ಬೆಂಗಳೂರು, (www.bengaluruwire.com) ಮರದ ಪೀಠೋಪಕರಣಗಳೆಂದು ಪ್ಲೈವುಡ್ ಪೆಟ್ಟಿಗೆಯಲ್ಲಿ 4.82 ಟನ್ ರಕ್ತಚಂದನದ (Red Sandalwood) ದಿಮ್ಮಿಗಳನ್ನು ಅಕ್ರಮವಾಗಿ ವಿದೇಶಕ್ಕೆ ರಫ್ತು ಮಾಡಲು ಸಿದ್ಧವಾಗಿದ್ದ ಸರಕನ್ನು ಬೆಂಗಳೂರಿನ ಕಸ್ಟಮ್ಸ್ ಅಧಿಕಾರಿಗಳು (Bangalore Customs Officers) ಶನಿವಾರ ವಶಪಡಿಸಿಕೊಂಡಿದ್ದಾರೆ.
ಸುಮಾರು 2.41 ಕೋಟಿ ಮೌಲ್ಯದ ಈ ರಕ್ತಚಂದನವನ್ನು ಥೈವಾನ್ ದೇಶಕ್ಕೆ ಸಾಗಿಸಲು ಆರೋಪಿಗಳು ಹೊಂಚು ಹಾಕಿ ಪ್ಲೈವುಡ್ ಬಾಕ್ಸ್ ನಲ್ಲಿ ಹಾಕಿ ಮುಚ್ಚಿಟ್ಟಿದ್ದರು. ಇತರ ಮರದ ಪೀಠೋಪಕರಗಳ ಪೆಟ್ಟಿಗೆ ಮಧ್ಯೆ ಕೋಟ್ಯಾಂತರ ರೂಪಾಯಿ ಬೆಲೆ ಬಾಳುವ ರೆಡ್ ಸ್ಯಾಂಡಲ್ ಅನ್ನು “ಪೀಠೋಪಕರಣ” ಎಂದು ಘೋಷಿಸಿ ಕದ್ದು ವಿದೇಶ ಕಾಲ ಸಾಗಿಸಲು ಹೊಂಚಿ ಹಾಕಿದ್ದರು.
ಬೆಂಗಳೂರು ಕಸ್ಟಮ್ಸ್ ಅಧಿಕಾರಿಗಳು ದುಷ್ಕರ್ಮಿಗಳಿಂದ ರಕ್ತಚಂದನ ವಶಪಡಿಸಿಕೊಂಡು ಈ ಕೃತ್ಯದ ಮಾಸ್ಟರ್ ಮೈಂಡ್ ಸೇರಿದಂತೆ ಮೂವರನ್ನು ಬಂಧಿಸಿ, ಮುಂದಿನ ತನಿಖೆ ಕೈಗೊಂಡಿದ್ದಾರೆ.