ಬೆಂಗಳೂರು, (www.bengaluruwire.com) : ನಂದಿಬೆಟ್ಟ (Nandi Hills) ದಲ್ಲಿ ಟ್ರಕಿಂಗ್ ಮಾಡುವಾಗ 300 ಅಡಿ ಎತ್ತರದಿಂದ ಕಾಲು ಜಾರಿ ಜೆಳಗೆ ಬಿದ್ದು ಬ್ರಹ್ಮಗಿರಿ ಗುಡ್ಡ (Bramhagiri Rock)ದಲ್ಲಿ ಸಿಲುಕಿದ್ದ ಯುವ ಚಾರಣಿಗನನ್ನು (Trekker) ಭಾರತೀಯ ವಾಯುಪಡೆ ಭಾನುವಾರ ಸಂಜೆ ರಕ್ಷಿಸುವಲ್ಲಿ ಯಶಸ್ವಿಯಾಗಿದೆ.
ಫೆ.20 ರ ಸಂಜೆ 4.15ರ ಸುಮಾರಿಗೆ ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿಗಳು ಯಲಹಂಕದಲ್ಲಿರುವ ಭಾರತೀಯ ವಾಯುಪಡೆ (IAF) ಅಧಿಕಾರಿಗಳಿಗೆ ವಿಷಯ ತಿಳಿಸಿದಾಗ, ಐಎಎಫ್ ಅಧಿಕಾರಿಗಳು ಎಂಐ17 ಹೆಲಿಕಾಪ್ಟರ್ (Mi17 helicopter) ಬಳಸಿ, ಆ ದುರ್ಗಮ ಬ್ರಹ್ಮಗಿರಿ ಗುಡ್ಡದಲ್ಲಿ ಹೆಲಿಕಾಪ್ಟರ್ ಸ್ಥಳಕ್ಕೆ ಕೂಡಲೆ ಹೊರಟಿತು. ಆದರೆ ಟ್ರಕರ್ ಸಿಲುಕಿಕೊಂಡಿದ್ದ ಸ್ಥಳವನ್ನು ಸ್ಥಳೀಯ ಪೊಲೀಸರ ಮಾಹಿತಿ ಪಡೆದು ಪತ್ತೆಹಚ್ಚುವಲ್ಲಿ ಐಎಎಫ್ ಪಡೆ ಯಶಸ್ವಿಯಾದರೂ ಹೆಲಿಕಾಪ್ಟರ್ ಇಳಿಸಲು ಸಾಧ್ಯವಾಗಲಿಲ್ಲ.
ಬಳಿಕ ಎಂಐ17 ಹೆಲಿಕಾಪ್ಟರ್ ಒಳಗಿದ್ದ ಪೈಲೆಟ್ ಮತ್ತು ವಾಯುಪಡೆ ಅಧಿಕಾರಿಗಳ ಕಾರ್ಯಕ್ಷಮತೆಯಿಂದ ಬೆಟ್ಟ ಮೇಲಿಂದ ಬಿದ್ದು ಗಾಯಗೊಂಡು ಚಲಿಸಲು ಆಗದ ಸ್ಥಿತಿಯಲ್ಲಿದ್ದ ಟ್ರಕರನ್ನು ಮೇಲಕ್ಕೆತ್ತಿ ಹೆಲಿಕಾಪ್ಟರ್ ಗೆ ವರ್ಗಾಯಿಸುವಲ್ಲಿ ಯಶಸ್ವಿಯಾಯಿತು. ನಂತರ ಯಲಹಂಕ ವಾಯುನೆಲೆ ಕಡೆಗೆ ಹೆಲಿಕಾಪ್ಟರ್ ಹೊರಟಾಗ, ಅದರಲ್ಲಿದ್ದ ವೈದ್ಯಕೀಯ ಸಿಬ್ಬಂದಿ ಕೂಡಲೇ ಗಾಯಗೊಂಡಿದ್ದ ಟ್ರಕರ್ ಗೆ ಪ್ರಾಥಮಿಕ ಚಿಕಿತ್ಸೆ ನೀಡಿ, ಸಂಜೆ 6 ಗಂಟೆ ವೇಳೆಗೆ ಖಾಸಗಿ ಆಸ್ಪತ್ರೆಗೆ ದಾಖಲಿಸಿದರು.
ಈ ವಿಷಯವನ್ನು ರಕ್ಷಣಾ ಇಲಾಖೆ ತನ್ನ ಅಧಿಕೃತ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದೆ.