ಪ್ರಸನ್ನಕುಮಾರ್ ಕೆರಗೋಡು ರಚಿಸಿರುವ ವನಿತಾ ರಾಜೇಶ್ ಅಭಿನಯದ ಏಕವ್ಯಕ್ತಿ ರಂಗ ಪ್ರಯೋಗ “ಮಧುರ ಮಂಡೋದರಿ” ನಾಟಕವು ಬೆಂಗಳೂರಿನ ರಂಗಶಂಕರ ದಲ್ಲಿ ಇದೇ ಡಿಸೆಂಬರ್ 9 ರಂದು ಪ್ರದರ್ಶನವಾಗುತ್ತಿದೆ.
ಹೆಣ್ಣಿನ ಆಂತರ್ಯದ ತುಮುಲಗಳು ಮತ್ತು ಅವಳ ಕಾಲಾತೀತ ಬವಣೆಗಳ ನಿರೂಪಿಸುವ ನಾಟಕ ಇದಾಗಿದ್ದು,
ಈಗಾಗಲೇ ಹಲವಾರು ಯಶಸ್ವಿ ಪ್ರದರ್ಶನಗಳನ್ನು ಕಂಡಿದೆ. ಪುರಾಣದ ಮಂಡೋದರಿ ಮತ್ತು ಸಮಕಾಲೀನ ಮಹಿಳೆ ಮಧುರ ಳ ಒಳಕುದಿಯ ಭಾವಾಭಿವ್ಯಕ್ತಿಯನ್ನು ಕಟ್ಟಿಕೊಡುವ ಈ ನಾಟಕ ಉತ್ತಮ ಸದಭಿರುಚಿವುಳ್ಳದ್ದಾಗಿದೆ.
ಪುರಾಣ ಮತ್ತು ಸಮಕಾಲೀನ ಮಹಿಳೆಯರಿಬ್ಬರ ಒಳಮನಸ್ಸು ಮತ್ತು ಆರ್ಯ-ದ್ರಾವಿಡ ಸಂಸ್ಕೃತಿಯ ಸಂಘರ್ಷವನ್ನು ಅನಾವರಣಗೊಳಿಸುವ ಈ ಈ ನಾಟಕದ ಸಂಗೀತವನ್ನು ಸುಬ್ರಹ್ಮಣ್ಯ ಮೈಸೂರು,
ರಂಗಸಜ್ಜಿಕೆಯನ್ನು ಹೆಚ್.ಕೆ.ವಿಶ್ವನಾಥ್, ಹಾಗೂ ವಿನ್ಯಾಸ ಮತ್ತು ನಿರ್ದೇಶನ ಮಧು ಮಳವಳ್ಳಿ ನಿರ್ವಹಿಸಲಿದ್ದಾರೆ.