ಬೆಂಗಳೂರು, (www.bengaluruwire.com) : ಹುಬ್ಬಳ್ಳಿಯಲ್ಲಿ ಇತ್ತೀಚೆಗೆ ನಡೆದ 66ನೇ ರೈಲ್ವೇ ಸಪ್ತಾಹ ಆಚರಣೆ ಕಾರ್ಯಕ್ರಮದಲ್ಲಿ ನೈಋತ್ಯ ರೈಲ್ವೆಯ ಪ್ರಧಾನ ವ್ಯವಸ್ಥಾಪಕರಾದ ಸಂಜೀವ್ ಕಿಶೋರ್ ಅವರು ಬೆಂಗಳೂರಿನ ವಿಭಾಗೀಯ ರೈಲ್ವೆ ವ್ಯವಸ್ಥಾಪಕರಾದ ಶ್ಯಾಮ್ ಸಿಂಗ್ ಅವರಿಗೆ ಸಮಗ್ರ ದಕ್ಷತಾ ಪ್ರಶಸ್ತಿ ಫಲಕವನ್ನು ಪ್ರದಾನ ಮಾಡಿದರು.
ಇದಲ್ಲದೆ, ನೈಋತ್ಯ ರೈಲ್ವೆಯ ಬೆಂಗಳೂರು ವಿಭಾಗವು 2021-22ರ ಅವಧಿಯಲ್ಲಿ ವಿವಿಧ ಕ್ಷೇತ್ರಗಳಲ್ಲಿನ ಅತ್ಯುತ್ತಮ ಕಾರ್ಯಕ್ಷಮತೆಗಾಗಿ ಸಮಗ್ರ ದಕ್ಷತಾ ಪ್ರಶಸ್ತಿ ಜೊತೆಗೆ ಒಟ್ಟಾರೆ 12 ದಕ್ಷತಾ ಫಲಕಗಳನ್ನು ಪಡೆದುಕೊಂಡಿದೆ.
ಹಿಂದಿನ ಆರ್ಥಿಕ ವರ್ಷದಲ್ಲಿ ಉತ್ತಮ ಸಾಧನೆ ತೋರಿದ ಬೆಂಗಳೂರು, ಮೈಸೂರು ಮತ್ತು ಹುಬ್ಬಳ್ಳಿ ವಿಭಾಗಗಳ ವಿವಿಧ ಘಟಕಗಳಿಗೆ ಆಯಾ ವಿಭಾಗದ ಪ್ರಧಾನ ಮುಖ್ಯಸ್ಥರ ಉಪಸ್ಥಿತಿಯಲ್ಲಿ ಪ್ರಧಾನ ವ್ಯವಸ್ಥಾಪಕರು, ಹುಬ್ಬಳ್ಳಿಯ ನೈಋತ್ಯ ರೈಲ್ವೆ ಕೇಂದ್ರ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ 21 ದಕ್ಷತೆಯ ಫಲಕಗಳನ್ನು ನೀಡಿದರು.