ಬೆಂಗಳೂರು, (www.bengaluruwire.com) :
ನೈಋತ್ಯ ರೈಲ್ವೆಯು ನಗರದ ಯಶವಂತಪುರ, ಬೆಂಗಳೂರು ದಂಡು ಮತ್ತು ಕೃಷ್ಣರಾಜಪುರಂ ರೈಲು ನಿಲ್ದಾಣಗಳಲ್ಲಿ ಪ್ರಯಾಣಿಕರು ಬಳಸಿ ಕಸದ ಡಬ್ಬಿಗೆ ಹಾಕುವ ನೀರಿನ ಪ್ಲಾಸ್ಟಿಕ್ ಬಾಟೆಲ್ ಗಳನ್ನು ಸ್ಥಳದಲ್ಲೇ ಪುಡಿಮಾಡಲು ತಲಾ ಒಂದೊಂದರಂತೆ ಮೂರು ಯಂತ್ರಗಳನ್ನು ಸ್ಥಾಪಿಸಿದೆ.
ಈ ಪ್ರತಿ ಯಂತ್ರವು ಗಂಟೆಗೆ 500 ಪೆಟ್ ಬಾಟಲಿಗಳನ್ನು ಕತ್ತರಿಸುತ್ತದೆ. ಹಾಗೂ 12 ರಿಂದ 16 ಸೆಂ.ಮೀ ಗಾತ್ರದ ಸಣ್ಣ ತುಣುಕುಗಳಾಗಿ ಪರಿವರ್ತಿಸುತ್ತದೆ. ಈ ಪ್ಲಾಸ್ಟಿಕ್ ತುಣುಕುಗಳನ್ನು ಮರುಬಳಕೆ ಮಾಡಬಹುದು. 2 ಲೀಟರ್ ವರೆಗಿನ ಗಾತ್ರದ ಪೆಟ್ ಬಾಟಲಿಗಳನ್ನು ಯಂತ್ರಗಳಿಗೆ ನೀಡಬಹುದು.
ಈ ಯಂತ್ರಗಳು ವಾರ್ಷಿಕವಾಗಿ 42 ಟನ್‌ಗಳಷ್ಟು ಇಂಗಾಲದ ಡೈಆಕ್ಸೈಡ್ ಹೊರಸೂಸುವಿಕೆಯನ್ನು ಉಳಿಸುವ ಮೂಲಕ ರೈಲ್ವೆಯ ಹಸಿರು ಉಪಕ್ರಮವನ್ನು ಬೆಂಬಲಿಸುತ್ತವೆ. ಅಲ್ಲದೆ, 1,000 ಲೀಟರ್‌ಗಳಷ್ಟು ಹೆಚ್ಚುವರಿ ಇಂಧನ ದಹನವನ್ನು ಉಳಿಸುತ್ತವೆ. ಈ ಪ್ಲಾಸ್ಟಿಲ್ ಬಾಟೆಲ್ ಮರುಬಳಕೆಯಿಂದಾಗಿ 52,000 ಲೀಟರ್ ನೀರು ಉಳಿತಾಯವಾಗುತ್ತದೆ ಎಂದು ನೈಋತ್ಯ ರೈಲ್ವೆ ತಿಳಿಸಿದೆ.
ಕಾರ್ಪೊರೇಟ್ ಸಾಮಾಜಿಕ ಜವಾಬ್ದಾರಿ (CSR) ಉಪಕ್ರಮದ ಅಡಿಯಲ್ಲಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಈ ಯಂತ್ರಗಳನ್ನು ಒದಗಿಸಿದೆ.