ಬೆಂಗಳೂರು, (www.bengaluruwire.com) : ರಾಜಧಾನಿಯ ಹೊರವಲಯದಲ್ಲಿರುವ ಬ್ರೂಕ್ ಫೀಲ್ಡ್ಸ್ ಬಡಾವಣೆಯ ನಾಗರೀಕರು (Brookefield Layout Residents) ಎಲ್ಲರೂ ಮೆಚ್ಚುವಂತಹ ಕಾರ್ಯವನ್ನು ನಿಶ್ಯಬ್ದವಾಗಿ ಮಾಡಿ ಮುಗಿಸಿ ಬೆಂಗಳೂರಿಗರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ಏನಪ್ಪಾ ಆ ಕೆಲಸ ಅಂದ್ಕೊಂಡ್ರಾ? ಬ್ರೂಕ್ ಫೀಲ್ಡ್ ಬಡಾವಣೆಯಲ್ಲಿ ಪಾದಚಾರಿಗಳು ಸುಲಲಿತವಾಗಿ ಓಡಾಡಲು ಹಾಗೂ ಫುಟ್ ಪಾತ್ ಮೇಲೆ ಬಿದ್ದ ಮಳೆನೀರು ಸರಾಗವಾಗಿ ಹರಿದು ಹೋಗುವಂತೆ ಗುಣಮಟ್ಟದ ಫುಟ್ ಪಾತ್ ಮಾಡಿದ್ದಾರೆ.
ಆಗಾಗ ಮಳೆನೀರಿನ ಮೋರಿಯನ್ನು ಸ್ವಚ್ಛ ಮಾಡಲು ಅನುವಾಗುವಂತೆ ಅಲ್ಲಲ್ಲ ಕಬ್ಬಿಣದ ಕಂಬಿ ಸರಳುಗಳುಳ್ಳ ಮೋರಿ ಮುಚ್ಚಳಗಳನ್ನು ಅಳವಡಿಸಿದ್ದಾರೆ. ಪಾದಚಾರಿ ಮಾರ್ಗದ ಅಂಚಿನಲ್ಲಿ ರಿಫ್ಲೆಕ್ಟರ್ ಗಳಿರುವ ಸಣ್ಣ ಸಣ್ಣ ಸಂಚಾರ ನಿಯಮದ ಕಂಬಗಳನ್ನು ನೆಟ್ಟಿದ್ದಾರೆ.
ಇಲ್ಲಿನ ಪ್ರಜ್ಞ ನಾಗರೀಕರು ಸ್ಥಳೀಯ ಆಡಳಿತ, ಫುಟ್ ಪಾತ್ ಅಭಿವೃದ್ಧಿ ಮಾಡುವುದನ್ನು ಕಾದು ಕೂರದೇ ನಾಗರೀಕರೇ ಜನಸಮೂಹ ನಿಧಿ (crowd-fund) ಸಂಗ್ರಹಿಸಿ ಆ ಮೂಲಕ ಆ ಬಜೆಟ್ ನಲ್ಲಿ ಸ್ಥಳೀಯಾಡಳಿತದ ಅನುಮತಿ ಪಡೆದು ಚೊಕ್ಕಟವಾಗಿ ಪಾದಚಾರಿ ಮಾರ್ಗ ನಿರ್ಮಿಸಿ ಎಲ್ಲರಿಗೂ ಮಾದರಿಯಾಗಿದ್ದಾರೆ.
ಈ ಬಗ್ಗೆ ಬ್ರೂಕ್ ಫೀಲ್ಡ್ಸ್ ಲೇಔಟ್ ರೆಸಿಡೆಂಟ್ಸ್ ಟ್ವಿಟರ್ ನಲ್ಲಿ ಈ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.