ಬೆಂಗಳೂರು, ಡಿ.27 (www.bengaluruwire.com) : ನೈಟ್ ಕರ್ಪ್ಯೂ ನಾಳೆಯಿಂದ ಆರಂಭವಾಗಲಿದ್ದು ಮೆಟ್ರೋ ಸೇವೆಯಲ್ಲಿ ಮೆಟ್ರೊ ರಾತ್ರಿ ಸೇವೆಯಲ್ಲಿ ಎರಡು ರೈಲು ಓಡಾಟಗಳ ನಡುವಿನ ಅಂತರದ ಅವಧಿ ಹೆಚ್ಚಳ ಮಾಡಲಿದೆ.
ಕೋವಿಡ್ ನಿಯಂತ್ರಣ ಮಾಡುವ ಹಿನ್ನಲೆಯಲ್ಲಿ ರಾಜ್ಯ ಸರ್ಕಾರ ನಾಳೆಯಿಂದ ಜ.7ರವರೆಗೆ ನೈಟ್ ಕರ್ಪ್ಯೂ ಜಾರಿಯಲ್ಲಿರಲಿದೆ. ಇದರಿಂದಾಗಿ ಸಾರ್ವಜನಿಕವಾಗಿ ಹೊಸ ವರ್ಷದ ಆಚರಣೆಯ ಸಂಭ್ರಮಕ್ಕೂ ಕಡಿವಾಣ ಹಾಕಿದಂತಾಗಿದೆ.
ನೈಟ್ ಕರ್ಫ್ಯೂ ಹಿನ್ನಲೆಯಲ್ಲಿ ಜನರ ಓಡಾಟ ಕಡಿಮೆಯಾಗುವ ಕಾರಣಕ್ಕೆ ನಮ್ಮ ಮೆಟ್ರೊ ರಾತ್ರಿ 10 ಗಂಟೆಯ ನಂತರ ರೈಲು ಸಂಚಾರದ ಆವರ್ತನವನ್ನು ಈಗಿನ 10 ನಿಮಿಷಕ್ಕೊಂದು ಮೆಟ್ರೊ ಓಡಾಟವನ್ನು 15 ನಿಮಿಷಕ್ಕೆ ಕಡಿಮೆ ಮಾಡಲಿದೆ. ಅಲ್ಲದೆ ಪ್ರಯಾಣಿಕರ ಓಡಾಟ ಹೆಚ್ಚಳವಾದರೆ ರೈಲುಗಳ ಓಡಾಟದ ನಡುವಿನ ಅವಧಿಯನ್ನು ಕಡಿಮೆ ಮಾಡಿ, ಆವರ್ತನವನ್ನು ಹೆಚ್ಚು ಮಾಡಲಿದೆ ಎಂದು ನಮ್ಮ ಮೆಟ್ರೊ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.
ಆದರೆ ಬೆಳಗ್ಗೆ 5 ರಿಂದ ರಾತ್ರಿ 11ರ ವರೆಗೆ ಕೊನೆ ಟರ್ಮಿನಲ್ ನಿಂದ ಹೊರಡುವ ಮೆಟ್ರೊ ಅವಧಿಯಲ್ಲಿ ಯಾವುದೇ ಬದಲಾವಣೆಯಿಲ್ಲ ಎಂದು ನಮ್ಮ ಮೆಟ್ರೊ ಅಧಿಕಾರಿಗಳು ಹೇಳಿದ್ದಾರೆ.