ನವದೆಹಲಿ, (www.bengaluruwire.com) : ಆದಾಯ ತೆರಿಗೆದಾರರಿಗೆ ಈ ಬಾರಿಯ ಕೇಂದ್ರ ಸರ್ಕಾರದ 2022-23 ಬಜೆಟ್ ಭಾಷಣದಲ್ಲಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಶಾಕ್ ನೀಡುವ ಸಾಧ್ಯತೆಯಿದೆ.
ಕೇಂದ್ರ ಸರ್ಕಾರ, ತೆರಿಗೆದಾರರ ಆದಾಯ ತೆರಿಗೆ ವಿವರ ಸಲ್ಲಿಕೆ (ITR)ಗೂ ಆದಾಯ ತೆರಿಗೆ ಇಲಾಖೆ ಶುಲ್ಕ ವಿಧಿಸುವ ಚಿಂತನೆ ನಡೆಸಿದೆ.
ಹಲವು ಪ್ರಕರಣಗಳಲ್ಲಿ ಕೇಂದ್ರ ಸರ್ಕಾರಕ್ಕೆ ಸಾಮಾನ್ಯ ಜನರು ಆದಾಯ ತೆರಿಗೆ ವಿವರ ಸಲ್ಲಿಸಿದರೂ ಯಾವುದೇ ತೆರಿಗೆ ಸರ್ಕಾರದ ಖಜಾನೆಗೆ ಸಲ್ಲಿಕೆಯಾಗುತ್ತಿಲ್ಲ. ಪ್ರತಿ ಐಟಿಆರ್ ಸಲ್ಲಿಕೆಯಾದಾಗಲೂ ಆದಾಯ ತೆರಿಗೆ ಇಲಾಖೆ ಸಾಕಷ್ಟು ಆಡಳಿತ ಖರ್ಚು ಎದುರಿಸುತ್ತೆ. ತೆರಿಗೆ ವಿವರ ತಿದ್ದುಪಡಿ, ಸೂಕ್ತ ವಿಭಾಗಕ್ಕೆ ಕಳುಹಿಸುವ ಪ್ರಕ್ರಿಯೆ ಸೇರಿದಂತೆ ಇನ್ನಿತರ ಕಾರ್ಯಕ್ಕೆ ಸರ್ಕಾರಕ್ಕೆ ಹೊರೆಯಾಗುತ್ತಿದೆ.
ಇಷ್ಟಾದರೂ ಆದಾಯ ತೆರಿಗೆ ಇಲಾಖೆ ಇಷ್ಟು ಖರ್ಚು-ವೆಚ್ಚವನ್ನು ತೆರಿಗದಾರರ ಮೇಲೆ ಯಾವುದೇ ಶುಲ್ಕ ವಿಧಿಸುತ್ತಿರಲಿಲ್ಲ. ಈ ಹೊರೆಯನ್ನು ತಪ್ಪಿಸಲು ಕೇಂದ್ರ ಸರ್ಕಾರ 2022-23 ನೇ ಸಾಲಿನ ಬಜೆಟ್ ನಲ್ಲಿ “ತೆರಿಗೆ ವಿವರ ಸಲ್ಲಿಕೆ ಶುಲ್ಕ” ವಿಧಿಸುವ ಬಗ್ಗೆ ಪ್ರಕಟಿಸುವ ಸಾಧ್ಯತೆಯಿದೆ.
ವೈಯುಕ್ತಿಕ ತೆರಿಗೆದಾರರಿಗೆ ಕನಿಷ್ಠ 10 ಸಾವಿರ ಶುಲ್ಕ, ಸಂಸ್ಥೆಗಳಿಗೆ 5 ಸಾವಿರ ಹಾಗೂ ಕಂಪನಿಗಳಿಗೆ ಕನಿಷ್ಠ 10 ಸಾವಿರ ಐಟಿಆರ್ ವಿವರ ಸಲ್ಲಿಕೆ ಶುಲ್ಕ ವಿಧಿಸುವ ನಿರೀಕ್ಷೆಯಿದೆ ಎಂದು ಸ್ಟಡಿ ಸರ್ಕಲ್ ವೆಬ್ ಸೈಟ್ ನಲ್ಲಿ ತಿಳಿಸಿದೆ.
ದೇಶದಲ್ಲಿ ಸದ್ಯ 6.32 ಕೋಟಿ ಆದಾಯ ತೆರಿಗೆದಾರರಿದ್ದಾರೆ. ಈ ಆದಾಯ ತೆರಿಗೆ ಪಾವತಿದಾರರಿಂದ ಶುಲ್ಕ ಸಂಗ್ರಹಿಸಿದರೆ ವಾರ್ಷಿಕ 3 ಸಾವಿರ ಕೋಟಿ ರೂ. ಆದಾಯ ರೂಪದಲ್ಲಿ ಆದಾಯ ತೆರಿಗೆ ಇಲಾಖೆಗೆ ಹರಿದು ಬರುವ ನಿರೀಕ್ಷೆಯಿದೆ. ಈ ಶುಲ್ಕ ವಿಧಿಸುವಿಕೆಯಿಂದ ಅನವಶ್ಯಕವಾಗಿ ಕೆಲವರು ಐಟಿ ಇಲಾಖೆಗೆ ಐಟಿಆರ್ ಸಲ್ಲಿಸುವುದನ್ನು ತಪ್ಪಿಸಬಹುದು ಎಂಬ ಲೆಕ್ಕಾಚಾರ ಇಲಾಖೆಯದ್ದಾಗಿದೆ ಎನ್ನಲಾಗಿದೆ.