ಬೆಂಗಳೂರಿನ ಉಲ್ಲಾಳ ಜ್ಞಾನಭಾರತಿ ಕ್ವಾಟರ್ಸ್ ಬಳಿ ನೋಂದಣಿಯಾಗದ ಶೋರೂಮ್ ನಿಂದ ಆಗಷ್ಟೆ ತಂದ ಕಾರು ಫುಟ್ ಪಾತ್ ಮೇಲಿನ ಕಾರಿಗೆ ಭಾನುವಾರ ಸಂಜೆ ಡಿಕ್ಕಿ ಹೊಡೆದ ರಭಸಕ್ಕೆ ಕಾರಿನ ಎಂಜಿನ್ ನುಜ್ಜುಗುಜ್ಜಾಗಿದೆ. ಅದೃಷ್ಟವಶಾತ್ ವಾಹನ ಚಾಲಕನಿಗೆ ಸಣ್ಣಪುಟ್ಟ ಗಾಯಗಳಾಗಿದೆ. ವಾಹನ ಚಾಲಕನ ನಿಯಂತ್ರಣ ತಪ್ಪಿ ಕಂಬಕ್ಕೆ ಡಿಕ್ಕಿ ಹೊಡೆದ ಸಂದರ್ಭದಲ್ಲಿ ವೃದ್ಧೆಯೊಬ್ಬರಿಗೆ ವಾಹನ ಕೊಂಚ ಡಿಕ್ಕಿ ಹೊಡೆದು ಅವರನ್ನು ಆಸ್ಪತ್ರೆಗೆ ಚಿಕಿತ್ಸೆಗಾಗಿ ಕೊಂಡೊಯ್ದರು ಎಂದು ಸ್ಥಳೀಯರು ಹೇಳಿದ್ದಾರೆ.
ವಾರಾಂತ್ಯದಲ್ಲಿ ಜ್ಞಾನಭಾರತಿ ಕ್ವಾಟರ್ಸ್ ಬಳಿ ಮುಖ್ಯರಸ್ತೆಯಲ್ಲಿ ವಾಹನಗಳ ಓಡಾಟ ಹಾಗೂ ಪಾದಚಾರಿಗಳ ಸಂಚಾರವಿರುತ್ತೆ. ಇಂದು ಕಾರು ಅಪಘಾತವಾದ ಸಂದರ್ಭದಲ್ಲಿ ಫುಟ್ ಪಾತ್ ಮೇಲೆ ಅಷ್ಟಾಗಿ ಜನ ಸಂಚಾರವಿರಲಿಲ್ಲ.