇಎಲ್ ಬಡಾವಣೆ, ಬಿಟಿಎಂ 2ನೇ ಹಂತ, ಮೈಕೋ ಬಡಾವಣೆ, ಎನ್ಎಸ್ ಪಾಳ್ಯ, ಗುರುಪ್ಪನಪಾಳ್ಯ, ಸದ್ದುಗುಂಟೆ ಪಾಳ್ಯ, ಬಿಸ್ಮಿಲ್ಲಾ ನಗರ, ಜಯನಗರ 4ನೇ ಬ್ಲಾಕ್, ಜೆಪಿನಗರ 4 ಮತ್ತು 8ನೇ ಹಂತ, ಪುಟ್ಟೇನಹಳ್ಳಿ, ಜರಗನಹಳ್ಳಿ, ಆರ್ ಬಿಐ ಬಡಾವಣೆ, ಪಾಂಡುರಂಗ ನಗರ, ಅರಕೆರೆ, ದೊರೆಸಾನಿಪಾಳ್ಯ, ಕೊತ್ತನೂರು ದಿಣ್ಣೆ, ವೆಂಕಟಾದ್ರಿ ಬಡಾವಣೆ, ಚುಂಚಘಟ್ಟ, ಕೋಣನಕುಂಟೆ, ಎಸ್.ಬಿ.ಎಂ.ಬಡಾವಣೆ, ಸುಪ್ರೀಂ ರೆಸಿಡೆನ್ಸಿ ಬಡಾವಣೆ, ಲೇಕ್ ಸಿಟಿ, ನಾಡಮ್ಮ ಬಡಾವಣೆ, ರೋಟರಿ ನಗರ, ಕೋಡಿಚಿಕ್ಕನಹಳ್ಳಿ, ಎಚ್ಎಸ್ ಆರ್ ಬಡಾವಣೆ 1ರಿಂದ 7ನೇ ಸೆಕ್ಟರ್ ತನಕ ಇರುವ ಗೃಹ ಬಳಕೆದಾರರು ನೀರು ಪೂರೈಕೆ ನಿಲುಗಡೆ ಬಗ್ಗೆ ಗಮನಹರಿಸಬೇಕಿದೆ.
ಇನ್ನು ಅಗರ, ಮಂಗಮ್ಮನಪಾಳ್ಯ, ಮದೀನ ನಗರ, ಐಟಿಐ ಬಡಾವಣೆ, ಹೊಸಪಾಳ್ಯ, ಬಂಡೇಪಾಳ್ಯ, ಚಂದ್ರ ಬಡಾವಣೆ, ಬಿಇಎಂಎಲ್ ಬಡಾವಣೆ 1ರಿಂದ 5ನೇ ಹಂತದ ತನಕ, ನಾಗರಭಾವಿ, ಅನ್ನಪೂರ್ಣೇಶ್ವರಿ ನಗರ, ವಿಶ್ವೇಶ್ವರಯ್ಯ ಬಡಾವಣೆ, ಬಿಇಎಲ್ ಬಡಾವಣೆ, ಮಲ್ಲತ್ತಹಳ್ಳಿ, ರೈಲ್ವೇ ಲೇಔಟ್, ಉಲ್ಲಾಳ, ಡಿ-ಗ್ರೂಪ್ ಬಡಾವಣೆ, ಬ್ಯಾಡರಹಳ್ಳಿ, ರಾಜಾಜಿನಗರ, ಮಹಾಲಕ್ಷ್ಮಿ ಬಡಾವಣೆ, ರಾಜಾಜಿನಗರ 6ನೇ ಬ್ಲಾಕ್, ನಂದಿನಿ ಲೇಔಟ್, ಮಂಜುನಾಥ ನಗರ, ಬಸವೇಶ್ವರ ನಗರ, ಗುರುಗಂಟೆಪಾಳ್ಯ, ಶಂಕರ ನಗರ, ಶಂಕರಮಠ, ಪ್ರಕಾಶ್ ನಗರ, ಕುರುಬರಹಳ್ಳಿ, ಕಮಲಾನಗರ, ಕಾಮಾಕ್ಷಿಪಾಳ್ಯ, ಶಿವನಗರ, ಕೆಎಚ್ ಬಿ ಕಾಲೋನಿ, ಅಗ್ರಹಾರ ದಾಸರಹಳ್ಳಿ, ಪಾಪಯ್ಯ ಗಾರ್ಡನ್ ಮತ್ತು ಸುತ್ತಮುತ್ತಲಿನ ಪ್ರದೇಶಗಳ ಜನತೆಗೂ ನೀರು ಪೂರೈಕೆಯಲ್ಲಿನ ವ್ಯತ್ಯಯದಿಂದ ತೊಂದರೆಯಾಗುವ ಸಾಧ್ಯತೆಯಿದೆ. ತಾಂತ್ರಿಕ ಕಾರಣಗಳಿಂದ ಬೆಂಗಳೂರು ಜಲಮಂಡಳಿ ಕಾಮಗಾರಿ ಕೈಗೆತ್ತಿಕೊಂಡಿದ್ದು, ಈ ಸಂದರ್ಭದಲ್ಲಿ ಬಿಡಬ್ಲ್ಯುಎಸ್ ಎಸ್ ಬಿಗೆ ಸಹಕರಿಸುವಂತೆ ಪತ್ರಿಕಾ ಪ್ರಕಟಣೆಯಲ್ಲಿ ಕೋರಿದೆ.